Homeಮುಖಪುಟಒಂದು ಲಕ್ಷದತ್ತ ಸಾಗಿದ ಏಕದಿನ ಕೊರೊನಾ ಪ್ರಕರಣಗಳು: ಒಂದೇ ವಾರದಲ್ಲಿ 6 ಲಕ್ಷ ಮೀರಿದ ಭಾರತ

ಒಂದು ಲಕ್ಷದತ್ತ ಸಾಗಿದ ಏಕದಿನ ಕೊರೊನಾ ಪ್ರಕರಣಗಳು: ಒಂದೇ ವಾರದಲ್ಲಿ 6 ಲಕ್ಷ ಮೀರಿದ ಭಾರತ

ಕಳೆದ 24 ಗಂಟೆಗಳಲ್ಲಿ 72,939 ಸೋಂಕಿತರು ಗುಣಮುಖರಾಗುವುದರೊಂದಿಗೆ, ಒಟ್ಟು ಗುಣಮುಖರಾದವರ ಸಂಖ್ಯೆ, 34,71,783 ಕ್ಕೆ ಏರಿದೆ.

- Advertisement -
- Advertisement -

ಭಾರತವು ಕೊರೊನಾ ಇತಿಹಾಸದಲ್ಲಿ ದಾಖಲೆ ಬರೆದು, ಕಳೆದ 24 ಗಂಟೆಗಳಲ್ಲಿ ಅತಿಹೆಚ್ಚು 95,735 ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ಇದರಿಂದ ಒಟ್ಟು ಸೋಂಕುಗಳ ಸಂಖ್ಯೆ 44.65 ಲಕ್ಷಕ್ಕೆ ತಲುಪಿದೆ. ಒಂದು ದಿನದಲ್ಲಿ 1,172 ಸಾವುಗಳು ಸಂಭವಿಸಿವೆ.

ಭಾರತವು ಕೊನೆಯದಾಗಿ ಗರಿಷ್ಟ 90,802  ಪ್ರಕರಣಗಳನ್ನು ಕಳೆದ ಮಂಗಳವಾರ ದಾಖಲಿಸಿತ್ತು. ಈ ಒಂದು ವಾರದಲ್ಲಿಯೇ ಭಾರತವು 6,12,251 ಪ್ರಕರಣಗಳನ್ನು ದಾಖಲಿಸಿದೆ.

ಇದನ್ನೂ ಓದಿ: ಭಾರತದ ಕೊರೊನಾ ಪರೀಕ್ಷಾ ಪ್ರಮಾಣ ಕಡಿಮೆ: WHO

ಕಳೆದ 24 ಗಂಟೆಗಳಲ್ಲಿ 72,939 ಸೋಂಕಿತರು ಗುಣಮುಖರಾಗುವುದರೊಂದಿಗೆ, ಒಟ್ಟು ಗುಣಮುಖರಾದವರ ಸಂಖ್ಯೆ, 34,71,783 ಕ್ಕೆ ಏರಿದೆ.

ಪ್ರಸ್ತುತ ಭಾರತದಲ್ಲಿ 9.19 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಹಾಗಾಗಿ ವಿಶ್ವದಲ್ಲಿ ಕೊರೊನಾದಿಂದ ಬಳಲುತ್ತಿರುವ ಮತ್ತು ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ದೇಶಗಳ ಪೈಕಿ ಸದ್ಯಕ್ಕೆ ಎರಡನೇ ಸ್ಥಾನದಲ್ಲಿದೆ.


ಇದನ್ನೂ ಓದಿ: ಕೊರೊನಾ ಪ್ಯಾಕೇಜ್‌ ಅಸಮರ್ಪಕ, ದೇಶದ ಆರ್ಥಿಕತೆ ಕುಸಿಯುತ್ತಿದೆ: ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್‌ ಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...