Homeಮುಖಪುಟಹರ್ಯಾಣ: ಹಿಂದುತ್ವ ಸಂಘಟನೆಯ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ

ಹರ್ಯಾಣ: ಹಿಂದುತ್ವ ಸಂಘಟನೆಯ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ

- Advertisement -
- Advertisement -

ದ್ವೇಷ ಭಾಷಣ ಮಾಡದಂತೆ ಷರತ್ತು ವಿಧಿಸಿದರೂ ಹರ್ಯಾಣದಲ್ಲಿ ಹಿಂದುತ್ವ ಸಂಘಟನೆಯೊಂದರ  ಬೃಹತ್ ಸಮಾವೇಶದಲ್ಲಿ ಮತ್ತೆ ಪ್ರಚೋದನಾತ್ಮಕ ಹೇಳಿಕೆಗಳನ್ನು ಕೊಡಲಾಗಿದೆ.

ಇಂದು ಪಲ್ವಾಲ್ ಜಿಲ್ಲೆಯಲ್ಲಿ ಕೆಲವು ಭಾಷಣಕಾರರು ಬಹಿರಂಗ ಬೆದರಿಕೆ ಹಾಕಿದ್ದಾರೆ. ದ್ವೇಷದ ಭಾಷಣ ಮಾಡಬಾರದೆಂದು ಸಂಘಟಕರು ಭಾಷಣಗಾರರಿಗೆ ಹೇಳಿದ್ದರು ಎನ್ನಲಾಗಿದೆ. ಆದರೆ ಕೆಲವು ಭಾಷಣಕಾರರು ಅದನ್ನು ನಿರ್ಲಕ್ಷಿಸಿದ್ದಾರೆ.

ಒಬ್ಬ ಭಾಷಣಕಾರ, “ನೀವು ಬೆರಳು ಎತ್ತಿದರೆ, ನಾವು ನಿಮ್ಮ ಕೈಗಳನ್ನು ಕತ್ತರಿಸುತ್ತೇವೆ” ಎಂದು ಹೇಳಿದ್ದಾನೆ. ಇನ್ನೊಬ್ಬ ರೈಫಲ್‌ಗಳಿಗೆ ಪರವಾನಗಿ ನೀಡಬೇಕೆಂದು ಒತ್ತಾಯಿಸಿದ್ದಾನೆ.

ಹರ್ಯಾಣದ  ನುಹ್ ನಲ್ಲಿ ಎರಡು ವಾರಗಳ ಮೊದಲು ನಡೆದ ಹಿಂಸಾಚಾರದಲ್ಲಿ 6 ಮಂದಿ ಮೃತಪಟ್ಟಿದ್ದರು.

ಎರಡು ವಾರಗಳ ಹಿಂದೆ ಹರಿಯಾಣದ ನುಹ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಆರು ಜನರು ಸಾವನ್ನಪ್ಪಿದ ನಂತರ ಮತ್ತೆ ಹಿಂದುತ್ವ ಸಂಘಟನ ಸಭೆ ನಡೆಸಿದೆ. ಕಳೆದ ತಿಂಗಳು ನುಹ್‌ನಲ್ಲಿ ಆರಂಭವಾದ ವಿಶ್ವ ಹಿಂದೂ ಪರಿಷತ್‌ನ ಧಾರ್ಮಿಕ ಮೆರವಣಿಗೆಯನ್ನು ಪೂರ್ಣಗೊಳಿಸಲು   ಹಿಂದುತ್ವ ಗುಂಪು ನುಹ್ ನಲ್ಲೇ ಮಹಾಪಂಚಾಯತ್ ನ್ನು ಆಯೋಜಿಸಲು ಮುಂದಾಗಿತ್ತು.ಆದರೆ, ಪೊಲೀಸರಿಂದ ಅನುಮತಿ ನಿರಾಕರಿಸಿದ ನಂತರ ಅದನ್ನು 35 ಕಿಮೀ ದೂರದ ಪಲ್ವಾಲ್‌ಗೆ ಸ್ಥಳಾಂತರಿಸಲಾಗಿದೆ.

ಮಹಾಪಂಚಾಯತ್ ಪಲ್ವಾಲ್-ನುಹ್ ಗಡಿಯಲ್ಲಿರುವ ಪೊಂಡ್ರಿ ಗ್ರಾಮದಲ್ಲಿ ನಡೆದಿದೆ. ಹಲವು ಷರತ್ತುಗಳ ಮೇಲೆ ಅನುಮತಿ ನೀಡಲಾಗಿದೆ ಎಂದು ಪಲ್ವಾಲ್ ಪೊಲೀಸ್ ವರಿಷ್ಠಾಧಿಕಾರಿ ಲೋಕೇಂದ್ರ ಸಿಂಗ್ ಹೇಳಿದ್ದಾರೆ.

ಯಾರು ಕೂಡ ದ್ವೇಷ ಅಥವಾ ಪ್ರಚೋದನಾಕಾರಿ ಭಾಷಣ ಮಾಡಬಾರದು. ಪ್ರಚೋದನಕಾರಿ ಭಾಷಣ ಮಾಡಿದರೆ ತಕ್ಷಣ ಎಫ್ ಐಆರ್ ದಾಖಲಿಸುತ್ತೇವೆ.ಯಾರು ಕೂಡ  ಸಮಾವೇಶಕ್ಕೆ ಬರುವಾಗ ಆಯುಧಗಳು, ದೊಣ್ಣೆಗಳು, ಲಾಠಿಗಳನ್ನು ಅಥವಾ ಯಾವುದೇ ದಹಿಸುವ ವಸ್ತುವನ್ನು ತರದಂತೆ ಷರತ್ತು ವಿಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಕೇವಲ 500 ಜನರಿಗೆ ಮಾತ್ರ ಅವಕಾಶ ಮತ್ತು ಸಮಾವೇಶ ಮಧ್ಯಾಹ್ನ 2 ಗಂಟೆಗೆ  ಕೊನೆಗಳ್ಳಬೇಕು ಎಂದು ಕೂಡ ಪೊಲೀಸರು ಷರತ್ತು ವಿಧಿಸಿದ್ದರು ಎನ್ನಲಾಗಿದೆ.

ಇದನ್ನು ಓದಿ: ದಲಿತ ಸಮುದಾಯಕ್ಕೆ ಅವಮಾನ – ತೀವ್ರ ಟೀಕೆಯ ನಂತರ ಕ್ಷಮೆಯಾಚಿಸಿದ ನಟ ಉಪೇಂದ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...