Homeಮುಖಪುಟಶರದ್ ಪವಾರ್ 'OBC': ವೈರಲ್‌ ಆದ ಪ್ರಮಾಣಪತ್ರ

ಶರದ್ ಪವಾರ್ ‘OBC’: ವೈರಲ್‌ ಆದ ಪ್ರಮಾಣಪತ್ರ

- Advertisement -
- Advertisement -

ಶರದ್ ಪವಾರ್ ಅವರನ್ನು ಒಬಿಸಿ ಎಂದು ತೋರಿಸುವ ಶಾಲಾ ಪ್ರಮಾಣಪತ್ರದ ಪ್ರತಿ ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗಿದ್ದು, ಎನ್‌ಸಿಪಿ ಇದನ್ನು ನಕಲಿ ಮತ್ತು ಬಾಲಿಶ ಕೃತ್ಯ ಎಂದು ಹೇಳಿದೆ.

ಪವಾರ್ ಅವರ ಪುತ್ರಿ ಮತ್ತು ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಮತ್ತು ಜಮಖೇಡ್‌ನ ಶಾಸಕರಾಗಿರುವ ರೋಹಿತ್ ಪವಾರ್ ಅವರು ಕೃತ್ಯವನ್ನು ಖಂಡಿಸಿದ್ದಾರೆ.

ಪವಾರ್‌ಗಳು ಮರಾಠ ಸಮುದಾಯದಿಂದ ಬಂದವರು ಮತ್ತು ಶರದ್ ಪವಾರ್ ಅವರು ಹಿರಿಯ ರಾಜಕಾರಣಿ. ಅವರು 4 ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು ಮತ್ತು ಮೂರು ಬಾರಿ ಕೇಂದ್ರ ಸಚಿವರಾಗಿದ್ದರು. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವುದರ ಜೊತೆಗೆ ರಕ್ಷಣೆ ಇಲಾಖೆ, ಕೃಷಿಯಂತಹ ಖಾತೆಗಳನ್ನು ನಿರ್ವಹಿಸಿದ್ದಾರೆ. ರಾಜಕೀಯ ವಲಯದಲ್ಲಿ ಮರಾಠಾ ಸಮುದಾಯದ ಪ್ರಬಲ ವ್ಯಕ್ತಿ ಎಂಬ ಹೆಸರನ್ನು ಪಡೆದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸುಪ್ರಿಯಾ ಸುಳೆ, ವೈರಲ್‌ ಆದ ಪ್ರಮಾಣಪತ್ರ ನಕಲಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸುವುದು ದೊಡ್ಡ ವಿಷಯವಾಗಿದೆ. ಅಂತಹ ದಾಖಲೆಗಳನ್ನು ಪ್ರಸಾರ ಮಾಡುವುದು ಮತ್ತು ಆರೋಪಗಳನ್ನು ಮಾಡುವುದು ನಿಜವಾಗಿಯೂ ಬಾಲಿಶವಾಗಿದೆ ಎಂದು ಹೇಳಿದ್ದಾರೆ.

ಪ್ರಮಾಣಪತ್ರವು ಇಂಗ್ಲಿಷ್‌ನಲ್ಲಿದೆ, ಪವಾರ್ ಅವರು 10ನೇ ತರಗತಿಯಲ್ಲಿ ಓದುತ್ತಿದ್ದಾಗ ಅಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಇದ್ದವೇ? ಎಂದು ಸುಪ್ರಿಯಾ ಸುಳೆ ಪ್ರಶ್ನಿಸಿದ್ದಾರೆ.

ಶಾಸಕ ರೋಹಿತ್ ಪವಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಂತಹ ನಕಲಿ ದಾಖಲೆಗಳ ಚಲಾವಣೆಯ ಹಿಂದೆ ಬಿಜೆಪಿ ಕೈವಾಡವಿದೆ. ಇದು ಬಿಜೆಪಿಯ ಸಂಸ್ಕೃತಿ, ಅವರಿಗೆ ಸತ್ಯ ಗೊತ್ತಿಲ್ಲ, ಅವರು ನಕಲಿ ವಿಷಯಗಳನ್ನು ಹರಿಬಿಡುತ್ತಾರೆ. ಇದನ್ನು ಹರಡುವುದರ ಹಿಂದೆ ಕೆಲವು ಸಾಮಾಜಿಕ ಮಾದ್ಯಮದವರು ಮತ್ತು ಬಿಜೆಪಿಯ ಟ್ರೋಲ್ ಪಡೆ ಇದ್ದಾರೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದೆ. ಮೀಸಲಾತಿ ಪರ ಹೋರಾಟಗಾರ ಮನೋಜ್‌ ಜಾರಂಗೆ ಇತ್ತೀಚೆಗೆ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡಿದ್ದರು. ಸರಕಾರ ಮರಾಠರಿಗೆ ಮೀಸಲಾತಿ ನೀಡುವ ಭರವಸೆ ನೀಡಿದೆ. ಆದರೆ ಸರಕಾರದ ನಿಲುವಿಗೆ ಒಬಿಸಿ ಸಮುದಾಯ ವ್ಯಾಪಕವಾದಂತಹ ವಿರೋಧವನ್ನು ವ್ಯಕ್ತಪಡಿಸಿದೆ. ಮರಾಠರಿಗೆ ಒಬಿಸಿಯಡಿ ಮೀಸಲಾತಿ ನೀಡಿದರೆ ರಾಜ್ಯದಲ್ಲಿ ವ್ಯಾಪಕವಾಗಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದೆ.

ಇದನ್ನು ಓದಿ: ಮಹಿಳಾ ಪತ್ರಕರ್ತೆ ಜೊತೆ ಅನುಚಿತ ವರ್ತನೆ: ಬಿಜೆಪಿ ನಾಯಕ ಸುರೇಶ್‌ ಗೋಪಿಗೆ ಸಮನ್ಸ್‌

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ಮಾಡಿದ್ದಾರೆ ಎಂಬುವುದು ಸುಳ್ಳು

0
"ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆ ಮಧ್ಯೆಯೇ ಬಹಿರಂಗವಾಗಿ ಗೋಹತ್ಯೆ ಮಾಡಿದ್ದಾರೆ" ಎಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೀಪ್‌ ಒಂದರ ಮುಂಭಾಗದಲ್ಲಿ ಹಸುವಿನ ಕಳೇಬರ ಕಟ್ಟಿದಂತೆ ಕಾಣುತ್ತಿದೆ. ಫ್ಯಾಕ್ಟ್‌ಚೆಕ್ : ವಿಡಿಯೋದ ಸತ್ಯಾಸತ್ಯತೆಯನ್ನು ನಾವು...