Homeದಲಿತ್ ಫೈಲ್ಸ್ದಲಿತ- ಮುಸ್ಲಿಂ ದಂಪತಿ ಪ್ರಕರಣ: ಕೊನೆಯವರೆಗೂ ರಾಜು ನೆನಪಲ್ಲೇ ಬದುಕುವೆ- ಅಶ್ರಿನ್‌

ದಲಿತ- ಮುಸ್ಲಿಂ ದಂಪತಿ ಪ್ರಕರಣ: ಕೊನೆಯವರೆಗೂ ರಾಜು ನೆನಪಲ್ಲೇ ಬದುಕುವೆ- ಅಶ್ರಿನ್‌

ಬುಧವಾರ ನಡೆದ ಘಟನೆಯ ಕುರಿತು ಅಶ್ರಿನ್‌ ಎನ್‌ಡಿಟಿವಿಯೊಂದಿಗೆ ಹಂಚಿಕೊಂಡಿದ್ದು, “ದಾಳಿಯನ್ನು ನೋಡುತ್ತಿದ್ದ ಜನರು ವಿಡಿಯೊ ಮಾಡುತ್ತ ನಿಂತಿದ್ದರು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

ಹೈದರಾಬಾದ್‌ನ ಜನನಿಬಿಡ ರಸ್ತೆಯೊಂದರಲ್ಲಿ ಆಕೆಯ ಪತಿಯನ್ನು ಕಬ್ಬಿಣದ ರಾಡುಗಳಿಂಡ ಹೊಡೆದು ಸಾಯಿಸಲಾಯಿತು. ಜನರಲ್ಲಿ ಸಹಾಯಕ್ಕಾಗಿ ಬೇಡಿಕೊಂಡರೂ ಗಂಡನನ್ನು ಕಾಪಾಡಲು ಸಾಧ್ಯವಾಗಲಿಲ್ಲ. “ನನ್ನ ಸಹೋದರ ಮತ್ತು ಆತನ ಸ್ನೇಹಿತರೇ ಹಂತಕರು” ಎಂದು ಸೈಯದ್ ಅಶ್ರಿನ್ ಸುಲ್ತಾನಾ ಪೊಲೀಸರಿಗೆ ಹೇಳಿಕೆ ನೀಡಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಬಯಸಿದ್ದಾರೆ.

ಎರಡು ದಿನಗಳ ಹಿಂದೆ ಪತಿ ಬಿ.ನಾಗರಾಜು ನಿಧನರಾದ ನಂತರ ಅಶ್ರಿನ್‌ ಮೊದಲ ಬಾರಿಗೆ ಗಂಡನ ಮನೆಗೆ ಬಂದರು. ನಾಗರಾಜು ಹುಟ್ಟಿ ಬೆಳೆದ ಮನೆಯಲ್ಲಿಯೇ, ಆತನ ನೆನಪುಗಳೊಂದಿಗೆ ಸಾಯುವವರೆಗೂ ಬದುಕುತ್ತೇನೆ ಎಂದಿದ್ದಾರೆ ಸುಲ್ತಾನಾ.

ದಲಿತ ಜಾತಿಗೆ ಸೇರಿದ ನಾಗರಾಜು ಅವರು ತನ್ನ ಮುಸ್ಲಿಂ ಪತ್ನಿಯ ಸಹೋದರ ನಡೆಸಿದ ಭೀಕರ ದಾಳಿಯಿಂದ ಸಾವನ್ನಪ್ಪಿದ್ದಾರೆ.

ನೋವಿನಿಂದ ಜರ್ಜರಿತರಾಗಿರುವ ಸುಲ್ತಾನಾ (21), ಬುಧವಾರ ಸಂಜೆ ನಡೆದ ಘಟನೆಯ ಭಯಾನಕತೆಯ ಕುರಿತು ಎನ್‌ಡಿಟಿವಿ ಜೊತೆಯಲ್ಲಿ ಹಂಚಿಕೊಂಡಿದ್ದಾರೆ.

“ನಾನು ಮತ್ತು ನನ್ನ ಪತಿ ಬೈಕಿನಲ್ಲಿ ಹೋಗುತ್ತಿದ್ದೆವು. ರಸ್ತೆ ದಾಟಲು ಸ್ವಲ್ಪ ವೇಗವನ್ನು ಕಡಿಮೆ ಮಾಡಿದರು. ಇದ್ದಕ್ಕಿದ್ದಂತೆ ಎರಡು ಬೈಕುಗಳು ಬಂದವು. ಅದರಲ್ಲಿ ನನ್ನ ಸಹೋದರನು ಒಬ್ಬನಿದ್ದನೆಂದು ಭಾವಿಸಿರಲಿಲ್ಲ. ಅವರು ನನ್ನ ಗಂಡನನ್ನು ತಳ್ಳಿದರು. ನನ್ನ ಗಂಡ ಬಿದ್ದರು. ಅವರು ಹೊಡೆಯಲು ಪ್ರಾರಂಭಿಸಿದರು. ನಾನು ಗಂಡನನ್ನು ರಕ್ಷಿಸಲು ಪ್ರಯತ್ನಿಸಿದಾಗ, ನನ್ನ ಸಹೋದರನ ಸ್ನೇಹಿತರು ನನ್ನನ್ನೂ ತಳ್ಳಿದರು. ನಾನು ಸಹಾಯಕ್ಕಾಗಿ ಮನವಿ ಮಾಡಿದೆ. ಆದರೆ ಜನರು ವೀಡಿಯೊಗಳನ್ನು ಮಾಡಿಕೊಳ್ಳುತ್ತಿದ್ದರು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಎಲ್ಲವೂ ಮುಗಿದುಹೋಯಿತು. ಆದರೆ ಜನರು ಮಧ್ಯಪ್ರವೇಶಿಸಿ ಘಟನೆಯನ್ನು ತಡೆಯಲು ಸಾಕಷ್ಟು ಅವಕಾಶವಿತ್ತು ಎನ್ನುತ್ತಾರೆ ಸುಲ್ತಾನಾ. ಸಹಾಯಕ್ಕಾಗಿ ಅಂಗಲಾಚುತ್ತಾ ಸಮಯವನ್ನು ವ್ಯರ್ಥ ಮಾಡಿದೆ ಎಂದು ಭಾವಿಸುತ್ತಾರೆ ಅವರು.

“10 ರಿಂದ 15 ನಿಮಿಷಗಳಲ್ಲಿ, ನನ್ನ ಗಂಡನಿಗೆ ರಾಡ್‌ನಿಂದ 30 ರಿಂದ 35 ಬಾರಿ ಹೊಡೆದರು. ಅವರು ನನ್ನ ಗಂಡನ ಮೆದುಳಿಗೆ ಹೊಡೆದರು, ಅವರು ಕೊನೆಯುಸಿರೆಳೆದರು. ಅವರ ಮೆದುಳು ಹೊರಚೆಲ್ಲಿತ್ತು. ಸಮಾಜವನ್ನು ನಂಬಿ ಜನರ ಸಹಾಯ ಕೇಳುತ್ತಾ ಸಮಯ ಹಾಳು ಮಾಡುತ್ತಿದ್ದೆ. ಆ ಸಮಯವನ್ನು ನನ್ನ ಪತಿಗೆ ಏನಾದರೂ ಸಹಾಯ ಮಾಡಬಹುದಿತ್ತು. ನನ್ನ ಅಣ್ಣ ಕೊಂದಿದ್ದು ನನ್ನ ಪತಿಗೂ ತಿಳಿದಿರಲಿಲ್ಲ. ಇಪ್ಪತ್ತು ಜನ ನಾಲ್ಕು ಜನರನ್ನು ತಡೆಯಬಹುದಿತ್ತು” ಎಂದು ತಿಳಿಸಿದ್ದಾರೆ.

ಅಂತರ್‌ ಧರ್ಮೀಯ ವಿವಾಹಕ್ಕೆ ಹುಡುಗಿಯ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು. ಇದನ್ನು ಧಿಕ್ಕರಿಸಿ 25 ವರ್ಷ ವಯಸ್ಸಿನ ಕಾರು ಮಾರಾಟಗಾರ ನಾಗರಾಜು ಮತ್ತು ಸುಲ್ತಾನಾ ಜನವರಿ 31 ರಂದು ವಿವಾಹವಾದರು. ನಾಗರಾಜು ದಲಿತ ಜಾತಿಗೆ ಸೇರಿದವರಾಗಿದ್ದಾರೆ.

ಆದರೆ ಇಬ್ಬರೂ ಶಾಲಾ ದಿನಗಳಿಂದಲೇ ಪರಿಚಿತರು. ಹುಚ್ಚರಂತೆ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿ ಮೇಲುಗೈ ಸಾಧಿಸುತ್ತದೆ ಹಾಗೂ ಗೆದ್ದೇಗೆಲ್ಲುತ್ತೇವೆ ಎಂದು ಭಾವಿಸಿದ್ದರು. ಧರ್ಮವು ಅವರನ್ನು ಹಿಂದೆಂದೂ ಕಾಡಿರಲಿಲ್ಲ.

“ನನ್ನ ಮನೆಯವರಿಂದ ಯಾವಾಗಲೂ ಬೆದರಿಕೆ ಇತ್ತು, ಸಮಸ್ಯೆ ಇರುವುದರಿಂದ ಬೇರೆ ಮದುವೆಯಾಗಲು ನಾನು ರಾಜುಗೆ ಹೇಳಿದ್ದೆ. ನಾನು ಅವರ ಮನವೊಲಿಸಲು ಎರಡು ತಿಂಗಳು ಪ್ರಯತ್ನಿಸಿದೆ. ಆದರೆ ರಾಜು- ನಾವು ಒಟ್ಟಿಗೆ ಬದುಕುತ್ತೇವೆ ಮತ್ತು ಒಟ್ಟಿಗೆ ಸಾಯುತ್ತೇವೆ- ಎಂದಿದ್ದರು. ನಾನು ನಿನಗಾಗಿ ಸಾಯಲು ಸಿದ್ಧನಿದ್ದೇನೆ ಎಂದಿದ್ದರು. ಇಂದು ನನ್ನ ಪತಿ ನನ್ನಿಂದಾಗಿ ಸಾವಿಗೀಡಾಗಿದ್ದಾರೆ. ರಾಜು ಬೇರೆಯವರನ್ನು ಮದುವೆಯಾಗಲು ಬಿಟ್ಟಿದ್ದರೆ, ಅವರು ಬದುಕುತ್ತಿದ್ದರು ಎಂದು ನನಗೆ ಅನಿಸುತ್ತದೆ” ಎಂದಿದ್ದಾರೆ ಸುಲ್ತಾನಾ.

“ರಾಜು ಹುಟ್ಟಿ ಬೆಳೆದ ಮನೆಯಲ್ಲಿ ನಾನೀಗ ಇದ್ದೇನೆ, ರಾಜು ಜೊತೆಯಲ್ಲಿಯೇ ಇದ್ದಾರೆಂಬ ಭಾವನೆ ಬರುತ್ತಿದೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...