Homeಮುಖಪುಟಸಂಸತ್ತಿನ ಸಿಬ್ಬಂದಿಯ ಹೊಸ ಸಮವಸ್ತ್ರದ ಮೇಲೆ ಕಮಲ ಚಿಹ್ನೆ

ಸಂಸತ್ತಿನ ಸಿಬ್ಬಂದಿಯ ಹೊಸ ಸಮವಸ್ತ್ರದ ಮೇಲೆ ಕಮಲ ಚಿಹ್ನೆ

- Advertisement -
- Advertisement -

ಸಂಸತ್ತಿನ ಸಿಬ್ಬಂದಿಯ ಹೊಸ ಸಮವಸ್ತ್ರದ ಮೇಲೆ ಆಡಳಿತ ಪಕ್ಷದ ಚುನಾವಣಾ ಚಿಹ್ನೆಯಾದ ಕಮಲವನ್ನು ಮುದ್ರಿಸಲಾಗುತ್ತಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ಎಕ್ಸ್‌ನಲ್ಲಿ ಬರೆದುಕೊಂಡಿದೆ. ಈ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು ಬಿಜೆಪಿಯು ಸಂಸತ್ತನ್ನು ಏಕಪಕ್ಷೀಯವಾಗಿ ಮಾಡಿದೆ ಎಂದು ಆರೋಪಿಸಿದೆ.

ಕಾಂಗ್ರೆಸ್  ನಾಯಕ  ಮಾಣಿಕ್ಕಂ ಟ್ಯಾಗೋರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಸಂಸತ್ತಿನ ಸಿಬ್ಬಂದಿಯ ಹೊಸ ಸಮವಸ್ತ್ರದ ಮೇಲೆ ಕಮಲವನ್ನು ಏಕೆ ಸೇರಿಸಲಾಗುತ್ತಿದೆ? ರಾಷ್ಟ್ರೀಯ ಪ್ರಾಣಿ ಹುಲಿ ಅಥವಾ ರಾಷ್ಟ್ರೀಯ ಪಕ್ಷಿ ನವಿಲನ್ನು ಏಕೆ ಸೇರಿಸಲಾಗುತ್ತಿಲ್ಲ? ಎಂದು ಟ್ಯಾಗೋರ್ ಪ್ರಶ್ನಿಸಿದರು.

ಸಂಸತ್ತಿನ ಸಿಬ್ಬಂದಿ ಹೊಸ ಡ್ರೆಸ್ ಕೋಡ್ ಹೊಂದಿದ್ದು ಅದರ ಮೇಲೆ ಕಮಲವನ್ನು ಮುದ್ರಿಸಲಾಗುತ್ತದೆ ಎಂದು  ಟೈಮ್ಸ್‌ ಆಫ್ ಇಂಡಿಯಾ ಟ್ವೀಟ್ ಮಾಡಿದೆ. ಲೋಕಸಭಾ ಮತ್ತು ರಾಜ್ಯಸಭೆ ಎರಡರಲ್ಲೂ ನಿಯೋಜಿಸಲಾದ ಸಿಬ್ಬಂದಿಗೆ ಹೊಸ ಸಮವಸ್ತ್ರ ಸೇರಿದಂತೆ ಹಲವಾರು ಬದಲಾವಣೆಗಳೊಂದಿಗೆ ಹೊಸ ಸಂಸತ್ತಿನ ಕಟ್ಟಡವು ಮುಂದಿನ ವಾರ ತನ್ನ ಮೊದಲ ಅಧಿವೇಶನವನ್ನು ನಡೆಸಲು ಸಿದ್ಧವಾಗಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ಎಕ್ಸ್‌ನಲ್ಲಿ ಬರೆದುಕೊಂಡಿದೆ.

ಸಂಸತ್ತಿನ ಸಿಬ್ಬಂದಿಯ ಉಡುಗೆಯಲ್ಲಿ ಹುಲಿಯನ್ನು ಹಾಕಲು ಸರ್ಕಾರ ಏಕೆ ಸಿದ್ಧವಾಗಿಲ್ಲ? ರಾಷ್ಟ್ರಪಕ್ಷಿಯಾಗಿರುವ ನವಿಲನ್ನು ಡ್ರೆಸ್ ನಲ್ಲಿ ಹಾಕಲು ಅವರೇಕೆ ತಯಾರಿಲ್ಲ? ಅವರು ಕಮಲವನ್ನು ಡ್ರೆಸ್ ಕೋಡ್‌ನಲ್ಲಿ ಹಾಕಲು ಯಾಕೆ ಆಯ್ಕೆ ಮಾಡಿಕೊಂಡರು. ಈ ರೀತಿಯ ಸಣ್ಣತನ ಸರಿಯಲ್ಲ, ಬಿಜೆಪಿ ಸಂಸತ್ತನ್ನು ಏಕಪಕ್ಷೀಯ ರೀತಿ ಮಾಡಬಾರದು. ಸಂಸತ್ತು ಪಕ್ಷದ ಚಿಹ್ನೆಯ ಭಾಗವಾಗುತ್ತಿದೆ. ಇದು ದುರದೃಷ್ಟಕರ ಎಂದು ಟ್ಯಾಗೋರ್ ಹೇಳಿದ್ದಾರೆ.

ಇದನ್ನು ಓದಿ: ಇಬ್ಬರು ಮುಸ್ಲಿಂ ಯುವಕರ ಹತ್ಯೆ ಪ್ರಕರಣ: ಸ್ವಯಂಘೋಷಿತ ಗೋರಕ್ಷಕ ಮೋನು ಮಾನೇಸರ್‌ ಅರೆಸ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಧ್ಯಪ್ರದೇಶ: ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಅನುಮತಿ ನಿರಾಕರಿಸಿದ ವೈದ್ಯರು; ಆಟೋ ರಿಕ್ಷಾದಲ್ಲೆ ಹೆರಿಗೆ

0
ಮಧ್ಯಪ್ರದೇಶದ ನೀಮುಚ್ ಜಿಲ್ಲಾ ಆಸ್ಪತ್ರೆಯಲ್ಲಿ ಅರಿವಳಿಕೆ ವೈದ್ಯರ ಕೊರತೆಯಿಂದಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ್ದು, 30 ವರ್ಷದ ಮಹಿಳೆಯೊಬ್ಬರು ಆಟೋ ರಿಕ್ಷಾದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗುವನ್ನು ತರುವಾಯ ಆಸ್ಪತ್ರೆಗೆ...