Homeಮುಖಪುಟಇಸ್ರೇಲ್ ದಾಳಿಯಿಂದ ಕಾರ್ಯಚರಣೆ ನಿಲ್ಲಿಸಿದ ಗಾಜಾದ ಎರಡು ದೊಡ್ಡ ಆಸ್ಪತ್ರೆಗಳು

ಇಸ್ರೇಲ್ ದಾಳಿಯಿಂದ ಕಾರ್ಯಚರಣೆ ನಿಲ್ಲಿಸಿದ ಗಾಜಾದ ಎರಡು ದೊಡ್ಡ ಆಸ್ಪತ್ರೆಗಳು

- Advertisement -
- Advertisement -

ಪ್ಯಾಲೇಸ್ಟಿನಿಯನ್ ಎನ್‌ಕ್ಲೇವ್‌ನಲ್ಲಿ ಇಸ್ರೇಲ್‌ನ ದಾಳಿ ಏಳನೇ ವಾರಕ್ಕೆ ಪ್ರವೇಶಿಸುತ್ತಿದ್ದಂತೆ ಗಾಜಾದಲ್ಲಿನ ಎರಡು ಪ್ರಮುಖ ಆಸ್ಪತ್ರೆಗಳು ಭಾನುವಾರ ಹೊಸ ರೋಗಿಗಳಿಗೆ ಮುಚ್ಚಲ್ಪಟ್ಟವು ಎಂದು ರಾಯಿಟರ್ಸ್ ವರದಿ ಮಾಡಿದೆ.

ಗಾಜಾದ ಎರಡು ಅತಿದೊಡ್ಡ ಆಸ್ಪತ್ರೆಗಳಾದ ಅಲ್-ಶಿಫಾ ಮತ್ತು ಅಲ್-ಕುದ್ಸ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ಕಳೆದ 36 ದಿನಗಳಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ಗಾಜಾದಲ್ಲಿ ಆರೋಗ್ಯ ಸೌಲಭ್ಯಗಳ ಮೇಲೆ ಕನಿಷ್ಠ 137 ದಾಳಿಗಳಾಗಿವೆ ಎನ್ನುವ ವರದಿ ದಾಖಲಾಗಿದೆ, ಇದರ ಪರಿಣಾಮವಾಗಿ 521 ಸಾವುಗಳು ಮತ್ತು 686 ಗಾಯಗಳು ಸಂಭವಿಸಿವೆ.

ಅಲ್-ಶಿಫಾ ಆಸ್ಪತ್ರೆಯಲ್ಲಿ ವೈದ್ಯಕೀಯ ಬಳಕೆಗಾಗಿ ಇಸ್ರೇಲ್‌ನಿಂದ 300 ಲೀಟರ್ ಇಂಧನವನ್ನು ಕಳಿಸಲಾಗಿತ್ತು. ಆದರೆ, ಪ್ಯಾಲೇಸ್ಟಿನಿಯನ್ ಸಶಸ್ತ್ರ ಗುಂಪು ಹಮಾಸ್ ಭಾನುವಾರ ನಿರಾಕರಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಭಾನುವಾರ, ಶಿಶುಗಳನ್ನು ಆಸ್ಪತ್ರೆಯಿಂದ ಸ್ಥಳಾಂತರಿಸಲು ಸಿದ್ಧವಾಗಿದೆ ಎಂದು ಇಸ್ರೇಲ್‌ನ ಮಿಲಿಟರಿ ಹೇಳಿದೆ, ಆದರೆ ಒಳಗೆ ಜನರು ಇನ್ನೂ ಸಿಕ್ಕಿಬಿದ್ದಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ಹೇಳಿದ್ದಾರೆ. ಆಸ್ಪತ್ರೆಯ ಅಡಿಯಲ್ಲಿ ಹಮಾಸ್ ದುಷ್ಕೃತ್ಯ ಎಸಗುತ್ತಿದೆ ಎಂದು ಇಸ್ರೇಲ್ ಆರೋಪಿಸಿದೆ. ಆದರೆ ಹಮಾಸ್ ಈ ಆರೋಪವನ್ನು ನಿರಾಕರಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ”ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕಾಗಿ ತಮ್ಮ ಕರೆಯನ್ನು ನೀಡಿದ್ದಾರೆ. ಈ ಪ್ರದೇಶದಲ್ಲಿ ಪರಿಸ್ಥಿತಿ ಭೀಕರ ಮತ್ತು ಅಪಾಯಕಾರಿಯಾಗಿದೆ ಎಂದು ಹೇಳಿದರು. ಸುರಕ್ಷಿತ ಧಾಮಗಳಾಗಬೇಕಾದ ಆಸ್ಪತ್ರೆಗಳು ಸಾವು, ವಿನಾಶ ಮತ್ತು ಹತಾಶೆಯ ತಾಣಗಳಾಗುತ್ತಿವೆ. ಇದನ್ನು ಜಗತ್ತು ಮೌನವಾಗಿ ನೋಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರದ ಮನೆಯೊಂದರ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ. ನವೆಂಬರ್ 11 ರವರೆಗೆ ಗಾಜಾದಲ್ಲಿ ಇಸ್ರೇಲಿ ದಾಳಿಯಲ್ಲಿ 4,506 ಮಕ್ಕಳು ಸೇರಿದಂತೆ ಕನಿಷ್ಠ 11,078 ಪ್ಯಾಲೆಸ್ಟೀನಿಯಾದವರು ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ಇಸ್ರೇಲ್‌ ದಾಳಿಗೆ ಖಂಡನೆ: ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಸೇರಿ 145 ದೇಶಗಳ ಬೆಂಬಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...