Homeಮುಖಪುಟಗಾಝಾದಲ್ಲಿ ಇಸ್ರೇಲ್‌ನಿಂದ ನರಮೇಧ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ ದ.ಆಫ್ರಿಕಾ

ಗಾಝಾದಲ್ಲಿ ಇಸ್ರೇಲ್‌ನಿಂದ ನರಮೇಧ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ ದ.ಆಫ್ರಿಕಾ

- Advertisement -
- Advertisement -

ಗಾಝಾ ಮೇಲಿನ ಇಸ್ರೇಲ್‌ ದಾಳಿಯನ್ನು ‘ನರಮೇಧ’ ಎಂದು ಬಣ್ಣಿಸಿರುವ ದಕ್ಷಿಣ ಆಫ್ರಿಕಾ ಅಂತಾರಾಷ್ಟ್ರೀಯ ನ್ಯಾಯಾಲಯ (ಇಂಟರ್‌ ನ್ಯಾಷನಲ್‌ ಕೋರ್ಟ್‌ ಆಫ್ ಜಸ್ಟೀಸ್‌) ಕ್ಕೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯ ವಿಚಾರಣೆ ಗುರುವಾರ ಪ್ರಾರಂಭಗೊಂಡಿದೆ.

ಡಿಸೆಂಬರ್ 29ರಂದು ವಿಶ್ವಸಂಸ್ಥೆಯ ಭಾಗವಾಗಿರುವ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಇಸ್ರೇಲ್ ವಿರುದ್ಧ ದಕ್ಷಿಣ ಆಫ್ರಿಕಾ ಅರ್ಜಿ ಸಲ್ಲಿಸಿದೆ. ಈ ಅರ್ಜಿಯಲ್ಲಿ, ಇಸ್ರೇಲ್ 1948ರ ನರಮೇಧ ತಡೆ ಸಮಾವೇಶ (ಜಿನೋಸೈಡ್ ಕನ್ವೆನ್ಷನ್) ನ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆಫ್ರಿಕಾ ಆರೋಪಿಸಿದ್ದು, ಗಾಝಾದ ಮೇಲಿನ ದಾಳಿಯನ್ನು ತಕ್ಷಣ ನಿಲ್ಲಿಸಲು ಇಸ್ರೇಲ್‌ಗೆ ಸೂಚಿಸುವಂತೆ ಕೋರಿದೆ.

ದಕ್ಷಿಣ ಆಫ್ರಿಕಾದ ವಾದವನ್ನು ಇಸ್ರೇಲ್ ತಳ್ಳಿ ಹಾಕಿದ್ದು, ನರಮೇಧ ಆರೋಪ ವಾಸ್ತವಕ್ಕೆ ದೂರವಾಗಿದೆ. ದಕ್ಷಿಣ ಆಫ್ರಿಕಾದ ಅರ್ಜಿಗೆ ಕಾನೂನು ಆಧಾರವಿಲ್ಲ. ದಕ್ಷಿಣ ಆಫ್ರಿಕಾ ಭಯೋತ್ಪಾದಕ ಸಂಘಟನೆಗಳಿಗೆ ಇಸ್ರೇಲ್‌ ಮೇಲೆ ದಾಳಿ ಮಾಡುವಂತೆ ಪ್ರೇರೇಪಿಸುತ್ತಿದೆ. ಹಾಗಾಗಿ, ಆ ಅರ್ಜಿಯನ್ನು ಪರಿಗಣಿಸಬಾರದು ಎಂದು ಹೇಳಿದೆ.

ವರ್ಲ್ಡ್ ಕೋರ್ಟ್ ಎಂದೂ ಕರೆಯಲ್ಪಡುವ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಈ ವಾರ ಎರಡು ದಿನಗಳ ಕಾಲ ದಕ್ಷಿಣ ಆಫ್ರಿಕಾದಾ ಅರ್ಜಿಯ ವಿಚಾತರಣೆ ನಡೆಸಲಿದೆ. ಈ ಪ್ರಕರಣ ಇತ್ಯರ್ಥವಾಗಲು ವರ್ಷಗಳ ಸಮಯ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಜರ್ಮನಿಯ ನಾಝಿಗಳು ಯಹೂದಿಗಳ ನರಮೇಧ ನಡೆಸಿದ ಬಳಿಕ ನಡೆದ ಒಪ್ಪಂದದ ನಿಯಮಗಳನ್ನು ಇಸ್ರೇಲ್ ಸಂಪೂರ್ಣವಾಗಿ ಉಲ್ಲಂಘಿಸಿದೆ ಎಂದು ದಕ್ಷಿಣ ಆಫ್ರಿಕಾ ಆರೋಪಿಸಿದೆ.

ದಕ್ಷಿಣ ಆಫ್ರಿಕಾ ಹೇಳಿದ್ದೇನು?

ಇಸ್ರೇಲ್‌ ಗಾಝಾದಲ್ಲಿ ನರಮೇಧ ನಡೆಸುತ್ತಿದೆ ಎಂದು ದಕ್ಷಿಣ ಆಫ್ರಿಕಾ ಆರೋಪಿಸಿದ್ದು, ತಕ್ಷಣ ದಾಳಿ ನಿಲ್ಲಿಸಲು ಇಸ್ರೇಲ್‌ಗೆ ಸೂಚಿಸಬೇಕು ಎಂದು ಆಗ್ರಹಿಸಿದೆ. ಇಸ್ರೇಲ್‌ ಜಿನಿವಾ ನರಮೇಧ ತಡೆ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.

ದಕ್ಷಿಣ ಆಫ್ರಿಕಾದ ಆಡಳಿತಾರೂಡ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು, ಗಾಝಾ ಮತ್ತು ದಕ್ಷಿಣ ದಂಡೆಯಲ್ಲಿ ಇಸ್ರೇಲ್‌ ನಡೆಸುತ್ತಿರುವ ಆಕ್ರಮಣವನ್ನು ತನ್ನದೇ ವರ್ಣಬೇಧ ನೀತಿಯ ಇತಿಹಾಸಕ್ಕೆ ಹೋಲಿಸಿದೆ. ಯಾಸರ್ ಅರಾಫತ್‌ನ ಪ್ಯಾಲೆಸ್ತೀನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್‌ಒ) ಅನ್ನು ಆಫ್ರಿಕಾ ಸಮರ್ಥಿಸಿಕೊಂಡಿದೆ.

ಅಕ್ಟೋಬರ್ 7,2023ರಂದು ಪ್ರಾರಂಭಗೊಂಡ ಇಸ್ರೇಲ್‌-ಹಮಾಸ್ ಸಂಘರ್ಷದಲ್ಲಿ ಇದುವರೆಗ ಮೃತಪಟ್ಟ ಅಮಾಯಕ ಪ್ಯಾಲೆಸ್ತೀನಿಯರ ಸಂಖ್ಯೆ 23 ಸಾವಿರಕ್ಕೆ ತಲುಪಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಗಾಝಾದ ಹಮಾಸ್ ಗುಂಪು ಸುಮಾರು 1,200 ಜನರನ್ನು ಹತ್ಯೆ ಮಾಡಿತ್ತು. 2ರಷ್ಟು ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿತ್ತು. ಬಳಿಕ ಪ್ರಾರಂಭಗೊಂಡ ಇಸ್ರೇಲ್ ಆಕ್ರಮಣಕ್ಕೆ ಇದುವರೆಗೆ 23 ಸಾವಿರ ಜನರು ಬಲಿಯಾಗಿದ್ದಾರೆ.

ಇದನ್ನೂ ಓದಿ : ಅತ್ಯಾಚಾರ ಆರೋಪ: ನೇಪಾಳದ ವಿವಾದಾತ್ಮಕ ಧರ್ಮಗುರು ‘ಬುದ್ಧ ಬಾಲಕ’ನ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

0
ಶ್ರೀಮತಿ ಖೋಂಗಮೆನ್ (1) ಅವರು, ಈಗ್ಗೆ ಮೂರು ದಿನಗಳ ಹಿಂದೆ ಈ ಸಮ್ಮೇಳನದ ಕುರಿತು ನನಗೆ ವಿವರಗಳನ್ನು ನೀಡಿದರು. ಈ ಕಾರ್ಯಕ್ರಮದ ಆಯೋಜನೆ ಮತ್ತು ವಿವರಗಳನ್ನು ನೋಡಿ ನನಗೆ ಸಂತೋಷವಾಯಿತು. ಈ ತರಹದ...