Homeಮುಖಪುಟಗಾಝಾ ನರಮೇಧವನ್ನು ಬೆಂಬಲಿಸುವ ಸರಕಾರಗಳಿಗೆ ನಾಚಿಕೆಯಾಗಬೇಕು; ಪ್ರಿಯಾಂಕ ಗಾಂಧಿ

ಗಾಝಾ ನರಮೇಧವನ್ನು ಬೆಂಬಲಿಸುವ ಸರಕಾರಗಳಿಗೆ ನಾಚಿಕೆಯಾಗಬೇಕು; ಪ್ರಿಯಾಂಕ ಗಾಂಧಿ

- Advertisement -
- Advertisement -

ಗಾಝಾದಲ್ಲಿ 11,000ಕ್ಕೂ ಹೆಚ್ಚು ಜನರ ಹತ್ಯೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಖಂಡಿಸಿದ್ದು,  ಈ ಸ್ಥಿತಿ ಶೋಚನೀಯವಾಗಿದೆ. ನರಮೇಧವನ್ನು ಬೆಂಬಲಿಸುತ್ತಿರುವ ಸರ್ಕಾರಗಳಿಗೆ ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

ಈ ನರಮೇಧವನ್ನು ಬೆಂಬಲಿಸುವವರ ಆತ್ಮಸಾಕ್ಷಿಗೆ ಇನ್ನೂ ಯಾವುದೇ ತೊಂದರೆಯಾಗಿಲ್ಲ ಎಂದು ಪ್ರಿಯಾಂಕ ಗಾಂಧಿ ಇದೇ ವೇಳೆ ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಪ್ರಿಯಾಂಕ ಗಾಂಧಿ, ಎಂತಹ ಶೋಚನಿಯ ಮತ್ತು ಅವಮಾನಕಾರಿ ಬೆಳವಣಿಗೆ, ಗಾಝಾದಲ್ಲಿ 10,000ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು ಅದರಲ್ಲಿ ಅರ್ಧದಷ್ಟು ಮಕ್ಕಳಿದ್ದಾರೆ. WHO ಪ್ರಕಾರ ಪ್ರತಿ 10 ನಿಮಿಷಕ್ಕೆ ಒಂದು ಮಗು ಕೊಲ್ಲಲ್ಪಡುತ್ತಿದೆ ಮತ್ತು ಈಗ ಸಣ್ಣ ಶಿಶುಗಳನ್ನು ಆಮ್ಲಜನಕದ ಕೊರತೆಯಿಂದಾಗಿ ಸಾಯಲು ಬಿಡಲಾಗಿದೆ ಎಂದು ಹೇಳಿದ್ದಾರೆ.

ಈ ನರಮೇಧವನ್ನು ಬೆಂಬಲಿಸುವವರ ಆತ್ಮಸಾಕ್ಷಿಗೆ ಯಾವುದೇ ಆಘಾತವಾಗಿಲ್ಲ, ಕದನ ವಿರಾಮವಿಲ್ಲ,  ಕೇವಲ ಬಾಂಬ್‌ಗಳನ್ನು ಹಾಕಲಾಗುತ್ತಿದೆ, ಹಿಂಸಾಚಾರ ಹೆಚ್ಚಾಗಿದೆ, ಹೆಚ್ಚು ಹತ್ಯೆಗಳು ನಡೆಯುತ್ತಿದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಗಾಯಗಳಾಗುತ್ತಿದೆ. ಈ ವಿನಾಶವನ್ನು ಬೆಂಬಲಿಸುತ್ತಿರುವ ಸರ್ಕಾರಗಳಿಗೆ ನಾಚಿಕೆಯಾಗಬೇಕು ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.

ಅ.7ರಂದು ಇಸ್ರೇಲ್‌ ಮೇಲೆ ಹಮಾಸ್ ರಾಕೆಟ್‌ ದಾಳಿ ನಡೆಸಿದ ನಂತರ ಇಸ್ರೇಲ್ ಯುದ್ಧ ಘೋಷಿಸಿದೆ. ಯುದ್ಧ 1 ತಿಂಗಳು ಕಳೆದಿದ್ದು, ಗಾಝಾ ಪಟ್ಟಿ ಮೇಲಿನ ಇಸ್ರೇಲ್‌ ಬಾಂಬ್ ದಾಳಿ ಮುಂದುವರಿದಿದೆ.
ಇಸ್ರೇಲ್‌ ಅಧಿಕಾರಿಗಳ ಪ್ರಕಾರ ಇಸ್ರೇಲ್‌ ಮೇಲೆ ಹಮಾಸ್‌ ನಡೆಸಿದ ದಾಳಿಯಲ್ಲಿ 1,200 ಜನರು ಮೃತಪಟ್ಟಿದ್ದಾರೆ. 240 ಜನರನ್ನು ಒತ್ತೆಯಾಳುಗಳಾಗಿ ಇಡಲಾಗಿದೆ.

ಗಾಝಾ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಮೃತರ ಸಂಖ್ಯೆ 11,100ಕ್ಕೆ ಏರಿಕೆಯಾಗಿದೆ ಎಂದು ಪ್ಯಾಲೆಸ್ತೀನ್‌ ಆರೋಗ್ಯ ಸಚಿವಾಲಯ ತಿಳಿಸಿದೆ. ಮೃತರಲ್ಲಿ 4,506 ಮಕ್ಕಳು, 3,027 ಮಹಿಳೆಯರು, 6,78 ವಯಸ್ಕರು ಸೇರಿದ್ದಾರೆ. ಇದೇ ವೇಳೆ  27,490ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್‌ ಆರೋಗ್ಯ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ಇಸ್ರೇಲ್ ದಾಳಿಯಿಂದ ನೆಲಸಮವಾದ ಕಟ್ಟಡಗಳ ಅವಶೇಷಗಳಡಿಯಲ್ಲಿ 1,500 ಮಕ್ಕಳು ಸೇರಿದಂತೆ 2,700 ಜನರು ಸಿಲುಕಿಕೊಂಡಿದ್ದಾರೆ. ಇಸ್ರೇಲ್‌ ಆಕ್ರಮಣಕ್ಕೆ 198 ವೈದ್ಯಾಧಿಕಾರಿಗಳು ಮೃತಪಟ್ಟಿದ್ದಾರೆ.  53 ಆಂಬ್ಯುಲೆನ್ಸ್‌ಗಳನ್ನು ಧ್ವಂಸಗೊಳಿಸಲಾಗಿದೆ. ಇಸ್ರೇಲ್ 135 ಆರೋಗ್ಯ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು 21 ಆಸ್ಪತ್ರೆಗಳು ಮತ್ತು 47 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಂದ್ ಮಾಡುವಂತಾಗಿದೆ ಎಂದು  ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕುದ್ರಾ ಹೇಳಿದ್ದಾರೆ.

ಇದನ್ನು ಓದಿ:ಮಹಿಳಾ ಪತ್ರಕರ್ತೆ ಜೊತೆ ಅನುಚಿತ ವರ್ತನೆ: ಬಿಜೆಪಿ ನಾಯಕ ಸುರೇಶ್‌ ಗೋಪಿಗೆ ಸಮನ್ಸ್‌ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...