Homeಮುಖಪುಟಕೊರೊನಾ ಎಫೆಕ್ಟ್: ಆರು ತಿಂಗಳು ಕೇರಳದಲ್ಲಿ ಉಳಿಯಲು ಅಮೆರಿಕಾದ ಪ್ರಜೆ ಹೈಕೋರ್ಟ್‌ಗೆ ಮೊರೆ

ಕೊರೊನಾ ಎಫೆಕ್ಟ್: ಆರು ತಿಂಗಳು ಕೇರಳದಲ್ಲಿ ಉಳಿಯಲು ಅಮೆರಿಕಾದ ಪ್ರಜೆ ಹೈಕೋರ್ಟ್‌ಗೆ ಮೊರೆ

- Advertisement -
- Advertisement -

ಕೊರೊನಾ ವೈರಸಿನ ಭಯಕ್ಕೆ ಕೊರೊನಾ ವೈರಸ್ ಸುರಕ್ಷಿತ ಧಾಮವಾದ ಕೇರಳದಲ್ಲಿ ತನ್ನನ್ನು ಇರಿಸುವಂತೆ ಅಮೆರಿಕಾದ ಪ್ರಜೆ ಹೈಕೋರ್ಟಿಗೆ ಮನವಿ ಮಾಡಿದ್ದಾರೆ.

ತನ್ನನ್ನು ಇನ್ನೂ ಆರು ತಿಂಗಳು ಕೇರಳದಲ್ಲಿ ಇರಲು ಅವಕಾಶ ನೀಡುವಂತೆ ಅಮೇರಿಕಾದ ಪ್ರಜೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಕೇರಳವು ಸೋಂಕನ್ನು ಪರೀಕ್ಷಿಸಲು ತನ್ನ ದೇಶ ಅಮೆರಿಕಾಗಿಂತ ಉತ್ತಮ ಕ್ರಮಗಳನ್ನು ಅನುಸರಿಸುತ್ತಿದೆ ಹಾಗೂ ಅಮೆರಿಕಾಗಿಂತ ಕೇರಳ ಹೆಚ್ಚು ಸುರಕ್ಷಿತವೆಂದು ಅವರು ಹೇಳಿದ್ದಾರೆ.

74 ವರ್ಷದ ರಂಗಭೂಮಿ ಬರಹಗಾರ ಮತ್ತು ನಿರ್ದೇಶಕ ಟೆರ್‍ರಿ ಜಾನ್ ಕಾನ್ವರ್ಸ್, ತಮ್ಮ ವೀಸಾ ಅವಧಿ ಮೇ 17 ಕ್ಕೆ ಮುಕ್ತಾಯವಾಗುವುದರಿಂದ, ಅದನ್ನು ಇನ್ನೂ ಆರು ತಿಂಗಳು ಮುಂದೂಡುವಂತೆ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.

“ನ್ಯಾಯಾಲಯವನ್ನು ಸಂಪರ್ಕಿಸುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆ ಇರಲಿಲ್ಲ. ಅಮೆರಿಕಾದಲ್ಲಿ ಪರಿಸ್ಥಿತಿ ಅಪಾಯಕಾರಿಯಾಗಿದೆ. ಭಾರತ ಅದರಲ್ಲೂ ಮುಖ್ಯವಾಗಿ ಕೇರಳ ಅಮೆರಿಕಾಗಿಂತ ವೈರಸ್ ವಿರುದ್ದ ಉತ್ತಮ ಕೆಲಸ ಮಾಡುತ್ತಿದೆ” ಎಂದು ಟೆರ್‍ರಿ ಹೇಳುತ್ತಾರೆ


ಇದನ್ನೂ ಓದಿ: ಲಾಕ್‌ಡೌನ್ ವಿಷಯದಲ್ಲಿ ಕರ್ನಾಟಕಕ್ಕೆ ಕೇರಳ ಮಾದರಿಯಾಗಬಾರದೇಕೆ?


ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿಯ ರಂಗಭೂಮಿ ಪ್ರಾಧ್ಯಾಪಕರಾದ ಟೆರ್‍ರಿ, ಸೆಪ್ಟೆಂಬರ್ 28, 2019 ರಂದು ಕೇರಳದ ಕೊಚ್ಚಿಗೆ ಬಂದಿದ್ದರು. ಅಂದಿನಿಂದ ಅವರು ಹಲವಾರು ನಾಟಕ ಕಾರ್ಯಾಗಾರಗಳನ್ನು ನಡೆಸಿದ್ದರು.

ಟೆರ್‍ರಿ ಮಾರ್ಚ್ 27 ರೊಳಗೆ ಮರಳಬೇಕಾಗಿದ್ದರೂ, ಲಾಕ್‌ಡೌನ್ ಆಗಿದ್ದರಿಂದ ಅವರ ವೀಸಾವನ್ನು ಏಪ್ರಿಲ್ 25 ವರೆಗೆ ವಿಸ್ತರಿಸಲಾಗಿತ್ತು. ನಂತರ ಮತ್ತೇ ಲಾಕ್‌ಡೌನ್ ಅನ್ನು ಮೇ 3 ಕ್ಕೆ ವಿಸ್ತರಿಸಿದ್ದರಿಂದ ವೀಸಾವನ್ನು ಮತ್ತೊಮ್ಮೆ ಮೇ 17 ಕ್ಕೆ ವಿಸ್ತರಿಸಲಾಯಿತು. ಈಗ ಅವರು ಅಮೆರಿಕಾದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಬೆದರಿಕೆಯಿಂದಾಗಿ ಅಮೆರಿಕಾಗೆ ಹಿಂತಿರುಗುವುದು ಸುರಕ್ಷಿತವಲ್ಲ ಎಂದು ಭಾವಿಸಿದ್ದಾರೆ.

ಅವರ ಮನವಿಯನ್ನು ಆಲಿಸಿದ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿ, ಅಂತಾರಾಷ್ಟ್ರೀಯ ವಿಮಾನಗಳು ಪ್ರಾರಂಭಿಸದಿದ್ದರೆ ವೀಸಾವನ್ನು ವಿಸ್ತರಿಸಬೇಕಾಗುತ್ತದೆ ಎಂದಿದೆ.

ಟೆರ್‍ರಿ ಈ ಹಿಂದೆ ಮಲಯಾಳಂನ ಪ್ರಸಿದ್ದ ಬರಹಗಾರ ವೈಕಂ ಮುಹಮ್ಮದ್ ಬಶೀರ್ ಅವರ “ವಿಶ್ವವಿಕ್ಯಾತಮಾಯ ಮೂಕ್ಕ್”(ವಿಶ್ವಪ್ರಸಿದ್ಧ ಮೂಗು) ಎಂಬ ಸಣ್ಣ ಕಥೆಯ ನಾಟಕೀಯ ರೂಪಾಂತರವನ್ನು ನಿರ್ದೇಶಿಸಿದ್ದರು.

ಕೃಪೆ: ಮಲಯಾಳಂ ಮನೋರಮ


ಇದನ್ನೂ ಓದಿ: ಕೊರೊನಾ ವಿರುದ್ಧದ ಸಮರದಲ್ಲಿ ಕೇರಳ ಸರ್ಕಾರ ಮತ್ತು ಜನತೆಯ ಪ್ರಬುದ್ಧತೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಕೊರೋನ ನಿಯಂತ್ರಣ ಮಾಡುವಲ್ಲಿ ಕೇರಳದ ಸಾದನೆ ಶ್ಲಾಘನೀಯ ಮತ್ತು ಅನುಕರಣನೀಯ.

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...