Homeಮುಖಪುಟಕ್ರಿಮಿನಲ್ ವ್ಯಾಪ್ತಿಗೆ ಸಲಿಂಗಕಾಮ, ಸೆಕ್ಸ್‌ ವರ್ಕ್‌? ಸಂಸದೀಯ ಸಮಿತಿ ಸಲಹೆ ತಿರಸ್ಕರಿಸಿದ ಪಿಎಂ

ಕ್ರಿಮಿನಲ್ ವ್ಯಾಪ್ತಿಗೆ ಸಲಿಂಗಕಾಮ, ಸೆಕ್ಸ್‌ ವರ್ಕ್‌? ಸಂಸದೀಯ ಸಮಿತಿ ಸಲಹೆ ತಿರಸ್ಕರಿಸಿದ ಪಿಎಂ

- Advertisement -
- Advertisement -

ಸ್ವಾತಂತ್ರ್ಯ ಪೂರ್ವದಲ್ಲಿ ಜಾರಿಯಾಗಿರುವ ಕ್ರಿಮಿನಲ್ ಕಾನೂನುಗಳನ್ನು ಬದಲಿಸಲು ಮುಂದಾಗಿರುವ ‘ಕ್ರಿಮಿನಲ್ ಕಾನೂನು ತಿದ್ದುಪಡಿ ಮಸೂದೆ’ಗಳನ್ನು ಮಂಡಿಸಲು ಕೇಂದ್ರ ಸಂಪುಟ ಸಭೆಯು ಗೃಹ ಸಚಿವ ಅಮಿತ್ ಶಾ ಅವರಿಗೆ ಅನುಮತಿ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸೆಕ್ಸ್‌ವರ್ಕ್‌ ಮತ್ತು ಸಲಿಂಗ ಸಂಬಂಧಗಳನ್ನು ಕ್ರಿಮಿನಲ್ ವ್ಯಾಪ್ತಿಗೆ ತರುವುದಕ್ಕೆ ಗೃಹ ಇಲಾಖೆಗೆ ಸಂಸದೀಯ ಸ್ಥಾಯಿ ಸಮಿತಿ ನೀಡಿದ ಎರಡು ಪ್ರಮುಖ ಸಲಹೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕಚೇರಿ ಒಪ್ಪಲಿಲ್ಲ ಎನ್ನಲಾಗಿದೆ. ಏಕೆಂದರೆ, ಇವುಗಳನ್ನು ಕ್ರಿಮಿನಲ್ ವ್ಯಾಪ್ತಿಗೆ ತರುವುದರಿಂದ ಸರ್ಕಾರವು ದೂರಗಾಮಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ, ಸುಪ್ರೀಂಕೋರ್ಟ್ ಮತ್ತು ಅದರ ತೀರ್ಪುಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ನಿರಾಕರಿಸಿದೆ ಎನ್ನಲಾಗಿದೆ.

2023ರ ಭಾರತೀಯ ನ್ಯಾಯ ಸಂಹಿತಾ ಮಸೂದೆಯಲ್ಲಿ ವ್ಯಭಿಚಾರದ ಅಪರಾಧವನ್ನು ಉಳಿಸಿಕೊಳ್ಳಬೇಕೆಂದು ಸಮಿತಿಯು ಶಿಫಾರಸು ಮಾಡಿತ್ತು. ಆದರೆ 2018 ರಲ್ಲಿ ಸುಪ್ರೀಂಕೋರ್ಟ್ ಇದನ್ನು ಅಪರಾಧ ಎಂದು ಕರೆಯುವುದಕ್ಕೆ ನಿರಾಕರಿಸಿತ್ತು. ಈ ನಿರ್ಧಾರವು ಮಹಿಳೆಯರ ವಿರುದ್ಧ ತಾರತಮ್ಯವನ್ನು ಶಾಶ್ವತಗೊಳಿಸುತ್ತದೆ ಮತ್ತು ಮಹಿಳೆಯರ ಘನತೆಯನ್ನು ಕುಗ್ಗಿಸುತ್ತದೆ ಎಂದು ಹೇಳಿತ್ತು.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 377ರ ಅಡಿಯಲ್ಲಿ ಒಮ್ಮತವಿಲ್ಲದ ಕಾರ್ಯಗಳಿಗೆ ದಂಡ ವಿಧಿಸುವುದು ಸ್ಥಾಯಿ ಸಮಿತಿಯ ಮತ್ತೊಂದು ಶಿಫಾರಸು. ಒಪ್ಪಿಗೆಯ ವಯಸ್ಕರ ನಡುವಿನ ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸುವುದನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದರೂ ಸಹ, ಹೊಸ ಮಸೂದೆಯಲ್ಲಿ ಈ ನಿಬಂಧನೆಯನ್ನು ಉಳಿಸಿಕೊಳ್ಳಲು ಗೃಹ ಇಲಾಖೆ ಮನವಿ ಮಾಡಿದೆ. ಪುರುಷ, ಮಹಿಳೆ, ತೃತೀಯಲಿಂಗಿಗಳ ಸಮ್ಮತಿಯಿಲ್ಲದ ಲೈಂಗಿಕ ಅಪರಾಧಕ್ಕೆ ಶಿಕ್ಷೆ ವಿಧಿಸುವುದಕ್ಕೆ ಯಾವುದೇ ನಿಬಂಧನೆ ಇಲ್ಲ ಎಂದು ಹೇಳಿದ್ದಾರೆ.

ವ್ಯಭಿಚಾರದ ಅಪರಾಧದಲ್ಲಿ ಮಹಿಳೆಯ ಸ್ವಾಯತ್ತತೆಯನ್ನು ಕಡೆಗಣಿಸಿ ಪುರುಷನಿಗೆ ಮಾತ್ರ ದಂಡ ವಿಧಿಸುವ ಮೂಲಕ ಹೆಂಡತಿಯನ್ನು ಗಂಡನ ಆಸ್ತಿಯಂತೆ ಪರಿಗಣಿಸಲಾಗಿದೆ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಈ ಹಿಂದೆ ಹೇಳಿದೆ. ಸಂಸದೀಯ ಸಮಿತಿಯು ವೈವಾಹಿಕ ವ್ಯವಸ್ಥೆಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಭಾರತೀಯ ಸಮಾಜದಲ್ಲಿ ಅದನ್ನು ರಕ್ಷಿಸಬೇಕು ಎಂದು ಅಭಿಪ್ರಾಯಪಟ್ಟಿದೆ. ಆದರೆ, ಪ್ರಧಾನಿ ಕಚೇರಿ ಮತ್ತು ಸಚಿವ ಸಂಪುಟ ಈ ಶಿಫಾರಸನ್ನು ಒಪ್ಪಿಕೊಳ್ಳದಿರುವ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ; ‘ಇತಿಹಾಸವೊಂದೇ ಅಂತಿಮ ತೀರ್ಪುಗಾರ’; ಸುಪ್ರೀಂ ತೀರ್ಪಿನ ಬಳಿಕ ಕಪಿಲ್ ಪ್ರತಿಕ್ರಿಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಾಯುವ ಮುನ್ನ ‘ಹೇ ರಾಮ್’ ಎಂದ ಮಹಾತ್ಮಾ ಗಾಂಧಿಯನ್ನು ಅನುಸರಿಸುತ್ತೇವೆ: ಪ್ರಿಯಾಂಕಾ ಗಾಂಧಿ

0
"ನಮ್ಮ ಪಕ್ಷವು ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಅನುಸರಿಸುತ್ತದೆ; ಅವರು ಸಾಯುವ ಮೊದಲು 'ಹೇ ರಾಮ್' ಎಂದು ಉಚ್ಚರಿಸಿದರು. ಆದರೆ, ಕಾಂಗ್ರೆಸ್ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮ ವಿರೋಧಿ ಎಂದು ಆರೋಪಿಸುವುದು...