Homeಕರ್ನಾಟಕಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಕೋರಿ ರಾಜನಾಥ್‌ ಸಿಂಗ್‌ ಸಿಎಂ ಸಿದ್ದರಾಮಯ್ಯ ಪತ್ರ

ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಕೋರಿ ರಾಜನಾಥ್‌ ಸಿಂಗ್‌ ಸಿಎಂ ಸಿದ್ದರಾಮಯ್ಯ ಪತ್ರ

- Advertisement -
- Advertisement -

ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನೀಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಕಳೆದ 14 ವರ್ಷಗಳಿಂದ ಕರ್ತವ್ಯ ಪಥ (ರಾಜಪಥ) ದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಸ್ತಬ್ಧಚಿತ್ರ ಪ್ರದರ್ಶಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಸ್ತಬ್ಧಚಿತ್ರಗಳು ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಜಾನಪದ ಪರಂಪರೆಯನ್ನು ದೇಶಕ್ಕೆ ತೋರಿಸಲು ಸಹಕಾರಿಯಾಗಿದೆ ಎಂದು ಸಿಎಂ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಈ ಬಾರಿಯ ‘ಬ್ರ್ಯಾಂಡ್ ಬೆಂಗಳೂರು’ ಸ್ತಬ್ಧಚಿತ್ರವನ್ನು ಕರ್ನಾಟಕ ಸಲ್ಲಿಸಿದ ಐದು ವಿಷಯಗಳ ಪೈಕಿ ಆಯ್ಕೆ ಮಾಡಲಾಗಿದೆ. ಸ್ತಬ್ಧಚಿತ್ರ ಸಂಬಂಧ ರಕ್ಷಣಾ ಸಚಿವಾಲಯ ಕರೆದಿದ್ದ ಎಲ್ಲಾ ಸಭೆಗಳಲ್ಲಿ ಕರ್ನಾಟಕ ಪಾಲ್ಗೊಂಡಿದೆ. ಆಯ್ಕೆ ಸಮಿತಿ ಸೂಚಿಸಿದಂತೆ ಸ್ತಬ್ಧಚಿತ್ರದ ಮಾದರಿ ಮತ್ತು ಸಂಗೀತವನ್ನು ಸಲ್ಲಿಸಲಾಗಿದೆ. ಕೆಲವು ಬದಲಾವಣೆಗಳೊಂದಿಗೆ ಮುಂದಿನ ಸಭೆಗೆ ಆಗಮಿಸುವಂತೆ ನಮಗೆ ಸೂಚಿಸಲಾಗಿತ್ತು. ಅದೇ ರೀತಿ ನಾವು ಸಿದ್ದರಾಗಿದ್ದೆವು. ಆದರೆ, ಅಂತಿಮ ಸಭೆಯಿಂದ ನಮ್ಮನ್ನು ಹೊರಗಿಡಲಾಗಿದೆ. ಕರ್ತವ್ಯ ಪಥದ ಬದಲಾಗಿ ಕೆಂಪುಕೋಟೆಯ ‘ಭಾರತ ಪರ್ವ’ವಿಭಾಗದಲ್ಲಿ ನಮ್ಮ ಸ್ತಬ್ಧಚಿತ್ರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ.

ಬ್ರ್ಯಾಂಡ್ ಬೆಂಗಳೂರು ವಿಷಯದ ಸ್ತಬ್ಧಚಿತ್ರ ಬೆಂಗಳೂರಿನ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲಿದೆ. ಇತ್ತೀಚೆಗಷ್ಟೆ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2 ಅನ್ನು ವಿಶ್ವದ ಸುಂದರ ವಿಮಾನ ನಿಲ್ದಾಣ ಎಂದು ಯುನೆಸ್ಕೋ ಬನ್ನಿಸಿದೆ. ತಂತ್ರಜ್ಞಾನ, ಉದ್ಯಮ ಮತ್ತು ತೆರಿಗೆಯ ಮೂಲಕ ಬೆಂಗಳೂರು ‘ವಿಕಸಿತ ಭಾರತ’ಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಸಿಎಂ ಹೇಳಿದ್ದಾರೆ.

ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ನೀಡದಿರುವುದು 7 ಕೋಟಿ ಕನ್ನಡಿಗರಿಗೆ ಬೇಸರ ಮೂಡಿಸಿದೆ. ಹಾಗಾಗಿ, ನಮ್ಮ ಸ್ತಬ್ಧಚಿತ್ರಕ್ಕೆ ಕೆಂಪುಕೋಟೆಯ ‘ಭಾರತ ಪರ್ವ’ದ ಬದಲು ಕರ್ತವ್ಯ ಪಥದ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ.

ಕರ್ನಾಟಕವು ಕಳೆದ 14 ವರ್ಷಗಳಿಂದ ಗಣರಾಜ್ಯೋತ್ಸವ ಪರೇಡ್‌ಗೆ ಸ್ತಬ್ಧಚಿತ್ರಗಳನ್ನು ಕಳುಹಿಸುತ್ತಿದೆ. ಬರೋಬ್ಬರಿ 14 ವರ್ಷಗಳಿಂದ ಸ್ತಬ್ಧಚಿತ್ರ ವಿಭಾಗದಲ್ಲಿ ಭಾಗವಹಿಸಿದ ದೇಶದ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. 2023 ರ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಕರ್ನಾಟಕ ‘ನಾರಿ ಶಕ್ತಿ ಸ್ತಬ್ಧಚಿತ್ರ’ ಪ್ರದರ್ಶಿಸಿತ್ತು.

ಇದನ್ನೂ ಓದಿ : ಕೋಚಿಮುಲ್ ನೇಮಕಾತಿ ಅಕ್ರಮ: ಪ್ರತಿ ಹುದ್ದೆ ₹30 ಲಕ್ಷಕ್ಕೆ ಮಾರಾಟ; ಇಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...