ಜನಾನುರಾಗಿ ಪತ್ರಕರ್ತ ರವೀಶ್ಕುಮಾರ್ ಮ್ಯಾಗ್ಸ್ಸೆಸ್ಸೆ ಪ್ರಶಸ್ತಿ ಸ್ವೀಕರಿಸಲು ಇಲ್ಲಿಂದ ಮನಿಲಾಕ್ಕೆ ಹೊರಟ ಸಂದರ್ಭದಲ್ಲಿ ಅವರ ವಿರುದ್ಧ ಮತ್ತೆ ಕೆಲವರು ಅಪಪ್ರಚಾರ ಶುರು ಮಾಡಿದರು. 2013ರ ತಿರುಚುದ ವಿಡಿಯೋ ಬಳಸಿ ರವೀಶ್ಕುಮಾರ್ ಹಿಪಾಕ್ರೈಟ್ ಅಂದರೆ ಆಷಾಢಭೂತಿ ಎಂದೆಲ್ಲ ಸುಳ್ಳನ್ನು ಹರಡಲಾಗುತ್ತಿದೆ.
ಮಿಥ್ಯ: 2013ರಲ್ಲಿ ಜಿಡಿಪಿ ಬೆಳವಣಿಗೆ ಕುಸಿದಿದ್ದರ ಕುರಿತು ರವೀಶ್ಕುಮಾರ್ ನಡೆಸಿಕೊಟ್ಟ ಕಾರ್ಯಕ್ರಮದ 35 ಸೆಕೆಂಡುಗಳ ವಿಡಿಯೋ ಕ್ಲಿಪ್ ಅನ್ನು ಆ ಅಪಪ್ರಚಾರದ ಪ್ರೊಪಗಂಡಾ ತೊರಿಸುತ್ತೆ. ಪಕ್ಕದಲ್ಲೇ 2019ರ ಜಿಡಿಪಿ ಕುಸಿತ ಕುರಿತು ಮಾತಾಡಿದ್ದನ್ನೂ ಇದು ತೋರಿಸುತ್ತದೆ. ಆದರೆ, 2013ರ ವಿಡಿಯೋ ಕ್ಲಿಪ್ ತಿರುಚಲ್ಪಟ್ಟಿದ್ದು ಎಂದು ಅವತ್ತೇ ಅಲ್ಟ್ ನ್ಯೂಸ್ ಸಾಬೀತು ಮಾಡಿತ್ತು. ಈ ತಿರುಚಿದ ವಿಡಿಯೋದಲ್ಲಿ 2013ರಲ್ಲಿ (ಯುಪಿಎ ಅವಧಿ) ಜಿಡಿಪಿ ಶೇ. 5ಕ್ಕೆ ಇಳಿದಿದ್ದನ್ನು ರವೀಶ್ ಟೀಕಿಸಲೇ ಇಲ್ಲ ಎಂದು ತೋರಿಸುವ ಯತ್ನ ಮಾಡಲಾಗಿತ್ತು. ರವೀಶ್ ಕುಮಾರ್ ರವರು ಟೀಕಿಸಿದ ಭಾಗವನ್ನು ಎಡಿಟ್ ಮಾಡಿ ತೆಗೆದು ಹಾಕಲಾಗಿದೆ ಮತ್ತು ‘ಶೇ. 5ಕ್ಕಿಂತ ಜಿಡಿಪಿ ಕಡಿಮೆ ಇರುವ ಎಷ್ಟು ದೇಶಗಳಿಲ್ಲ? ಭಾರತವೂ ಸುಧಾರಿಸುತ್ತದೆ’ ಎಂದು ತಿರುಚಲಾಗಿತ್ತು. ಆದರೆ ಸತ್ಯವೇ ಬೇರೆಯಿದೆ.
इन्हें सुनिए और इनका असली सच समझिए
इनको GDP से, देश से, युवाओं से, रोजगार से कहीं कोई लेना देना नहीं
शुद्ध धंधेबाज हैं, आज इनके चोर माई बाप जेल में जा रहे हैं, इसलिए विधवा विलाप चालू हैं pic.twitter.com/rxiZj6Rp1T
— Kapil Mishra (@KapilMishra_IND) September 5, 2019
ಸತ್ಯ: 2013 ಮತ್ತು 2019ರ ಆರ್ಥಿಕ ಕುಸಿತು ರವೀಶ್ ಮಾತು ಆರಂಭವಾಗುವುದೇ ಒಂದೇ ಶೈಲಿಯಿಂದ. ಆಗಲೂ ಅವರು ಸರ್ಕಾರವನ್ನು ಟೀಕಿಸಿದ್ದರು. ಈಗಲೂ ಟೀಕಿಸಿದ್ದಾರೆ. ಆದರೆ ಆಗ ಸರ್ಕಾರವನ್ನು ಟೀಕಿಸಿರಲೇ ಇಲ್ಲ ಎಂದು ತಿರುಚಿದ ವಿಡಿಯೋ ಇಟ್ಟುಕೊಂಡು ಕೆಲವರು ಹಾರಾಡುತ್ತಿದ್ದಾರೆ.
ವಿಚಿತ್ರ ಎಂದರೆ, ಈ ತಿರುಚಿದ ವಿಡಿಯೋ ಇಟ್ಟುಕೊಂಡೇ ಕೆಲವು ಪತ್ರಕರ್ತರೂ ಟ್ವೀಟ್ ಮಾಡುವ ಮಟ್ಟಕ್ಕೆ ಇಳಿದಿದ್ದಾರೆ!
ಅಲ್ಟ್ ನ್ಯೂಸ್ ಅವತ್ತೂ ಸತ್ಯವನ್ನು ತೋರಿಸಿತ್ತು, ಈಗಲೂ ತೋರಿಸಿದೆ. ಎರಡೂ ವರ್ಸನ್ಗಳ ವಿಡಿಯೋ ತುಣುಕುಗಳನ್ನು ನೀವೇ ಗಮನಿಸಿ….
अर्थ या अनर्थव्यवस्था “@ndtv: Govt lowers GDP growth estimates for 2012-13 to 5%”
— ravish kumar (@ravishndtv) February 7, 2013
(ಕೃಪೆ: ಆಲ್ಟ್ ನ್ಯೂಸ್)