Homeಮುಖಪುಟಬನಾರಸ್ ಹಿಂದೂ ವಿವಿಯಲ್ಲಿ ದಲಿತ ಪ್ರಾಧ್ಯಾಪಕಿಗೆ ಕಿರುಕುಳ, ಹಲ್ಲೆ

ಬನಾರಸ್ ಹಿಂದೂ ವಿವಿಯಲ್ಲಿ ದಲಿತ ಪ್ರಾಧ್ಯಾಪಕಿಗೆ ಕಿರುಕುಳ, ಹಲ್ಲೆ

- Advertisement -
- Advertisement -

ಬನಾರಸ್ ಹಿಂದೂ ವಿವಿಯಲ್ಲಿ ದಲಿತ ಸಮುದಾಯದ ಸಹಾಯಕ ಪ್ರಾಧ್ಯಾಪಕಿ ಇಬ್ಬರು ಸಹಪ್ರಾಧ್ಯಾಪಕರು, ಮತ್ತು ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಹಲ್ಲೆ, ಕಿರುಕುಳ ಮತ್ತು ಅವಮಾನ ಮಾಡಿದ್ದಾರೆಂದು ವಾರಣಾಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಮೇ. 22ರಂದು ವಾರಣಾಸಿ ಪೊಲೀಸರಿಗೆ ಸಹಾಯಕ ಪ್ರಾಧ್ಯಾಪಕಿ ದೂರು ನೀಡಿದ್ದು, ಆ.27ರವರೆಗೆ ಪೊಲೀಸರು ಕೇಸ್ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಇಬ್ಬರು ಸಹಾಯಕ ಪ್ರಾಧ್ಯಾಪಕರು ಸೇರಿ ನಾಲ್ವರ ವಿರುದ್ಧ ಪ್ರಾಥಮಿಕ ತನಿಖೆಯ ನಂತರ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಆರೋಪಿಗಳಲ್ಲಿ ಅವರದೇ ಡಿಪಾರ್ಟ್‌ಮೆಂಟ್‌ನ ಇಬ್ಬರು ಪ್ರಾಧ್ಯಾಪಕರಿದ್ದು, ಅವರು ನನ್ನನ್ನು ತೆಗೆದು ಹಾಕಿ ದಿನನಿತ್ಯ ಕ್ಯಾಂಪಸ್‌ಗೆ ಸುತ್ತು ಬರುವಂತೆ ಮಾಡುವ ಬಗ್ಗೆ ಮಾತನಾಡುತ್ತಿದ್ದರು ಎಂದು ಹೇಳಿದ್ದಾರೆ.

ಮೇ 22 ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಓರ್ವ ಪ್ರಾಧ್ಯಾಪಕ ನನ್ನ ಚೇಂಬರ್‌ಗೆ ಬಂದು ನನ್ನನ್ನು ನನ್ನ ಹುದ್ದೆಯಿಂದ ತೆಗೆದುಹಾಕುವುದಾಗಿ ಮತ್ತು ನನ್ನನ್ನು ಕೊಲ್ಲುವುದಾಗಿ ಹೇಳಿದರು. ನಾನು ನನ್ನ ಚೇಂಬರ್‌ನಿಂದ ಹೊರಗೆ ಬಂದೆ ಮತ್ತು ನಂತರ ಇತರ ಆರೋಪಿಗಳು ವಿಭಾಗದ ಕೊಠಡಿಯ ಬಾಗಿಲು ಮುಚ್ಚಿದರು. ಒಬ್ಬ ವ್ಯಕ್ತಿ ನನ್ನನ್ನು ಹಿಡಿದುಕೊಂಡು ನನ್ನ ಬಟ್ಟೆಗಳನ್ನು ಹರಿದ ನಂತರ ನನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದನು. ಇನ್ನೊಬ್ಬರು ಈ ಕುರಿತ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಬಳಿಕ ನನಗೆ ಒದೆಯಲಾಗಿದೆ ಮತ್ತು ಹಲ್ಲೆ ನಡೆಸಲಾಗಿದೆ ಎಂದು ಪ್ರಾಧ್ಯಾಪಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನಾನು ಜೋರಾಗಿ ಕೂಗಿದ ನಂತರ ಕೆಲವರು ಬಂದು ನನ್ನನ್ನು ರಕ್ಷಿಸಿದರು. ಈ ದೂರಿನ ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಲಗತ್ತಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಾಧ್ಯಾಪಕಿ,  ನಾನು ದಲಿತೆ ಎಂಬ ಕಾರಣಕ್ಕೆ ನನ್ನನ್ನು ಗುರಿಯಾಗಿಸಲಾಗುತ್ತಿದೆ. ಕೆಲವರನ್ನು ಅವರ ಪೋಸ್ಟ್‌ನಿಂದ ತೆಗೆದುಹಾಕಲು ನಾನು ನಿರಾಕರಿಸಿದ ಮೇಲೆ ನನಗೆ ಇವರು ಸಮಸ್ಯೆ ಮಾಡುತ್ತಿದ್ದಾರೆ. ಅವರು ನನ್ನ ಮೇಲೆ ಒತ್ತಡ ಹೇರುತ್ತಿದ್ದರು ಮತ್ತು ನಾನು ನಿರಾಕರಿಸಿದೆ. ನಂತರ ಅವರು ಈ ರೀತಿ ನನ್ನ ಜೊತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ಈ ಕುರಿತು ಹಲವು ದೂರಗಳನ್ನು ನೀಡಿದ್ದೆ, ಆದರೆ ಮುಖ್ಯಮಂತ್ರಿಳಿಗೆ, ಎಸ್‌ಸಿ- ಎಸ್‌ಟಿ ಕಮಿಷನ್ ಗೆ ಮತ್ತು ಹೆಚ್‌ಆರ್‌ಡಿ ಮಿನಿಸ್ಟರ್‌ಗೆ ದೂರು ನೀಡಿದ ಬಳಿಕ ಮಾತ್ರ ಕೇಸ್ ದಾಖಲಿಸಲಾಗಿದೆ ಎಂದು ಸಂತ್ರಸ್ತೆ ಪ್ರಾಧ್ಯಾಪಕಿ ಆರೋಪಿಸಿದ್ದಾರೆ.

ಈ ಕುರಿತು ಬಿಹೆಚ್‌ಯು ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರತಿಕ್ರಿಯಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಆರೋಪಿತ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 342, 354-ಬಿ , 504 (ಉದ್ದೇಶಪೂರ್ವಕ ಅವಮಾನ) 506 (ಅಪರಾಧ ಬೆದರಿಕೆ) ಮತ್ತು SC ಮತ್ತು ST (ದೌರ್ಜನ್ಯ ತಡೆ) ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನು ಓದಿ: ದೆಹಲಿ: ವಿವಿ ಕ್ಯಾಂಪೆಸ್‌ಗೆ ನುಗ್ಗಿ ಎಬಿವಿಪಿ ಕಾರ್ಯಕರ್ತರಿಂದ ದಾಂಧಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...