Homeಮುಖಪುಟಜೈರಾಮ್ ರಮೇಶ್ ವಿರುದ್ಧ ಬಿಜೆಪಿಯಿಂದ ಹಕ್ಕು ಉಲ್ಲಂಘನೆ ದೂರು; ವಿಶೇಷಾಧಿಕಾರ ಸಮಿತಿಗೆ ಧನಕರ್ ಶಿಫಾರಸು

ಜೈರಾಮ್ ರಮೇಶ್ ವಿರುದ್ಧ ಬಿಜೆಪಿಯಿಂದ ಹಕ್ಕು ಉಲ್ಲಂಘನೆ ದೂರು; ವಿಶೇಷಾಧಿಕಾರ ಸಮಿತಿಗೆ ಧನಕರ್ ಶಿಫಾರಸು

- Advertisement -
- Advertisement -

ರಾಜ್ಯಸಭಾ ಅಧ್ಯಕ್ಷರ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರ ವಿರುದ್ಧ ವಿಶೇಷ ಹಕ್ಕು ಉಲ್ಲಂಘನೆ ಆರೋಪದ ಮೇಲೆ ಬಿಜೆಪಿ ಸಂಸದರ ದೂರು ನೀಡಿದ್ದು, ಅಧ್ಯಕ್ಷ ಜಗದೀಪ್ ಧನಕರ್ ಅವರು ಆ ದೂರಿನ  ಪರಿಶೀಲನೆಗಾಗಿ ವಿಶೇಷಾಧಿಕಾರ ಸಮಿತಿಗೆ ಶಿಫಾರಸು ಮಾಡಿದ್ದಾರೆ.

ರಾಜ್ಯಸಭಾ ಅಧ್ಯಕ್ಷರ ವಿರುದ್ಧ ಅಗೌರವ ತೋರಿದ ಮತ್ತು ಅವರ ನಿಷ್ಪಕ್ಷಪಾತದ ಬಗ್ಗೆ ಮಾತನಾಡಿ ಅಗೌರವ ತೋರಿದ್ದಾರೆ ಎಂದು ಜೈರಾಮ್ ರಮೇಶ್ ವಿರುದ್ಧ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಅವರು ದೂರು ದಾಖಲಿಸಿದ್ದಾರೆ.

ಸಂಸತ್ತಿನ ಕೊನೆಯ ಬಜೆಟ್ ಅಧಿವೇಶನದಲ್ಲಿ ರಮೇಶ್ ಅವರು, ಅಧ್ಯಕ್ಷರು ಆಡಳಿತ ಪಕ್ಷದ “ಚೀಯರ್ ಲೀಡರ್” ಆಗಬಾರದು ಮತ್ತು ಪ್ರತಿಪಕ್ಷ ಸದಸ್ಯರ ಮಾತುಗಳನ್ನು ಆಲಿಸಬೇಕು ಎಂದು ಹೇಳಿದ್ದರು.

ಬಜೆಟ್ ಅಧಿವೇಶನದಲ್ಲಿ  ಅದಾನಿ ಹಗರಣ ಬಗ್ಗೆ ಜೆಪಿಸಿ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಆಡಳಿತರೂಢ ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದರು. ಈ ಬಗ್ಗೆ ಏನನ್ನೂ ಮಾತನಾಡದ ಬಿಜೆಪಿ, ನಂತರದ ಅವಧಿಯ ಬಜೆಟ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಲಂಡನ್‌ನಲ್ಲಿ ನೀಡಿದ ಹೇಳಿಕೆ ಕುರಿತುಕ್ಷಮೆ ಕೇಳುವಂತೆ ಗದ್ದಲ ಸೃಷ್ಟಿಸಿತು. ಇದರಿಂದ ಅಧಿವೇಶಕ್ಕೆ ನಿರಂತರ ಅಡ್ಡಿಗಳು ಎದುರಾದವು. ಇದರಿಂದ ಯಾವುದೇ ಮಹತ್ವದ ವ್ಯವಹಾರವನ್ನು ನಡೆಸಲು ಸದನ ವಿಫಲವಾಯಿತು.

”ರಾಜ್ಯಸಭೆಯ ಅಧ್ಯಕ್ಷರು, ರಾಜ್ಯಗಳ ಕೌನ್ಸಿಲ್ (ರಾಜ್ಯಸಭೆ) ನಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 203 ರ ಅಡಿಯಲ್ಲಿ ಡಾ. ಸುಧಾಂಶು ತ್ರಿವೇದಿ ಅವರ ದೂರಿನಿಂದ ಉದ್ಭವಿಸಿದ ಸವಲತ್ತು ಉಲ್ಲಂಘನೆಯ ಪ್ರಶ್ನೆಯನ್ನು ಉಲ್ಲೇಖಿಸಿದ್ದಾರೆ ಎಂದು ಸದಸ್ಯರಿಗೆ ತಿಳಿಸಲಾಗಿದೆ.

ಮತ್ತೊಬ್ಬ ಆಡಳಿತಾರೂಢ ಬಿಜೆಪಿ ಸದಸ್ಯ ಕೂಡ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಇದೇ ರೀತಿ ಅಧ್ಯಕ್ಷ ಸ್ಥಾನಕ್ಕೆ ಅಗೌರವ ತೋರಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ ಆದರೆ ಅಧ್ಯಕ್ಷರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...