Homeಕರೋನಾ ತಲ್ಲಣಕೋವಿಡ್ ಇಳಿಮುಖ: ಭಾರತದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ದೈನಂದಿನ ಪ್ರಕರಣಗಳು

ಕೋವಿಡ್ ಇಳಿಮುಖ: ಭಾರತದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ದೈನಂದಿನ ಪ್ರಕರಣಗಳು

- Advertisement -
- Advertisement -

ದೇಶದಲ್ಲಿ ಕೊರೊನಾ ವೈರಸ್‌ನ ಮೂರನೇ ಅಲೆ ಕಡಿಮೆಯಾದಂತೆ ಭಾಸವಾಗುತ್ತಿದ್ದು, ಭಾರತದ ದೈನಂದಿನ ಕೋವಿಡ್ -19 ಸೊಂಕಿತ ಪ್ರಕರಣಗಳ ಸಂಖ್ಯೆ ಸೋಮವಾರ ಒಂದು ಲಕ್ಷಕ್ಕಿಂತ ಕಡಿಮೆಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ದೈನಂದಿನ ಆರೋಗ್ಯ ಬುಲೆಟಿನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ 83,876 ಹೊಸ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಒಟ್ಟಾರೆ ಸೊಂಕಿತರ ಸಂಖ್ಯೆ ಈಗ 4,22,72,014ಕ್ಕೆ ತಲುಪಿದೆ.

ಒಂದು ದಿನದಲ್ಲಿ 895 ಕೋವಿಡ್‌ ಸಂಬಂಧಿತ ಸಾವುನೋವುಗಳೊಂದಿಗೆ, ಭಾರತದ ಒಟ್ಟು ಸಾವಿನ ಸಂಖ್ಯೆ 5,02,874ಗೆ ತಲುಪಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 1,16,073 ಪ್ರಕರಣಗಳನ್ನು ಕಡಿಮೆಯಾದ ನಂತರ ಸಕ್ರಿಯ ಪ್ರಕರಣಗಳ ಸಂಖ್ಯೆ 11,08,938 ಕ್ಕೆ ಇಳಿದಿದೆ. ಒಟ್ಟು ಸೋಂಕಿತ ಪ್ರಕರಣಗಳಲ್ಲಿ 2.62 ಪ್ರತಿಶತನಷ್ಟು ಸಕ್ರಿಯ ಸೋಂಕಿತ ಪ್ರಕರಣಗಳಲ್ಲಿ ಇಳಿಕೆಯಾಗಿದೆ.

ಆರೋಗ್ಸ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕೋವಿಡ್‌ ಪಾಸಿಟಿವ್ ದರವು ಶೇಕಡಾ 7.25 ಕ್ಕೆ ಕುಸಿದಿದೆ ಹಾಗೆಯೆ ರಾಷ್ಟ್ರೀಯ ಕೋವಿಡ್ -19 ಚೇತರಿಕೆಯ ದರವು ಶೇಕಡಾ 96.19 ಕ್ಕೆ ಸುಧಾರಿಸಿದೆ. ವಾರದ ಪಾಸಿಟಿವ್ ದರವು ಶೇ. 9.18 ರಷ್ಟಾಗಿದೆ.

ಸೋಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4,06,60,202 ಕ್ಕೆ ಏರಿದೆ. ಆದರೆ ಸೋಂಕಿನಿಂದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ ಎಂದು ಬುಲೆಟಿನ್ ತಿಳಿಸಿದೆ.

ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕೆ ಅಭಿಯಾನ ಅಡಿಯಲ್ಲಿ ಇದುವರೆಗೆ ದೇಶದಲ್ಲಿ 169.63 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.

ಪ್ರಕರಣಗಳ ಇಳಿಕೆ ಮತ್ತು ಚೇತರಿಕೆ ಪ್ರಮಾಣ ಹೆಚ್ಚಾದ ಹಿನ್ನೆಲೆ, ಅನೇಕ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತ ಮಂಡಳಿಯವರು ಶಿಕ್ಷಣ ಸಂಸ್ಥೆಗಳನ್ನು ಪುನಃ ತೆರೆಯಲು ನಿರ್ಧರಿಸಿದ್ದಾರೆ.

ಅನೇಕ ರಾಜ್ಯ ಸರ್ಕಾರಗಳು ಸೋಮವಾರದಿಂದ (ಫೆಬ್ರವರಿ 7) ಶಾಲೆಗಳು ಮತ್ತು ಕಾಲೇಜುಗಳನ್ನು ಪುನರಾರಂಭಿಸುತ್ತಿವೆ. ಆದರೆ ಹಲವು ರಾಜ್ಯಗಳು ಪ್ರೌಢ ತರಗತಿಗಳಿಗೆ ಮಾತ್ರ (9 ರಿಂದ 12) ಅನುಮತಿ ನೀಡಿವೆ. ಇನ್ನೂ ಕೆಲವು ರಾಜ್ಯಗಳಲ್ಲಿ ಪ್ರಾಥಮಿಕ ಶಾಲೆಗಳನ್ನೂ ಸಹ ಪುನಃ ತೆರೆಯಲು ಆದೇಶಿಸಿವೆ.

ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ಭಾನುವಾರ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರೊಂದಿಗೆ ಪರಿಶೀಲನಾ ಸಭೆಯನ್ನು ನಡೆಸಿದ್ದು, ಕೇಂದ್ರ ಸರ್ಕಾರದ ನೌಕರರನ್ನು ಯಾವುದೇ ವಿನಾಯಿತಿ ಇಲ್ಲದೆ ದೈಹಿಕವಾಗಿ ಕಚೇರಿಗೆ ಹಾಜರಾಗಲು ಆದೇಶ ಹೊರಡಿಸಿದೆ. ಅದರ ನಂತರ ತನ್ನ ನೌಕರರ 100% ಭರ್ತಿಯೊಂದಿಗೆ ಪುನರಾರಂಭಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.


ಇದನ್ನು ಓದಿ: ಬಹುಜನ ಭಾರತ; ದೇಶದ ಬಹುಜನರ ಅಣಕಿಸುವ ಬಜೆಟ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...