Homeಮುಖಪುಟವಿವಾಹವಾದ ಕಾರಣಕ್ಕೆ ಸೇನಾ ಮಹಿಳಾ ಅಧಿಕಾರಿಯ ವಜಾ; 'ಲಿಂಗ ತಾರತಮ್ಯ' ಎಂದ ಸುಪ್ರೀಂಕೋರ್ಟ್‌

ವಿವಾಹವಾದ ಕಾರಣಕ್ಕೆ ಸೇನಾ ಮಹಿಳಾ ಅಧಿಕಾರಿಯ ವಜಾ; ‘ಲಿಂಗ ತಾರತಮ್ಯ’ ಎಂದ ಸುಪ್ರೀಂಕೋರ್ಟ್‌

- Advertisement -
- Advertisement -

ವಿವಾಹವಾದ ಕಾರಣಕ್ಕೆ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಖಾಯಂ ನಿಯೋಜಿತ ಅಧಿಕಾರಿಯನ್ನು ವಜಾ ಮಾಡಿರುವುದು ಸ್ವೇಚ್ಛೆಯ ಹಾಗೂ ಸೂಕ್ಷ್ಮತೆ ಇಲ್ಲದ ಲಿಂಗ ತಾರತಮ್ಯ ಹಾಗೂ ಅಸಮಾನತೆಯನ್ನು ಬಿಂಬಿಸುತ್ತದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗ‌ಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್‌ ದತ್ತಾ ಅವರಿದ್ದ ನ್ಯಾಯಪೀಠವು ಈ ಕುರಿತ ಅರ್ಜಿ ವಿಚಾರಣೆ ನಡೆಸಿದ್ದು, ಮಾಜಿ ಲೆಫ್ಟಿನೆಂಟ್ ಸೆಲಿನಾ ಜಾನ್‌ಗೆ 8 ವಾರಗಳಲ್ಲಿ 60 ಲಕ್ಷ ರೂಪಾಯಿಗಳನ್ನು ಪೂರ್ಣ ಮತ್ತು ಅಂತಿಮ ಪರಿಹಾರವಾಗಿ ಪಾವತಿಸಲು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ನಿಯಮದ ಪ್ರಕಾರ  ವಿವಾಹದ ಕಾರಣದಿಂದ ಅವರ ಬಿಡುಗಡೆಯು ಕಾನೂನುಬಾಹಿರವಾಗಿದೆ. ನಿಗದಿತ ಅವಧಿ ಒಳಗಾಗಿ ಪರಿಹಾರ ಪಾವತಿಸದಿದ್ದಲ್ಲಿ, ಈ ಆದೇಶ ಪ್ರಕಟವಾದ ದಿನಾಂ‌ಕದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ವಾರ್ಷಿಕ ಶೇ 12ರಷ್ಟು ಬಡ್ಡಿಯೊಂದಿಗೆ ಪರಿಹಾರಧನವನ್ನು ಪಾವತಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ನಿಯಮಗಳ ಕಾರಣ ನೀಡಿ ಮಹಿಳಾ ಅಧಿಕಾರಿಯೊಬ್ಬರನ್ನು ಉದ್ಯೋಗದಿಂದ ತೆಗೆದು ಹಾಕುವುದು ಲಿಂಗ ತಾರತಮ್ಯವನ್ನು ಬಿಂಬಿಸುತ್ತದೆ. ಇಂತಹ ಹಳೆಯ ನಿಯಮಗಳನ್ನು ಒಪ್ಪಿಕೊಳ್ಳುವುದೆಂದರೆ ಮಾನವನ ಘನತೆಯನ್ನು ಹಾಗೂ ತಾರತಮ್ಯ ರಹಿತ ಮತ್ತು ನ್ಯಾಯಯುತವಾಗಿ ನಡೆಸಿಕೊಳ್ಳಬೇಕು ಎಂಬ ಪ್ರತಿಪಾದನೆಯನ್ನು ಕಡೆಗಣಿಸಿದಂತೆ ಎಂದೂ ನ್ಯಾಯಪೀಠವು ಹೇಳಿದೆ.

ನಿವೃತ್ತ ಲಿಫ್ಟಿನೆಂಟ್ ಸೆಲಿನಾ ಅವರನ್ನು ವೃತ್ತಿಗೆ ಸಂಬಂಧಿಸಿದ ಎಲ್ಲ ಪ್ರಯೋಜನಗಳೊಂದಿಗೆ ಹುದ್ದೆಯಲ್ಲಿ ‌ಮರುಸ್ಥಾಪಿಸಬೇಕು ಎಂದು ಲಖನೌದ ಸಶಸ್ತ್ರ ಪಡೆಗಳ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಸೆಲಿನಾ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ನ್ಯಾಯಮಂಡಳಿ ನೀಡಿದ್ದ ಆದೇಶ ತಪ್ಪು ಹಾಗೂ ಕಾನೂನುಬಾಹಿರವಾಗಿದೆ, ಈ ವಿಷಯದಲ್ಲಿ ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸುವ ಅಗ‌ತ್ಯವೇ ಇಲ್ಲ ಎಂದು ಹೇಳಿದೆ.

ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಶಾಶ್ವತ ಆಯೋಗಗಳ ಮಂಜೂರಾತಿಗಾಗಿ ಸೇವಾ ನಿಯಮಗಳು ಮತ್ತು ಷರತ್ತುಗಳು ಎಂಬ ಶೀರ್ಷಿಕೆಯ 1977ರ ಆರ್ಮಿ ಸೂಚನೆ ಸಂಖ್ಯೆ 61ನ್ನು ನಂತರದ ಪತ್ರದ ಮೂಲಕ ಆಗಸ್ಟ್ 29, 1995ರಂದು ಹಿಂಪಡೆಯಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಲಿಂಗ ಆಧರಿಸಿ ಪಕ್ಷಪಾತ ಮಾಡುವ ಕಾನೂನುಗಳು ಮತ್ತು ನಿಯಮಗಳಿಗೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಅಲ್ಲದೇ ಮಹಿಳಾ ಉದ್ಯೋಗಿಗಳು ಮದುವೆ ಮಾಡಿಕೊಳ್ಳುವುದು ಹಾಗೂ ಕೌಟುಂಬಿಕ ಜವಾಬ್ದಾರಿ ನಿರ್ವಹಣೆ‌ಯಲ್ಲಿ ತೊಡಗಿರುವುದನ್ನು ಅವರನ್ನು ಉದ್ಯೋಗದಿಂದ ಅನರ್ಹಗೊಳಿಸುವುದಕ್ಕೆ ಕಾರಣ ಎಂದು ಆಧಾರ ಎಂದು ಪರಿ‌ಗಣಿಸುವುದು ಕೂಡ ಅಸಾಂವಿಧಾನಿಕ ಎಂದು ಪೀಠ ಹೇಳಿದೆ.

ಇದನ್ನು ಓದಿ: ಹೆಚ್ಚುವರಿ ಹಣ ಬೇಕಾದರೆ ಸುಪ್ರೀಂಕೋರ್ಟ್‌ನಿಂದ ಮೊಕದ್ದಮೆ ಹಿಂಪಡೆಯಿರಿ: ಕೇರಳ ಸರಕಾರಕ್ಕೆ ಹೇಳಿದ ಕೇಂದ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...