Homeಮುಖಪುಟಕಾಂಗ್ರೆಸ್ ಮೊದಲ ಪಟ್ಟಿ: ಮುಸ್ಲಿಂ ಸಮುದಾಯದ 8 ಮಂದಿಗೆ, 6 ಮಹಿಳೆಯರಿಗೆ ಟಿಕೆಟ್

ಕಾಂಗ್ರೆಸ್ ಮೊದಲ ಪಟ್ಟಿ: ಮುಸ್ಲಿಂ ಸಮುದಾಯದ 8 ಮಂದಿಗೆ, 6 ಮಹಿಳೆಯರಿಗೆ ಟಿಕೆಟ್

- Advertisement -
- Advertisement -

ಕಾಂಗ್ರೆಸ್ ಪಕ್ಷವು 124 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಅದರಲ್ಲಿ ಮುಸ್ಲಿಂ ಸಮುದಾಯದ 8 ಮಂದಿಗೆ ಟಿಕೆಟ್ ಟಿಕೆಟ್ ನೀಡಲಾಗಿದೆ. ಜೊತೆಗೆ 6 ಮಹಿಳೆಯರಿಗೆ ಟಿಕೆಟ್ ಘೋಷಿಸಿದೆ. ಅದರ ವಿವರ ಈ ಕೆಳಗಿನಂತಿದೆ.

ಟಿಕೆಟ್ ಪಡೆದ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳು

ಗುಲ್ಬರ್ಗ ಉತ್ತರ- ಕನೀಜ್ ಫಾತಿಮಾ

ಬೀದರ್‌- ರಹೀಮ್ ಖಾನ್

ಶಿವಾಜಿನಗರ- ರಿಜ್ವಾನ್ ಅರ್ಷದ್

ಶಾಂತಿನಗರ- ಎನ್‌.ಎ. ಹ್ಯಾರಿಸ್‌

ಚಾಮರಾಜಪೇಟೆ- ಜಮೀರ್‌ ಅಹಮದ್ ಖಾನ್‌

ರಾಮನಗರ- ಇಕ್ಬಾಲ್ ಹುಸೇನ್‌ ಎಚ್‌.ಎ.

ಮಂಗಳೂರು- ಯು.ಟಿ. ಖಾದರ್‌

ನರಸಿಂಹರಾಜ – ತನ್ವೀರ್ ಸೇಠ್‌

ಸದ್ಯಕ್ಕೆ ಇಷ್ಟು ಜನಕ್ಕೆ ಟಿಕೆಟ್ ನೀಡಲಾಗಿದ್ದು, ಉಳಿದ 100 ಜನರ ಪಟ್ಟಿಯಲ್ಲಿ ಮತ್ತಷ್ಟು ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ತುಮಕೂರು ನಗರ, ಗಂಗಾವತಿ ಸೇರಿ ಹಲವೆಡೆ ಟಿಕೆಟ್ ಸಿಗುವ ಸಾಧ್ಯತೆಯಿದೆ.

ಕಳೆದ ಬಾರಿ ಕಾಂಗ್ರೆಸ್ ಪಕ್ಷವು 17 ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಅದರಲ್ಲಿ 7 ಕಡೆ ಗೆಲುವು ಸಾಧಿಸಿದ್ದರು.

ಮಹಿಳೆಯರ ವಿಚಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷವು 06 ಮಹಿಳೆಯರಿಗೆ ಟಿಕೆಟ್ ನೀಡಿದೆ.

ಜೆಡಿಎಸ್

ಜೆಡಿಎಸ್ ಪಕ್ಷವು 93 ಸ್ಥಾನಗಳಿಗೆ ಟಿಕೆಟ್‌ ಘೋಷಿಸಿದೆ. ಅದರಲ್ಲಿ ಮುಸ್ಲಿಂ ಸಮುದಾಯದ 04 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿದೆ.

ಖಾನಪುರ: ನಾಸೀರ್ ಭಗವಾನ್

ಹುಮ್ನಾಬಾದ – ಸಿ.ಎಂ ಫಯಾಜ್,

ದಾವಣಗೆರೆ ದಕ್ಷಿಣಕ್ಕೆ ಅಮಾನುಲ್ಲಾ,

ಹೆಬ್ಬಾಳ ಮೋಹಿದ್ ಅಲ್ತಾಫ್.

ಜೆಡಿಎಸ್ ಪಕ್ಷವು 04 ಜನ ಮಹಿಳೆಯರಿಗೆ ಟಿಕೆಟ್ ನೀಡಿದೆ.

ಆಮ್ ಆದ್ಮಿ ಪಕ್ಷ

ಆಮ್ ಆದ್ಮಿ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಯ 80 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ನಾಲ್ಕು ಜನ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ.

ಗುಲ್ಬರ್ಗ ಉತ್ತರ: ಸೈಯದ್ ಸಜ್ಜದ್ ಅಲಿ

ಬೀದರ್ ದಕ್ಷಿಣ: ನಸೀಮುದ್ದೀನ್ ಪಟೇಲ್

ಬ್ಯಾಡಗಿ: ಎಂ.ಎನ್ ನಾಯ್ಕ್

ರಾಮದುರ್ಗ: ಮಲ್ಲಿಕಾರ್ಜುನ್ ನದಾಫ್

07 ಜನ ಮಹಿಳೆಯರು ಮತ್ತು ಇಬ್ಬರೂ ಕ್ರಿಶ್ಚಿಯನ್ ಮತ್ತು ಸಾಮಾನ್ಯ ಕ್ಷೇತ್ರ ಸೇರಿ 19 ಪರಿಶಿಷ್ಟ ಜಾತಿ ಸಮುದಾಯದವರಿಗೆ ಆಪ್ ಟಿಕೆಟ್ ನೀಡಿದೆ.

ಬಿಜೆಪಿ ಪಕ್ಷವು ಇನ್ನು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಸಹ ಟಿಕೆಟ್ ನೀಡಿರಲಿಲ್ಲ.

ಇದನ್ನೂ ಓದಿ; ವಿಧಾನಸಭಾ ಚುನಾವಣೆ: 124 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟ; ಇಲ್ಲಿದೆ ವಿವರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...