Homeಮುಖಪುಟಸುಶಾಂತ್‌ ಸಿಂಗ್ ಸಾವಿನ ಪ್ರಕರಣ: ಸಲ್ಮಾನ್ ಖಾನ್ ಸೇರಿ 8 ಜನರ ವಿರುದ್ಧ ಸಲ್ಲಿಸಿದ್ದ ಅರ್ಜಿ...

ಸುಶಾಂತ್‌ ಸಿಂಗ್ ಸಾವಿನ ಪ್ರಕರಣ: ಸಲ್ಮಾನ್ ಖಾನ್ ಸೇರಿ 8 ಜನರ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ

- Advertisement -
- Advertisement -

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕಳೆದ ವರ್ಷ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೊಲೆ, ಆತ್ಮಹತ್ಯೆ ಸೇರಿ ವಿವಿಧ ಕೋನಗಳಲ್ಲಿ ಪ್ರಕರಣದ ತನಿಖೆ ನಡೆದಿತ್ತು. ಮಾದಕ ವಸ್ತು ಬಳಕೆ ಆಯಾಮದಲ್ಲೂ ಸಿಬಿಐ ಅನೇಕ ಕಡೆ ಶೋಧವನ್ನು ಮುಂದುವರೆಸಿತ್ತು. ಸುಶಾಂತ್ ಸಿಂಗ್ ಸಾವಿನ ಪ್ರಕರನ ವಿವಿಧ ತಿರುವುಗಳನ್ನು ಪಡೆದುಕೊಂಡು ಬಾಲಿವುಡ್‌ ನ ಅನೇಕ ಚಿತ್ರ ತಾರೆಯರ ಹೆಸರುಗಳು ಕೇಳಿ ಬಂದಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಖಾನ್, ಏಕ್ತಾ ಕಪೂರ್ ಸಾಜಿದ್ ನಾಡಿಯಾವಾಲಾ ಮುಂತಾದವರನ್ನು ಪ್ರಕರಣದ ಆರೋಪಿಗಳನ್ನಾಗಿ ಪರಿಗಣಿಸಬೇಕು ಎಂದು ಬಿಹಾರದ ಮುಝಾಪ್ಪುರ ನಗರ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿಯೊಂದು ದಾಖಲಾಗಿತ್ತು. ನಿನ್ನೆ ಬಿಹಾರದ ಮುಜಾಫರ್‌ಪುರ ಕೋರ್ಟ್‌ ಈ ಅರ್ಜಿಯನ್ನು ವಜಾಗೊಳಿಸಿದೆ.

ಇದನ್ನೂ ಓದಿ: ಸುಶಾಂತ್ ಪ್ರಕರಣ: ಸುಳ್ಳು ಸುದ್ದಿ ಹರಡುತ್ತಿದ್ದ ದೆಹಲಿ ಮೂಲದ ವ್ಯಕ್ತಿ ಬಂಧನ

ಕಳೆದ ವರ್ಷ ಮುಜಾಫರ್‌ಪುರ ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ (CJM) ನ್ಯಾಯಾಲಯವು  ಸುಧೀರ್ ಕುಮಾರ್ ಒಝಾ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಸುಧೀರ್ ಕುಮಾರ್ ಒಝಾ ಅವರು ಮತ್ತೆ ಅದೇ ನ್ಯಾಯಾಲಯದಲ್ಲಿ ಪುನರ್‌ಪರಿಶೀಲನಾ ಅರ್ಜಿಯನ್ನು ದಾಖಲಿಸಿದ್ದರು. ನಿನ್ನೆ CJM ನ್ಯಾಯಾಲಯವು ಸುಧೀರ್ ಕುಮಾರ್ ಒಝಾ ಅವರ ಅರ್ಜಿಯನ್ನು ಮತ್ತೊಮ್ಮೆ ವಜಾಗೊಳಿಸಿದೆ.

ನಟಿ, ನಿರ್ಮಾಪಕಿ ಏಕ್ತಾ ಕಪೂರ್ ಅವರ ಪರವಾಗಿ ವಾದಿಸುತ್ತಿರುವ ನ್ಯಾಯವಾದಿ ಪ್ರಿಯಾ ರಂಜನ್ ಪ್ರಕರಣದ ಕುರಿತು ಮಾಹಿತಿಯನ್ನು ನೀಡಿದ್ದು, ಸುಧೀರ್ ಒಝಾ ಅವರ ಆರೋಪಗಳು ಆಧಾರ ರಹಿತವಾಗಿದ್ದವು. ನ್ಯಾಯಾಲಯವು ನಮ್ಮ ವಾದವನ್ನು ಪರಿಗಣಿಸಿ ಪ್ರಕರಣವನ್ನು ವಜಾಗೊಳಿಸಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೈದ್ಯಕೀಯ ಆಮ್ಲಜನಕ ಬಳಸಿಕೊಂಡ ದೆಹಲಿ: ಸುಪ್ರೀಂ ಕೋರ್ಟ್ ಸಮಿತಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...