Homeಮುಖಪುಟದೆಹಲಿ: ವಿವಿ ಕ್ಯಾಂಪೆಸ್‌ಗೆ ನುಗ್ಗಿ ಎಬಿವಿಪಿ ಕಾರ್ಯಕರ್ತರಿಂದ ದಾಂಧಲೆ

ದೆಹಲಿ: ವಿವಿ ಕ್ಯಾಂಪೆಸ್‌ಗೆ ನುಗ್ಗಿ ಎಬಿವಿಪಿ ಕಾರ್ಯಕರ್ತರಿಂದ ದಾಂಧಲೆ

- Advertisement -
- Advertisement -

ದೆಹಲಿ ವಿ.ವಿ.ಯ ಆಲ್-ವುಮೆನ್ ಮಿರಾಂಡಾ ಹೌಸ್‌ನ ವಿದ್ಯಾರ್ಥಿನಿಯರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)  ಕಾರ್ಯಕರ್ತರ ಗುಂಪು ಕಾಲೇಜಿಗೆ  ನುಗ್ಗಿ ದಾಂಧಲೆ ಸೃಷ್ಟಿಸಿ, ಕ್ಯಾಂಪಸ್‌ನಲ್ಲಿ ಗಲಾಟೆ ಮಾಡಿ ಘೋಷಣೆಗಳನ್ನು ಕೂಗಿದ್ದಾರೆ ಮತ್ತು  ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸೆಪ್ಟಂಬರ್ 22ರಂದು ನಡೆಯಲಿರುವ ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟ (ಡಿಯುಎಸ್‌ಯು) ಚುನಾವಣೆ ಹಿನ್ನೆಲೆಯಲ್ಲಿ ಕ್ಯಾಂಪಸ್‌ನಲ್ಲಿ ಪ್ರಚಾರ ನಡೆಯುತ್ತಿರುವ ನಡುವೆ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಮೂರು ವರ್ಷಗಳ ಬಳಿಕ ಕ್ಯಾಂಪಸ್‌ನಲ್ಲಿ ಈ ಚುನಾವಣೆ ನಡೆಯುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ  ವೈರಲ್ ವೀಡಿಯೊದಲ್ಲಿ  ಯುವಕರ ಗುಂಪೊಂದು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಪ್ರವೇಶಿಸುತ್ತಿರುವುದು ಕಂಡು ಬಂದಿದೆ. ಎಬಿವಿಪಿ ಕಾರ್ಯಕರ್ತರು ಅನುಮತಿ ಇಲ್ಲದೆ ಪ್ರವೇಶಿಸಿ ವಿದ್ಯಾರ್ಥಿನಿಯರ ಕುರಿತು ಅಶ್ಲೀಲವಾಗಿ ಹೇಳಿಕೆ ನೀಡಿದ್ದಾರೆ ಎಂದು ಮಿರಾಂಡಾ ಹೌಸ್ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ಎಐಎಸ್ಎ ಹೇಳಿದೆ.

DUSU ಚುನಾವಣೆಗೆ ಪ್ರಚಾರ ಮಾಡುತ್ತಿದ್ದ ಅಭ್ಯರ್ಥಿಗಳ ಜೊತೆಗೆ ಸುಮಾರು 15-20 ಎಬಿವಿಪಿ ಕಾರ್ಯಕರ್ತರು  ಕ್ಯಾಂಪಸ್‌ಗೆ ಪ್ರವೇಶಿಸಿದರು. ಕಾಲೇಜು ವಿದ್ಯಾರ್ಥಿನಿಯರ ಬಗ್ಗೆ ಅಶ್ಲೀಲ ಕಮೆಂಟ್  ಮಾಡಿ ಕಿರುಕುಳ ನೀಡಲಾರಂಭಿಸಿದರು. ಇದನ್ನು ಖಂಡಿಸಿ ಪ್ರಾಂಶುಪಾಲರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದೇವೆ. ಕಾಲೇಜು ಆಡಳಿತ ಇವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಎಐಎಸ್‌ಎ ಡಿಯು ಕಾರ್ಯದರ್ಶಿ ಅಂಜಲಿ ಶರ್ಮಾ ಹೇಳಿದ್ದಾರೆ.

ಮಿರಾಂಡಾ ಹೌಸ್ ಪ್ರಾಂಶುಪಾಲರಾದ ಬಿಜಯಲಕ್ಷ್ಮಿ ನಂದಾ ಅವರು ವಿಡಿಯೋವನ್ನು ವೀಕ್ಷಿಸಿದ್ದು, ಚುನಾವಣಾ ಪ್ರಚಾರಕ್ಕೆ ನಾಲ್ವರು ವಿದ್ಯಾರ್ಥಿನಿಯರಿಗೆ ಮಾತ್ರ ಕ್ಯಾಂಪಸ್ ಗೆ ಬರಲು ಅನುಮತಿ ಇತ್ತು. ಹಲವು ಯುವಕರು ಅನುಮತಿಯಿಲ್ಲದೆ ಕ್ಯಾಂಪಸ್ ಗೆ ಬಂದಿದ್ದಾರೆ ಎಂದು ಹೇಳಿದ್ದಾರೆ .

 

ಇದನ್ನು ಓದಿ: ಜನರನ್ನು ಮೆಚ್ಚಿಸುವಲ್ಲಿ ನಿಪುಣರು: LPG ಸಿಲಿಂಡರ್ ಬೆಲೆ ಇಳಿಕೆ ಕುರಿತು ಪ್ರಧಾನಿ ಮೋದಿ ವಿರುದ್ಧ ಅಧೀರ್ ಚೌಧರಿ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read