Homeಕರ್ನಾಟಕಯುಪಿ ಮಾದರಿ ಬಗ್ಗೆ ಕರ್ನಾಟಕದಲ್ಲಿ ಪ್ರಸ್ತಾಪಿಸುವುದೇ ಹಾಸ್ಯಾಸ್ಪದ: ಆದಿತ್ಯನಾಥ್ ಹೇಳಿಕೆಗೆ ಸಿದ್ದರಾಮಯ್ಯ ಲೇವಡಿ

ಯುಪಿ ಮಾದರಿ ಬಗ್ಗೆ ಕರ್ನಾಟಕದಲ್ಲಿ ಪ್ರಸ್ತಾಪಿಸುವುದೇ ಹಾಸ್ಯಾಸ್ಪದ: ಆದಿತ್ಯನಾಥ್ ಹೇಳಿಕೆಗೆ ಸಿದ್ದರಾಮಯ್ಯ ಲೇವಡಿ

- Advertisement -
- Advertisement -

ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಪ್ರಚಾರ ನಡೆಸಲು ಬಂದಿರುವ ಯೋಗಿ ಆದಿತ್ಯನಾಥ್‌ರವರು ಉತ್ತರ ಪ್ರದೇಶದ ಮಾದರಿ ಬಗ್ಗೆ ಕರ್ನಾಟಕದಲ್ಲಿ ಪ್ರಸ್ತಾಪಿಸಿರುವುದು ಹಾಸ್ಯಾಸ್ಪದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

”ಕೇಂದ್ರ ಸರ್ಕಾರದ ದಾಖಲೆಗಳ ಪ್ರಕಾರ ಉತ್ತರಪ್ರದೇಶದಲ್ಲಿ ಆರು ವರ್ಷದ ಒಳಗಿನ ಮಕ್ಕಳ ಅನಿಮಿಯಾ ಪ್ರಮಾಣ 2016ರಲ್ಲಿ ಶೇ. 63.2 ರಷ್ಟಿತ್ತು. ಈಗ ಶೇ. 66.4 ಕ್ಕೆ ಹೆಚ್ಚಿಸಿ ಮಕ್ಕಳನ್ನು ರೋಗಗ್ರಸ್ತ ಮಾಡಿದ್ದು ಯೋಗಿ ಸಾಧನೆ. ಎಲ್ಲ ರಾಜ್ಯಗಳಲ್ಲಿ ಜನರ ಜೀವಿತಾವಧಿ ಹೆಚ್ಚುತ್ತಿದ್ದರೆ ಉತ್ತರಪ್ರದೇಶದಲ್ಲಿ ಕುಸಿಯುತ್ತಿರುವುದು ಮಾದರಿಯೇ?” ಎಂದು ಟೀಕಿಸಿದ್ದಾರೆ.

“ಅದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾದ ಬಳಿಕ  ಅಂತಹ ಗಮನಾರ್ಹವಾದ ಬದಲಾವಣೆಗಳೇನು ಆಗಿಲ್ಲ. ಉತ್ತರ ಪ್ರದೇಶದಲ್ಲಿನ ಬಡತನ, ನಿರುದ್ಯೋಗ, ಹಿಂಸಾಚಾರದಲ್ಲಿ ದೇಶದಲ್ಲಿಯೇ ಕುಖ್ಯಾತಿ ಪಡೆದಿರುವುದೇಕೆ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

2016ರಲ್ಲಿ ಉತ್ತರ ಪ್ರದೇಶದ ಮಹಿಳೆಯರ ಸರಾಸರಿ ಜೀವಿತಾವಧಿ 68.5 ವರ್ಷ ದಷ್ಟಿತ್ತು. 2019ರಲ್ಲಿ ಅದು ಶೇ.66.2 ವರ್ಷದಷ್ಟಕ್ಕೆ ಕುಸಿದಿದೆ. ಎಲ್ಲಾ ರಾಜ್ಯಗಳ ಜನರ ಜೀವಿತಾವಧಿ ಹೆಚ್ಚುತ್ತಿದ್ದರೆ ಉತ್ತರ ಪ್ರದೇಶದಲ್ಲಿ ಕುಸಿಯುತ್ತಿದೆ. ಇದೇ ಅಲ್ಲವೆ ಆದಿತ್ಯನಾಥ್ ಮಾದರಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ತಲಾವಾರು ವಿದ್ಯುತ್‌ ಲಭ್ಯತೆಯು ಕರ್ನಾಟಕದಲ್ಲಿ 1,184 ಕಿಲೋವ್ಯಾಟ್‌ಗಳಷ್ಟಿದ್ದರೆ, ಉತ್ತರ ಪ್ರದೇಶದಲ್ಲಿ ಕೇವಲ 642 ಕಿಲೋವ್ಯಾಟ್‌ಗಳಷ್ಟಿದೆ. ಆದಿತ್ಯನಾಥರು ಮುಖ್ಯಮಂತ್ರಿಯಾದ ಮೇಲೆ ಗಮನಾರ್ಹ ಬದಲಾವಣೆಯೇನೂ ಸಂಭವಿಸಿಲ್ಲ. ಅಭಿವೃದ್ಧಿಗೂ ವಿದ್ಯುತ್‌ ಬಳಕೆಗೂ ಸಂಬಂಧವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಮೀಸಲಾತಿ ಮಿತಿ ಶೇ.75ಕ್ಕೆ ಏರಿಸಲು ಕಾಂಗ್ರೆಸ್ ಬದ್ಧ: ಸಿದ್ದರಾಮಯ್ಯ ಘೋಷಣೆ

2021ರ ದಾಖಲೆಗಳ ಪ್ರಕಾರ ಉತ್ತರ ಪ್ರದೇಶದಲ್ಲಿ 3,012 ತಜ್ಞ ವೈದ್ಯರ ಹುದ್ದೆಗಳು ಮಂಜೂರಾಗಿದ್ದರೆ, ಕೆಲಸ ಮಾಡುತ್ತಿರುವವರು ಕೇವಲ 872 ಜನ ಮಾತ್ರ. 2,030 ಹುದ್ದೆಗಳು ಖಾಲಿ ಇವೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡಬೇಕಾದ ವೈದ್ಯರ 1,355 ಹುದ್ದೆಗಳು ಖಾಲಿ ಇವೆ. ಜನರ ಆರೋಗ್ಯ ಸುಧಾರಿಸದೆ ರಾಜ್ಯವನ್ನು ಅಭಿವೃದ್ಧಿ ಮಾಡುವುದು ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...