ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ನಕಲಿ ಸುದ್ದಿ ಹರಡಿದ ಆರೋಪದ ದೆಹಲಿಯ ನಿವಾಸಿಯೊಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ವಕೀಲರೆಂದು ಹೇಳಿಕೊಳ್ಳುವ ಈ ವ್ಯಕ್ತಿಯನ್ನು ಪೊಲೀಸರು ಮುಂಬೈಗೆ ಕರೆತಂದಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆರೋಪಿ ವಿಭೋರ್ ಆನಂದ್ ಅವರ ಟ್ವಿಟ್ಟರ್‌ ಖಾತೆಯನ್ನು ಅಮಾನತುಗೊಳಿಸಲಾಗಿದೆ. ಆರೋಪಿ ಸಾಮಾಜಿಕ ಮಾಧ್ಯಮದಲ್ಲಿ, ಸುಶಾಂತ್ ಮತ್ತು ಆತನ ಮಾಜಿ ಮ್ಯಾನೇಜರ್‌ ದಿಶಾ ಸಾಲಿಯನ್ ಅವರ ಸಾವಿನ ಪ್ರಕರಣಗಳಲ್ಲಿ ಹಲವಾರು ಸಂವೇದನಾಶೀಲ ಮತ್ತು ಮಾನಹಾನಿ ಮಾಡುವಂತಹ ನಕಲಿ ಆರೋಪಗಳನ್ನು ಮಾಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮುಂಬೈಗೆ ಕರೆತರಲಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಹಲವಾರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿಭೋರ್ ಆನಂದ್, ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್‌ ಮೃತ ದಿಶಾ ಸಾಲಿಯನ್ ಸಾವಿನ ಕುರಿತು ಅನೇಕ ಕೆಟ್ಟ, ಸುಳ್ಳು ಆರೋಪಗಳನ್ನು ಮಾಡಿದ್ದರು. ದಿಶಾ ಸಾವಿಗೂ ಮುನ್ನ ಅತ್ಯಾಚಾರಕ್ಕೆ ಒಳಗಾಗಿದ್ದರು ಎಂದು ಹಲವಾರು ಗಣ್ಯ ವ್ಯಕ್ತಿಗಳ ಹೆಸರುಗಳನ್ನು ಪ್ರಸ್ತಾಪ ಮಾಡಿದ್ದರು ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಸುಶಾಂತ್ ಕೇಸ್: ನಕಲಿ ಸುದ್ದಿ ಪ್ರಸಾರ, ಆಜ್‌ ತಕ್ ವಾಹಿನಿಗೆ 1 ಲಕ್ಷ ರೂ. ದಂಡ

ದಿಶಾ ಸಾಲಿಯನ್ ಕಳೆದ ಜೂನ್ 8 ರಂದು ಮುಂಬೈನ ತಮ್ಮ ನಿವಾಸದ ಕಟ್ಟಡದ 14ನೇ ಮಹಡಿಯಿಮದ ಬಿದ್ದು ಸಾವನ್ನಪ್ಪಿದ್ದರು. ನಂತರ ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು.

ಎನ್‌ಡಿಟಿವಿಗೆ  ಹೇಳಿಕೆ ನೀಡಿರುವ ಮುಂಬೈ ಪೊಲೀಸ್ ಆಯುಕ್ತ ಪರಮ್ ಬೀರ್‌ಸಿಂಗ್, “ಮುಂಬೈ ಪೊಲೀಸರು ಕೆಟ್ಟ ಕೆಲಸ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಆರೋಪಗಳು, ವದಂತಿಗಳು ಪ್ರಾರಂಭವಾಗಿತ್ತು. ನಾವು ಸಾಕಷ್ಟು ನಿಂದನೆಗಳನ್ನು ಎದುರಿಸಿದ್ದೇವೆ. ಆದರೆ ನಮ್ಮ ತನಿಖೆಯ ಬಗ್ಗೆ ನಮಗೆ ಯಾವಾಗಲೂ ಖಚಿತತೆ ಇತ್ತು” ಎಂದು ಹೇಳಿದ್ದಾರೆ.

ಕಳೆದ ತಿಂಗಳು ಮುಂಬೈ ಪೊಲೀಸರು ಪತ್ರಕರ್ತ ಎಂದು ಹೇಳಿಕೊಳ್ಳುತ್ತಿದ್ದ ಸಾಹೀಲ್ ಚೌಧರಿ ಅಲಿಯಾಸ್ ಪ್ರದೀಪ್ ಮೊಹಿಂದರ್ ಸಿಂಗ್ ಚೌಧರಿ ಎಂಬ ಮಾಡೆಲ್ ಮತ್ತು ಯೂಟ್ಯೂಬರ್ ಒಬ್ಬರನ್ನು ಬಂಧಿಸಿದ್ದರು. ಮಹಿಳೆಯರ ವಿರುದ್ಧ ನಿಂದನೀಯ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಆತನನ್ನು ಮಹಿಳೆಯೊಬ್ಬರ ದೂರಿನ ಆಧಾರದಲ್ಲಿ ಬಂಧಿಸಿದ್ದರು. ಸಾಹೀಲ್ ಚೌಧರಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ರಜಪೂತ್ ಅವರ ಸಾವಿನ ಕುರಿತು ಹಲವು ವಿಡಿಯೋಗಳನ್ನು ಬಿಟ್ಟಿದ್ದರು.

ಆರೋಪಿ ಚೌಧರಿ ತಾನು ಪತ್ರಕರ್ತನಲ್ಲ ಎಂದು ಒಪ್ಪಿಕೊಂಡಿದ್ದಾನೆ ಮತ್ತು ತನ್ನ ಯೂಟ್ಯೂಬ್ ಚಾನೆಲ್ ಮತ್ತು ಇನ್ಸ್‌ಸ್ಟ್ರಾಗ್ರಾಂ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಫಾಲೋವರ್ಸ್ ಹೆಚ್ಚಿಸಲು ವೀಡಿಯೊಗಳನ್ನು ಅಪ್ಲೋಡ್ ಮಾಡುತ್ತಿದ್ದರು ಎಂದು ಪೊಲೀ‌ಸರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಸುಳ್ಳು ಸುದ್ದಿ ಪ್ರಸಾರ: ರಿಪಬ್ಲಿಕ್ ಟಿವಿಯಿಂದ 200 ಕೋಟಿ ಮಾನನಷ್ಟ ಪರಿಹಾರ ಕೇಳಿದ ಸುಶಾಂತ್ ಗೆಳೆಯ!

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here