Homeಮುಖಪುಟಅಲ್ಪಸಂಖ್ಯಾತ ವಿದ್ಯಾರ್ಥಿ ವೇತನದಲ್ಲಿ 144 ಕೋಟಿ ರೂ. ಹಗರಣ: 830 ನಕಲಿ ಸಂಸ್ಥೆಗಳ ವಿರುದ್ಧ ಎಫ್‌ಐಆರ್

ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನದಲ್ಲಿ 144 ಕೋಟಿ ರೂ. ಹಗರಣ: 830 ನಕಲಿ ಸಂಸ್ಥೆಗಳ ವಿರುದ್ಧ ಎಫ್‌ಐಆರ್

- Advertisement -
- Advertisement -

ಅಲ್ಪ ಸಂಖ್ಯಾತ ವಿದ್ಯಾರ್ಥಿ ವೇತನ ಹಗರಣಕ್ಕೆ ಸಂಬಂಧಪಟ್ಟಂತೆ ತನಿಖೆ ಪ್ರಾರಂಭಿಸಿರುವ ಕೇಂದ್ರೀಯ ತನಿಖಾ ದಳ (ಸಿಬಿಐ), 830 ನಕಲಿ ಸಂಸ್ಥೆಗಳು ಸರ್ಕಾರದಿಂದ ಹಣವನ್ನು ಪಡೆದಿವೆ ಎಫ್‌ಐಆರ್‌ನಲ್ಲಿ ದಾಖಲಿಸಿದೆ.

2017ರಿಂದ 2022ರ ಅವಧಿಯಲ್ಲಿ ಅಲ್ಪ ಸಂಖ್ಯಾತ ವಿದ್ಯಾರ್ಥಿ ವೇತನ ಯೋಜನೆಯಡಿಯಲ್ಲಿ 830 ನಕಲಿ ಶಿಕ್ಷಣ ಸಂಸ್ಥೆಗಳು ಲಾಭ ಪಡೆದಿದ್ದು, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ ಸುಮಾರು 144.83 ಕೋಟಿ ನಷ್ಟ ಉಂಟು ಮಾಡಿವೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಪ್ರಕರಣ ಕೈಗೆತ್ತಿಕೊಂಡಿರುವ ಸಿಬಿಐ, ಬ್ಯಾಂಕ್‌ಗಳು, ಶಿಕ್ಷಣ ಸಂಸ್ಥೆಗಳು, ಅಪರಿಚಿತ ವ್ಯಕ್ತಿಗಳ ವಿರುದ ಎಫ್‌ಐಆರ್ ದಾಖಲಿಸಿದೆ.

ಸರ್ಕಾರವನ್ನು ವಂಚಿಸಿದ ಆರೋಪದ ಮೇಲೆ 830 ಸಂಸ್ಥೆಗಳಲ್ಲಿ 700ಕ್ಕೂ ಹೆಚ್ಚು ಸಂಸ್ಥೆಗಳು ಐದು ರಾಜ್ಯಗಳಲ್ಲಿ ಕಂಡುಬಂದಿವೆ. ಅಸ್ಸಾಂ (ಇಂತಹ 225 ಸಂಸ್ಥೆಗಳು) ಅಗ್ರಸ್ಥಾನದಲ್ಲಿದ್ದು, ಕರ್ನಾಟಕ (162) ಮತ್ತು ಉತ್ತರ ಪ್ರದೇಶ (154) ನಂತರದ ಸ್ಥಾನದಲ್ಲಿವೆ. ಈ ಸಂಸ್ಥೆಗಳನ್ನು ರಾಷ್ಟ್ರೀಯ ಸ್ಕಾಲರ್‌ಶಿಪ್ ಪೋರ್ಟಲ್‌ನಲ್ಲಿ ನೋಂದಾಯಿಸಲಾಗಿದೆ ಮತ್ತು “ಕಾರ್ಯನಿರ್ವಹಣೆಯಿಲ್ಲದ ಅಥವಾ ನಕಲಿ ಅಥವಾ ಭಾಗಶಃ ನಕಲಿ” ಎಂದು ಎಫ್‌ಐಆರ್ ಹೇಳಿದೆ.

ವಿದ್ಯಾರ್ಥಿವೇತನ ಯೋಜನೆ ಅಡಿಯಲ್ಲಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಜುಲೈ 10ರಂದು ಸಚಿವಾಲಯ ದೂರವೊಂದನ್ನು ದಾಖಲಿಸಿತ್ತು 21 ರಾಜ್ಯಗಳ ಸುಮಾರು 1,572 ಸಂಸ್ಥೆಗಳನ್ನು ಪರಿಶೀಲನೆಗೆ ಒಳಪಡಿಸಿತ್ತು. ಇದರಲ್ಲಿ 830 ಸಂಸ್ಥೆಗಳು ನಕಲಿಯಾಗಿರುವುದು ಕಂಡುಬಂದಿತ್ತು.

ಭಾರತೀಯ ದಂಡ ಸಂಹಿತೆ 120ಬಿ (ಕ್ರಿಮಿನಲ್ ಪಿತೂರಿ), 420 (ವಂಚನೆ), 468 (ನಕಲಿ), 471 (ನಿಜವಾದ ನಕಲಿ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ಬಳಸುವುದು) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read