Homeಮುಖಪುಟಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ: ವಿಚಿತ್ರ ಆಗ್ರಹ ಮುಂದಿಟ್ಟ ಹಿಂದೂ ಮಹಾ ಸಭಾ ರಾಷ್ಟ್ರೀಯ...

ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ: ವಿಚಿತ್ರ ಆಗ್ರಹ ಮುಂದಿಟ್ಟ ಹಿಂದೂ ಮಹಾ ಸಭಾ ರಾಷ್ಟ್ರೀಯ ಅಧ್ಯಕ್ಷ

- Advertisement -
- Advertisement -

ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲು ಚಂದ್ರಯಾನ -3ರ ಲ್ಯಾಂಡಿಂಗ್ ಸ್ಪಾಟ್‌ನ್ನು ಅದರ ರಾಜಧಾನಿಯನ್ನಾಗಿ  ಮಾಡುವಂತೆ  ಕರೆ ನೀಡಿ  ಎಂದು ಸರಕಾರದ ಮುಂದೆ ವಿಚಿತ್ರವಾದ ಬೇಡಿಕೆ ಮುಂದಿಟ್ಟಿದ್ದಾರೆ.

ಇತರ ಧರ್ಮಗಳಿಗಿಂತ ಮೊದಲು ಭಾರತ ಸರ್ಕಾರವು ಚಂದ್ರನ ಮೇಲೆ ತನ್ನ ಮಾಲೀಕತ್ವವನ್ನು ಪ್ರತಿಪಾದಿಸಬೇಕು ಮತ್ತು ಅದಕ್ಕಾಗಿ ಸಂಸತ್ತಿನಲ್ಲಿ ನಿರ್ಣಯವನ್ನು  ಅಂಗೀಕರಿಸಬೇಕೆಂದು  ತನ್ನ ಮಾತುಗಳಿಂದಲೇ ವಿವಾದಕ್ಕೆ ಹೆಸರಾಗಿರುವ ಚಕ್ರಪಾಣಿ ಮಹಾರಾಜ್ ಹೇಳಿದ್ದಾರೆ.

ಚಂದ್ರನನ್ನು ಹಿಂದೂ ಸನಾತನ ರಾಷ್ಟ್ರ ಎಂದು ಸಂಸತ್ತು ಘೋಷಿಸಬೇಕು. ಚಂದ್ರಯಾನ 3 ಇಳಿಯುವ ಸ್ಥಳವನ್ನು ಅದರ ರಾಜಧಾನಿ ‘ಶಿವಶಕ್ತಿ ಪಾಯಿಂಟ್’ ಆಗಿ ಅಭಿವೃದ್ಧಿಪಡಿಸಬೇಕು. ಆದ್ದರಿಂದ ಜಿಹಾದಿ ಮನಸ್ಥಿತಿಯ ಯಾವುದೇ ಭಯೋತ್ಪಾದಕ ಅಲ್ಲಿಗೆ ತಲುಪಬಾರದು ಎಂದು ಚಕ್ರಪಾಣಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ .

ಚಂದ್ರನ ದಕ್ಷಿಣ ಧ್ರುವದ ಬಳಿ ಐತಿಹಾಸಿಕ ಚಂದ್ರಯಾನ-3  ಲ್ಯಾಂಡರ್ ಸ್ಪರ್ಶಿಸಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಕರೆಯಲಾಗುವುದು ಎಂದು  ಪ್ರಧಾನಿ ಈ ಮೊದಲು ಘೋಷಿಸಿದ್ದರು.

ಚಕ್ರಪಾಣಿ ಅವರು ಈ ಹಿಂದೆ ಕರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ದೆಹಲಿಯಲ್ಲಿ ‘ಗೋಮುತ್ರ ಪಾರ್ಟಿ’ ನಡೆಸಿ ಗಮನ ಸೆಳೆದಿದ್ದರು. ಪಾರ್ಟಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಸದಸ್ಯರು ಕೋವಿಡ್ -19ನ್ನು ನಿವಾರಿಸುವುದಾಗಿ ಹೇಳಿ ಗೋಮೂತ್ರವನ್ನು ಸೇವಿಸಿದ್ದರು.

2018ರ ಕೇರಳ ಪ್ರವಾಹದ ಸಂದರ್ಭದಲ್ಲಿ ಚಕ್ರಪಾಣಿ  ರಾಜ್ಯದಲ್ಲಿ ಗೋಮಾಂಸ ತಿನ್ನುವವರಿಗೆ ಯಾವುದೇ ಸಹಾಯವನ್ನು ಮಾಡಬಾರದು  ಎಂದು ಹೇಳಿಕೆ ಕೊಟ್ಟು ಟೀಕೆಗೆ ಕಾರಣರಾಗಿದ್ದರು.

ಇದನ್ನು ಓದಿ; ಮುಜಾಫರ್‌ನಗರ ಪ್ರಕರಣ: ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯೋಗಿ ಆದಿತ್ಯನಾಥ್‌ಗೆ ಪತ್ರ ಬರೆದ ಕೇರಳದ ಶಿಕ್ಷಣ ಸಚಿವ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...