Homeಕರ್ನಾಟಕಬಿಜೆಪಿ ಪರವಾಗಿದ್ದ ಮತದಾನೋತ್ತರ ಸಮೀಕ್ಷೆಗಳು: ಮತದಾರರ ತೀರ್ಪು ಬೇರೆ

ಬಿಜೆಪಿ ಪರವಾಗಿದ್ದ ಮತದಾನೋತ್ತರ ಸಮೀಕ್ಷೆಗಳು: ಮತದಾರರ ತೀರ್ಪು ಬೇರೆ

- Advertisement -
- Advertisement -

– ಕೆ.ಈ.ಸಿದ್ದಯ್ಯ

ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಗಳು ಗೋದಿ ಮೀಡಿಯಾಗಳ ಸಮೀಕ್ಷೆಗಳನ್ನು ಹುಸಿಗೊಳಿಸಿವೆ. ಟೈಮ್ಸ್‌ ನೌ, ಎನ್.ಡಿ.ಟಿ.ವಿ, ಇಂಡಿಯಾ ಟುಡೆ, ಸಿಫೋರ್ ಹೀಗೆ ಎಲ್ಲಾ ಎಕ್ಸಿಟ್ ಪೋಲ್ ಗಳು ತಲೆಕೆಳಗಾಗುವಂತೆ ಮಾಡಿದ್ದಾರೆ ಮತದಾರರು. ಎರಡೂ ರಾಜ್ಯಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಪಡೆದು ಬಿಜೆಪಿ ಅಧಿಕಾರ ಹಿಡಿಯುತ್ತದೆ ಎಂದು ಹೇಳಿದ್ದಲ್ಲವೂ ಸುಳ್ಳಾಗಿವೆ.

ಹೌದು.. ಮತದಾನ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಯೇ ಅಧಿಕಾರ ಹಿಡಿಯುತ್ತದೆ ಎಂದು ಹೇಳಲಾಗಿತ್ತು ಈಗ ಅದು ಉಲ್ಟಾ ಆಗಿದೆ. ಮಹಾರಾಷ್ಟ್ರದಲ್ಲಿ ಎಲ್ಲಾ ಎಕ್ಸಿಟ್ ಪೋಲ್ ಗಳು ಕಾಂಗ್ರೆಸ್-ಎನ್.ಸಿ.ಪಿ ಮೈತ್ರಿಕೂಟ 41 ರಿಂದ 81 ಸೀಟುಗಳನ್ನು ದಾಟುವುದಿಲ್ಲ ಎಂದು ನಂಬಿಸಿದ್ದವು. ಅಂದರೆ ಮನಸ್ಸಿಗೆ ಬಂದ ಅಂಕಿಗಳನ್ನು ತಮ್ಮ ಸಮೀಕ್ಷೆಗಳಲ್ಲಿ ಹೇಳಿದ್ದವು.

ಟೈಮ್ಸ್ ನೌ ಬಿಜೆಪಿ 230 ಸೀಟು ನೀಡಿದ್ದರೆ, ಎಬಿಪಿ-ಸಿ ಓಟರ್ 204, ರಿಪಬ್ಲಿಕ್ – ಜನ್ ಕಿ ಬಾತ್ ನಾವು ಯಾರಿಗೂ ಕಡಿಮೆ ಇಲ್ಲವೆಂಬಂತೆ 223 ಸೀಟು ನೀಡಿದ್ದವು. ಸಿ.ಎನ್‌.ಎನ್‌, ನ್ಯೂಸ್ 18 ಸುದ್ದಿ ಸಂಸ್ಥೆಗಳು ಇನ್ನೂ ಮುಂದೆ ಹೋಗಿ 243 ಸ್ಥಾನ ನೀಡಿದ್ದವು. ಟಿವಿ-9 ಮರಾಠಿ 197 ಮತ್ತು ಇಂಡಿಯಾ ಟುಡೆ-ಆಕ್ಸಿಸ್ 181 ಸ್ಥಾನ ನೀಡಿ, ಬಿಜೆಪಿಯನ್ನೇ ಬಹುಮತದೊಂದಿಗೆ ಗೆಲ್ಲುತ್ತದೆ ಎಂದು ಬಿಂಬಿಸಿ, ಉದಾರತೆ ತೋರಿದ್ದವು.

ಕಾಂಗ್ರೆಸ್-ಎನ್.ಸಿ.ಪಿ. ಮೈತ್ರಿಗೆ 41 ರಿಂದ 81 ಸ್ಥಾನಗಳನ್ನು ಮಾತ್ರ ನೀಡಿ, ಬಿಜೆಪಿ ಪಕ್ಷದ ಪರ ಪ್ರೇಮ ಮೆರೆದವು. ಕಾಂಗ್ರೆಸ್ ಅಧಿಕಾರ ಹಿಡಿಯುವುದಿಲ್ಲ. ಮೈತ್ರಿಗೆ ಯಾರೂ ನಾಯಕರಿಲ್ಲ ಎಂಬಂತೆಯೂ ರಾಷ್ಟ್ರೀಯ ಮೀಡಿಯಾಗಳು ಬಿಂಬಿಸಿದವು. ಜನಪರವಾಗಿದ್ದ ಎನ್.ಡಿ.ಟಿ.ವಿಯೂ ಗುಂಪಿನಲ್ಲಿ ಗೋವಿಂದ ಎಂದಿತು. ಸರಿಯಾದ ಸಮೀಕ್ಷೆ ನಡೆಸಬೇಕಾಗಿದ್ದ ಸುದ್ದಿ ಸಂಸ್ಥೆಗಳು, ಬಿಜೆಪಿಯ ನೆಟ್ಟಿಗರು, ಫೇಸ್ಬುಕ್ ಭಕ್ತರು ನೀಡುವ ಅಂಕಿ ಅಂಶಗಳೇ ಸತ್ಯವೆಂದು ತಿಳಿದು ತಮ್ಮ ವಿಮರ್ಶಕ, ವಿಶ್ಲೇಷಕ, ಕೂದಲು ಸೀಳುವ  ಬುದ್ದಿಯನ್ನು ಖರ್ಚು ಮಾಡಲು ಜಿಪುಣತನ ತೋರಿದವು.

ಇಂಡಿಯಾ ಟುಡೆ, ಟಿವಿ 9 ಮರಾಠಿ ಟಿವಿಗಳನ್ನು ಹೊರತುಪಡಿಸಿ ಉಳಿದೆಲ್ಲ ಸಮೀಕ್ಷೆಗಳು ಉಳಿದೆಲ್ಲವೂ ಕಾಂಗ್ರೆಸ್ ಮೈತ್ರಿಕೂಟಕ್ಕೆ ಕೇವಲ 60 ಸ್ಥಾನಗಳು ಬರುತ್ತವೆ ಎಂದು ಹೇಳಿದವು. ಈಗ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮೈತ್ರಿ 104 ಸ್ಥಾನ ಗಳಿಸಿದ್ದರೆ, ಬಿಜೆಪಿ-ಶಿವಸೇನೆ ಮೈತ್ರಿ 157 ಸ್ಥಾನ ಪಡೆದು ಅಧಿಕಾರದ ಗದ್ದುಗೆ ಹಿಡಿಯಲು ಸಿದ್ಧತೆ ನಡೆಸಿವೆ. ಅಂದರೆ ಮಹಾರಾಷ್ಟ್ರದಲ್ಲಿ ಬಿಜೆಪಿ 103 ಸ್ಥಾನ, ಶಿವಸೇನೆ 56 ಸ್ಥಾನ ಪಡೆಯಲು ಶಕ್ತವಾಗಿವೆ. ಬಿಜೆಪಿ 200ರ ಗಡಿ ದಾಟುತ್ತದೆ ಎಂಬ ಸಮೀಕ್ಷೆಗಳ ಭವಿಷ್ಯ ನೆರೆಯಲ್ಲಿ ಕೊಚ್ಚಿ ಹೋಗಿದೆ.

ಹರಿಯಾಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಹೋರಾಟ ನಡೆಸಿವೆ. ಇಲ್ಲಿ ಬಿಜೆಪಿ 40, ಕಾಂಗ್ರೆಸ್ 31, ಜನನಾಯಕ್ ಜನತಾ ಪಕ್ಷ ಮತ್ತು ಇತರರು ಸೇರಿ 19 ಸ್ಥಾನಗಳನ್ನು ಪಡೆದಿದ್ದಾರೆ. ಬಿಜೆಪಿ ಪಕ್ಷ ಕಾಂಗ್ರೆಸ್ ಗಿಂತ 9 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಯಾವುದೇ ರಾಷ್ಟ್ರೀಯ ಪಕ್ಷ ಸರ್ಕಾರ ರಚನೆ ಮಾಡಬೇಕು ಎಂದರೆ ಜನನಾಯಕ್ ಜನತಾ ಪಕ್ಷದ ನೆರವು ಪಡೆಯಲೇಬೇಕು. ಹೀಗಾಗಿ ಜನನಾಯಕ್ ಜನತಾ ಪಕ್ಷ ಕಿಂಗ್ ಮೇಕರ್ ಆಗಿ ಹೊರ ಹೊಮ್ಮಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಜನನಾಯಕ್ ಜನತಾ ಪಕ್ಷದ ಮುಖ್ಯಸ್ಥರನ್ನು ಸಂಪರ್ಕಿಸುವ ಪ್ರಯತ್ನಗಳು ಮುಂದುವರೆದಿವೆ.

ಜನನಾಯಕ್ ಜನತಾ ಪಕ್ಷ ಬೆಂಬಲಿಸಲು ಕೆಲವು ಷರತ್ತುಗಳನ್ನು ಮುಂದಿಟ್ಟಿದೆ. ಹರಿಯಾಣ ಜನತೆಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಮುಂದೆ ಬರುವ ಪಕ್ಷಕ್ಕೆ ಬೆಂಬಲಿಸುವುದಾಗಿ ಅದು ಘೋಷಿಸಿದೆ. ರಾಜ್ಯದಲ್ಲಿ ಶೇಕಡ 75ರಷ್ಟು ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಭದ್ರತೆ, ರೈತರ ಜೊತೆ ಸಭೆ ನಡೆಸಲು ಒಪ್ಪಿ ಅವರ ಬೇಡಿಕೆಗಳನ್ನು ಈಡೇರಿಸುವ ಪಕ್ಷವನ್ನು ಬೆಂಬಲ ಮಾಡುವುದಾಗಿ ಜನನಾಯಕ್ ಜನತಾ ಪಕ್ಷ ಷರತ್ತು ವಿಧಿಸಿದೆ. ಇದು ಈಡೇರಿಸುವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ.

ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮತದಾರ ರಾಷ್ಟ್ರೀಯ ಪಕ್ಷಗಳನ್ನು ಕಡೆಗಣಿಸಿದಂತೆ ಕಂಡು ಬರುತ್ತದೆ. ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಸಾಧಿಸಿರುವುದು ಫಲಿತಾಂಶಗಳಿಂದ ಗೊತ್ತಾಗುತ್ತದೆ. ಹರಿಯಾಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಓಟಕ್ಕೆ ಪಕ್ಷೇತರರು ಮತ್ತು ಜನನಾಯಕ್ ಜನತಾ ಪಕ್ಷ ಅಡ್ಡಿಪಡಿಸಿದೆ. ಆದರೆ ಮಹಾರಾಷ್ಟ್ರದಲ್ಲಿ ಎನ್.ಸಿ.ಪಿ. ಮತ್ತು ಶಿವಸೇನೆ ಹೆಚ್ಚು ಸ್ಥಾನಗಳನ್ನು ಪಡೆದಿವೆ. ಶಿವಸೇನೆ 56 ಮತ್ತು ಎನ್.ಸಿ.ಪಿ 53 ಸ್ಥಾನ ಪಡೆದು ಸಮಾನ ಪೈಪೋಟಿ ನೀಡಿವೆ.

ಚುನಾವಣಾ ಸಮಯದಲ್ಲಿ ಬಿಜೆಪಿ ಮತ್ತು ಶಿವಸೇನೆ ಪ್ರಮುಖವಾಗಿ ರಾಮ ಮಂದಿರ ನಿರ್ಮಾಣ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370 ನೇ ವಿಧಿ ರದ್ದು, ತ್ರಿವಳಿ ತಲಾಖ್, ಬಾಲಾಕೋಟ್ ದಾಳಿ, ಪಾಕ್  ಮತ್ತು ಭಯೋತ್ಪಾದಕ ವಿಷಯಗಳನ್ನೇ ಮುಂದೆ ಮಾಡಿ ಮತಯಾಚಿಸಿತು. ಆದರೆ ಇದಕ್ಕೆ ಮತದಾರ ಒಲಿದಿಲ್ಲ. ಜನರ ಭಾವನೆಗಳನ್ನು ವ್ಯಾಪಾರ ಮಾಡಿಕೊಂಡಿರುವ ಬಿಜೆಪಿಯ ಉತ್ಸಾಹ ಈ ಚುನಾವಣೆಯಲ್ಲಿ ಕುಗ್ಗಿ ಹೋಗುವಂತೆ ಮಾಡಿದೆ.

ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ 20 ಪ್ರಚಾರ ಸಭೆಗಳು, ಅಮಿತ್ 30 ಸಭೆ ನಡೆಸಿದರೂ ಹೆಚ್ಚು ಸ್ಥಾನವನ್ನು ತಂದು ಕೊಡುವಲ್ಲಿ ರಣತಂತ್ರಗಳನ್ನು ಹೆಣೆಯುವ ನಾಯಕರು ಸಂಪೂರ್ಣ ವಿಫಲರಾಗಿರುವುದು ಎದ್ದು ಕಾಣುತ್ತದೆ. ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಪ್ರಸ್ತಾಪಿರುವ ವಿಷಯಗಳ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಮತ್ತು ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಹೇಳಲಾಗಿತ್ತು.

ವಿಶ್ವವ್ಯಾಪಿ ಗಮನ ಸೆಳೆದು ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಿರುವ 56 ಇಂಚಿನ ಎದೆಯ ಮೋದಿ ಮತ್ತು ಚಾಣಾಕ್ಷ್ಯನೆಂದೇ ಮಾಧ್ಯಮಗಳಿಂದ ಬಿಂಬಿಸಲ್ಪಟ್ಟಿರುವ ಅಮಿತ್ ಶಾ ಆಟಕ್ಕೆ ಮತದಾರ ಬ್ರೇಕ್ ಹಾಕಿರುವುದು ಫಲಿತಾಂಶದಿಂದ ಗೋಚರಿಸಿದೆ. ಈ ಬೆಳವಣಿಗೆಗಳು, ಫಲಿತಾಂಶ ಮುಂದೆ ಶುಭ ದಿನಗಳು ಬರಲಿವೆ ಎಂಬುದನ್ನು ಸೂಚಿಸುತ್ತಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...