Homeಮುಖಪುಟದೆಹಲಿ ಚಲೋ ಮೆರವಣಿಗೆ: ನಾಳೆ ದೆಹಲಿಯತ್ತ ರೈತರ ಪಯಣ, ಅಶ್ರುವಾಯು ಎದುರಿಸಲು ಸಿದ್ಧರಾದ ಅನ್ನದಾತರು

ದೆಹಲಿ ಚಲೋ ಮೆರವಣಿಗೆ: ನಾಳೆ ದೆಹಲಿಯತ್ತ ರೈತರ ಪಯಣ, ಅಶ್ರುವಾಯು ಎದುರಿಸಲು ಸಿದ್ಧರಾದ ಅನ್ನದಾತರು

- Advertisement -
- Advertisement -

5 ವರ್ಷಗಳಲ್ಲಿ ಮೂರು ಬಗೆಯ ಬೇಳೆಕಾಳುಗಳು, ಮೆಕ್ಕೆಜೋಳ ಮತ್ತು ಹತ್ತಿಯನ್ನು ಹಳೆಯ ಎಂಎಸ್‌ಪಿ ದರದಲ್ಲಿ ಖರೀದಿಸುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ರೈತರು ನಾಳೆ ತಮ್ಮ ಪ್ರತಿಭಟನೆಯನ್ನು ಪುನರಾರಂಭಿಸಲಿದ್ದಾರೆ. ಅಶ್ರುವಾಯು ಶೆಲ್‌ಗಳನ್ನು ಎದುರಿಸಲು ಮತ್ತು  ಕಬ್ಬಿಣದ ಗುರಾಣಿಗಳನ್ನು ಎದುರಿಸಲು ಅವರು ಶಂಭು- ಪಂಜಾಬ್ ಮತ್ತು ಹರಿಯಾಣ ಗಡಿಯಲ್ಲಿ ಸಾಕಷ್ಟು ಸೆಣಬಿನ ಚೀಲಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

‘ಅಪರಿಚಿತ ಆಗಂತುಕರು’ ಪತ್ರಕರ್ತರಂತೆ ನಟಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ತಡೆಯಲು ಮಾಧ್ಯಮದವರಿಗೆ ಗುರುತಿನ ಚೀಟಿಗಳನ್ನು ನೀಡಲಾಗಿದೆ. ಶಾಂತಿಯುತವಾಗಿ ದೆಹಲಿಯತ್ತ ಪಾದಯಾತ್ರೆಯನ್ನು ಪುನರಾರಂಭಿಸುವುದಾಗಿ ರೈತರು ಹೇಳಿದ್ದಾರೆ. ‘ನಮ್ಮ ವಿರುದ್ಧ ಬಲಪ್ರಯೋಗ ಮಾಡದಂತೆ ನಾವು ಸರ್ಕಾರಕ್ಕೆ ಮನವಿ ಮಾಡಲು ಬಯಸುತ್ತೇವೆ. ನಾವು ಶಾಂತಿಯುತವಾಗಿ ಪ್ರತಿಭಟಿಸಲು ಬಯಸುತ್ತೇವೆ’ ಎಂದು ರೈತರು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ರೈತ ಮುಖಂಡ ಸರ್ವಾನ್ ಸಿಂಗ್ ಪಂಧರ್ ಅವರು, ‘ಕೇಂದ್ರದ ಪ್ರಸ್ತಾಪ’ವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ‘ಸರ್ಕಾರವು (ಭಾನುವಾರ ರಾತ್ರಿ) ಪ್ರಸ್ತಾವನೆಯನ್ನು ಮಾಡಿತು ಮತ್ತು ನಾವು ಅದನ್ನು ಅಧ್ಯಯನ ಮಾಡಿದ್ದೇವೆ. ಎಂಎಸ್‌ಪಿ ಕೇವಲ ಎರಡು ಅಥವಾ ಮೂರು ಬೆಳೆಗಳಿಗೆ ಅನ್ವಯಿಸುತ್ತದೆ; ಇತರ ರೈತರು ತಮ್ಮನ್ನು ತಾವು ಕಾಪಾಡಿಕೊಳ್ಳಲು ಬಿಡುವುದರಲ್ಲಿ ಅರ್ಥವಿಲ್ಲ’ ಎಂದು ಅವರು ಹೇಳಿದರು.

ಸಂಯುಕ್ತ ಕಿಸಾನ್ ಮೋರ್ಚಾ – ರೈತ ಸಂಘಗಳ ಐಕ್ಯ ಹೋರಾಟವು ಈ ಸುತ್ತಿನ ಪ್ರತಿಭಟನೆಯನ್ನು ಮುನ್ನಡೆಸುವವರೊಂದಿಗೆ ನೇರವಾಗಿ ಸಂಬಂಧ ಹೊಂದಿಲ್ಲ. ಸುಮಾರು 200 ಸಂಘಗಳ ಬೆಂಬಲದೊಂದಿಗೆ ರೈತರು ಫೆಬ್ರವರಿ 13 ರಂದು ದೆಹಲಿಯಲ್ಲಿ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದರು. ಶಂಭು ಗಡಿಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರ ವಿರುದ್ಧ ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಲಾಯಿತು; ಡ್ರೋನ್‌ಗಳನ್ನು ಬಳಸಿ ಹೊಗೆಯ ಡಬ್ಬಿಗಳನ್ನು ಸಹ ಸ್ಪೋಟಿಸಲಾಯಿತು.

ಮಾರುಕಟ್ಟೆಯ ವ್ಯತ್ಯಯದಿಂದ ರೈತರನ್ನು ರಕ್ಷಿಸುವ ಉದ್ದೇಶದಿಂದ ಎಂಎಸ್‌ಪಿ ಕಾನೂನೊಂದರ ಬೇಡಿಕೆಯು ಪ್ರತಿಭಟನಾ ನಿರತ ರೈತರ ಪ್ರಮುಖ ವಿಷಯವಾಗಿದೆ. ಸಾಲ ಮನ್ನಾ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಹಿಂದಿನ ಪ್ರತಿಭಟನೆಯ ಸಂದರ್ಭದಲ್ಲಿ ಅವರ ವಿರುದ್ಧ ದಾಖಲಾಗಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಲು ಮತ್ತು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಸಾವನ್ನಪ್ಪಿದ ರೈತರಿಗೆ ನ್ಯಾಯಕ್ಕಾಗಿ ಅವರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ; MSP ಕುರಿತು ಕಾನೂನು ತರಲು ಪ್ರಧಾನಿ ಅಧಿವೇಶನ ಕರೆಯಲಿ: ರೈತ ಮುಖಂಡರ ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ರಾಹುಲ್ ಗಾಂಧಿ ಪ್ರದರ್ಶಿಸಿದ್ದು ‘ಚೀನಾ ಸಂವಿಧಾನದ’ ಪ್ರತಿಯಲ್ಲ

0
"ಭಾರತದ ಸಂವಿಧಾನದ ಮೂಲ ಪ್ರತಿಯ ಬಣ್ಣ ನೀಲಿಯಾಗಿದೆ. ಚೀನಾದ ಸಂವಿಧಾನದ ಮೂಲ ಪ್ರತಿಯ ಬಣ್ಣ ಕೆಂಪು. ರಾಹುಲ್ ಗಾಂಧಿ ಚೀನಾದ ಸಂವಿಧಾನ ತೋರಿಸಿದ್ದಾರೆಯೇ? ನಾವು ಈ ಬಗ್ಗೆ ಪರಿಶೀಲಿಸಬೇಕಿದೆ" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿರುವ...