Homeಕರ್ನಾಟಕ‘ಅಮಾನತು ಮಾಡುವಂತಹ ದೊಡ್ಡ ತಪ್ಪು ಮಾಡಿಲ್ಲ’: ಗದಗ ಶಾಲಾ ಪ್ರಕರಣದ ಕುರಿತು ಶಿಕ್ಷಣ ತಜ್ಞ ಡಾ.ವಿ.ಪಿ....

‘ಅಮಾನತು ಮಾಡುವಂತಹ ದೊಡ್ಡ ತಪ್ಪು ಮಾಡಿಲ್ಲ’: ಗದಗ ಶಾಲಾ ಪ್ರಕರಣದ ಕುರಿತು ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ

ಹೀಗೆ ಮಾಡುವುದಾದರೆ ಹೊರಗಿನ ಎಲ್ಲಾ ಸಂಸ್ಥೆಗಳನ್ನು ಸರ್ಕಾರಿ ಶಾಲೆಗಳಲ್ಲಿ ನಿಷೇಧ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು

- Advertisement -
- Advertisement -

ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ಧ ಗದಗದ ನಾಗಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಿರುವ ಶಿಕ್ಷಣ ಇಲಾಖೆಯ ನಿರ್ಧಾರವನ್ನು ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ಅವರು ವಿರೋಧಿಸಿದ್ದು, “ಅಮಾನತು ರೀತಿಯ ಕಠಿಣ ಶಿಕ್ಷೆ ನೀಡುವ ಅಗತ್ಯವಿರಲಿಲ್ಲ. ಶಿಕ್ಷಕರನ್ನು ಅಮಾನತ್ತಿನಲ್ಲಿ ಇಡುವಂತಹ ದೊಡ್ಡ ತಪ್ಪು ಅವರೇನು ಮಾಡಿಲ್ಲ” ಎಂದು ಹೇಳಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಗುರುವಾರ ಮಾತನಾಡಿದ ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ,“ಸರ್ವ ಧರ್ಮ ಸಮನ್ವಯತೆ ಎಂಬಂತೆ ಮಕ್ಕಳು ಎಲ್ಲರ ಬಗ್ಗೆಯೂ ತಿಳಿದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಈಗ ಅದನ್ನು ವ್ಯಾಖ್ಯಾನಿಸುವ ರೀತಿಯಲ್ಲಿ ತಪ್ಪುಗಳಾಗುತ್ತಿವೆ. ಎಲ್ಲವನ್ನೂ ತಮ್ಮದೆ ದೃಷ್ಟಿಕೋನದಿಂದ ನೋಡುತ್ತಿರುವುದರಿಂದ ಎಲ್ಲವೂ ತಪ್ಪಾಗಿ ಕಾಣುತ್ತದೆ. ಶಿಕ್ಷಣದ ಎಲ್ಲವನ್ನೂ ಕೋಮುವಾದೀಕರಣ ಮಾಡಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಧರ್ಮವನ್ನು ಪ್ರಚಾರ ಮಾಡುವ ಯಾವುದೆ ಆಲೋಚನೆ ನನಗೆ ಇಲ್ಲ ಎಂದು ಮುಖ್ಯೋಪಾಧ್ಯಾಯರು ಈಗಾಗಲೆ ಸ್ಪಷ್ಟವಾಗಿ ಹೇಳಿದ್ದಾರೆ. ಒಂದು ಪುಸ್ತಕ ಕೊಟ್ಟ ಕೂಡಲೇ ಇಸ್ಲಾಂ ಪ್ರಚಾರ ಆಗುತ್ತದೆಯೆ?” ಎಂದು ಅವರು ಕೇಳಿದರು.

ಇದನ್ನೂ ಓದಿ: ಗದಗ: ಪ್ರವಾದಿ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ಧ ಮುಖ್ಯ ಶಿಕ್ಷಕ ಅಮಾನತು

“ಮುಂದಕ್ಕೆ ಶಾಲೆಯಲ್ಲಿ ಭಗವದ್ಗೀತೆ ಕೊಟ್ಟರೆ ಅದರ ಅರ್ಥ ಹಿಂದೂ ಧರ್ಮಕ್ಕೆ ಮಕ್ಕಳನ್ನು ಮತಾಂತರ ಮಾಡುತ್ತಿದ್ದೇವೆ ಎಂದೇ? ಲಕ್ಷಾಂತರ ವಿದ್ಯಾರ್ಥಿಗಳು ಕ್ರಿಶ್ಚಿಯನ್ ಕಾನ್ವೆಂಟ್‌ಗಳಲ್ಲಿ ಕಲಿಯುತ್ತಾ ಇದ್ದಾರೆ. ಅವರೆಲ್ಲರೂ ಮತಾಂತರವಾದರೆ?” ಎಂದು ಅವರು ಪ್ರಶ್ನಿಸಿದರು.

“ಇದು ಬಹಳ ವ್ಯವಸ್ಥಿತವಾಗಿ ಒಂದು ಧರ್ಮದ ಶಿಕ್ಷಕರನ್ನು ಗುರಿ ಮಾಡುತ್ತಿರುವ ತಂತ್ರ. ಅಲ್ಲದೆ ಈ ಪೊಲೀಸ್‌ಗಿರಿ ಬಹಳ ಅಪಾಯಕಾರಿಯಾಗಿದ್ದು, ಭಯದ ವಾತಾವರಣ ನಿರ್ಮಾಣ ಮಾಡುವ ಸ್ಥಿತಿ ಇದು. ಇದರ ಪರಿಣಾಮ ನಮ್ಮ ಮಕ್ಕಳು ಅನುಭವಿಸಬೇಕಾಗುತ್ತದೆ. ಶಿಕ್ಷಣದ ವಿಚಾರಗಳಲ್ಲಿ ಸರಿ ತಪ್ಪುಗಳನ್ನು ಶಾಲೆಗೆ ಬಿಟ್ಟು ಬಿಡಬೇಕು” ಎಂದು ಅವರು ಹೇಳಿದರು.

“ಅಕಸ್ಮಾತ್ ಶಿಕ್ಷಕ ಮಾಡಿದ್ದು ತಪ್ಪು ಎಂದಾದರೂ, ಅವರನ್ನು ಅಮಾನತು ರೀತಿ ಕಠಿಣ ಶಿಕ್ಷೆ ನೀಡುವ ಅಗತ್ಯವಿರಲಿಲ್ಲ. ಶಿಕ್ಷಕರನ್ನು ಅಮಾನತ್ತಿನಲ್ಲಿ ಇಡುವಂತಹ ದೊಡ್ಡ ತಪ್ಪು ಅವರೇನು ಮಾಡಿಲ್ಲ” ಎಂದು ನಿರಂಜನಾರಾಧ್ಯ ಅವರು ತಿಳಿದರು.

ಇದನ್ನೂ ಓದಿ: ಡಿಸೆಂಬರ್‌ನಿಂದ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ತರಗತಿ: ಶಿಕ್ಷಣ ಸಚಿವ ಬಿಸಿ ನಾಗೇಶ್‌

“ಸರ್ಕಾರಿ ಶಾಲೆಗಳ ಗ್ರಂಥಾಲಯಗಳಿಗೆ ಈ ಹಿಂದಿನಿಂದಲೂ ಬೇರೆ ಬೇರೆ ಸಂಸ್ಥೆಗಳಿಂದ ಪುಸ್ತಕಗಳನ್ನು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಬೇರೆ ಬೇರೆ ಚಟುವಟಿಕೆಗಳನ್ನು ಮಾಡಿಸಿ ಅವರ ಸರ್ವಾಂಗೀಣ ಅಭಿವೃದ್ಧಿ ಆಗಲಿ ಎಂದು ನಾವು ಹೇಳುತ್ತೇವೆ. ಎಷ್ಟೊ ಸಂದರ್ಭದಲ್ಲಿ ಎಷ್ಟೊ ಹಿಂದೂ ಸಂಘಟನೆಗಳು ಶಾಲೆಯಲ್ಲಿ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಿ, ಅವರಿಗೆ ಬಹುಮಾನ ನೀಡಿವೆ ಅಲ್ಲವೆ? ಹೀಗಿರುವಾಗ ಪ್ರವಾದಿ ಬಗ್ಗೆ ಪ್ರಬಂಧ ಬರೆದಿದ್ದನ್ನ ಮಾತ್ರ ಪ್ರತ್ಯೇಕವಾಗಿ ನೋಡುವಂತಹ ಅವಶ್ಯಕತೆ ಇರಲಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಒಂದು ಧರ್ಮಿಯರನ್ನು ನಿರ್ಧಿಷ್ಟವಾಗಿ ಗುರಿ ಮಾಡಿರುವುದರಿಂದ ಇದು ತಪ್ಪು ಎಂದು ಕಾಣುತ್ತದೆ. ಶಿಕ್ಷಣದಲ್ಲಿ ಈ ತರದ ಹಸ್ತಕ್ಷೇಪಗಳು ಸರಿಯಲ್ಲ. ಹೀಗೆ ಮಾಡುವುದಾದರೆ ಎಲ್ಲಾ ಹೊರಗಿನ ಸಂಸ್ಥೆಗಳನ್ನು ಸರ್ಕಾರಿ ಶಾಲೆಗಳಲ್ಲಿ ನಿಷೇಧ ಮಾಡಬೇಕಾಗುತ್ತದೆ” ಎಂದು ಡಾ.ವಿ.ಪಿ. ನಿರಂಜನಾರಾಧ್ಯ ಅವರು ಹೇಳಿದರು.

ಇಸ್ಲಾಂನ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಗದಗ ಜಿಲ್ಲೆಯ ನಾಗಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ, ಬಲಪಂಥೀಯ ಸಂಘಟನೆಯಾದ ಶ್ರೀರಾಮಸೇನೆಯ ಕಾರ್ಯಕರ್ತರು 172 ವಿದ್ಯಾರ್ಥಿಗಳಿರುವ ಶಾಲೆಗೆ ಅಕ್ರಮವಾಗಿ ನುಗ್ಗಿ ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫರ್ ಅವರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆಯು ಮುಖ್ಯೋಪಾಧ್ಯರನ್ನು ಅಮಾನತುಗೊಳಿಸಿ ಆದೇಶಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಯುಪಿ: ದಲಿತ ಬಾಲಕಿಗೆ ಶಿಕ್ಷಣ ನೀಡಲು ನಿರಾಕರಿಸಿದ ಶಿಕ್ಷಕಿ

“ವಿದ್ಯಾರ್ಥಿಗಳ ಕೈಬರಹವನ್ನು ಸುಧಾರಿಸುವ ಸಲುವಾಗಿ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದೆ. ಪ್ರತಿ ತಿಂಗಳು ಕನಿಷ್ಠ ಒಂದೆರಡು ಸ್ಪರ್ಧೆಗಳನ್ನು ಶಾಲೆಗಳಲ್ಲಿ ಆಯೋಜಿಸಲಾಗುತ್ತಿದೆ. ಈ ಹಿಂದೆಯೂ ಕನಕದಾಸ, ಪುರಂದರ ದಾಸ ಮತ್ತಿತರ ವ್ಯಕ್ತಿಗಳ ಕುರಿತು ಪ್ರಬಂಧ ಸ್ಪರ್ಧೆಗಳನ್ನು ನಡೆಸಿದ್ದೇವೆ. ಇಸ್ಲಾಂ ಪ್ರಚಾರ ಮಾಡುತ್ತಿದ್ದೇನೆ ಎನ್ನುವುದು ಸುಳ್ಳು ಆರೋಪ” ಎಂದು ಅಬ್ದುಲ್ ಅವರು ತಿಳಿಸಿದ್ದಾರೆ.

“ಶಿಕ್ಷಕ ವೃತ್ತಿಯಲ್ಲಿ 28 ವರ್ಷಗಳ ಅನುಭವ ಹೊಂದಿರುವ ನಾನು ಕಳೆದ ಮೂರು ವರ್ಷಗಳಿಂದ ಈ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹಿಂದೂ ವ್ಯಕ್ತಿಗಳು ಮತ್ತು ಇತರರಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಎಲ್ಲ ದಾಖಲೆಗಳನ್ನು ನಾನು ನಿರ್ವಹಿಸಿದ್ದೇನೆ. ನನ್ನೊಂದಿಗೆ ಕೆಲಸ ಮಾಡುವ ಏಳು ಶಿಕ್ಷಕರಿದ್ದು, ಅದೃಷ್ಟವಶಾತ್ ಅವರು ನನ್ನ ರಕ್ಷಣೆಗೆ ಬಂದರು” ಎಂದು ದಾಳಿಗೆ ಒಳಗಾಗಿರುವ ಅಬ್ದುಲ್ ಮುನಾಫರ್ ಪ್ರತಿಕ್ರಿಯಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತ್ಯತೀತ ತಾಣ ಬಾಬಾ ಬುಡನ್‌ ಗಿರಿಯಲ್ಲಿ ‘ವೈದಿಕ ಆಚರಣೆ’ಗೆ ವಿರೋಧ; ಕಾಂಗ್ರೆಸ್‌ ಸರ್ಕಾರದ ವಿರುದ್ದ ಪ್ರತಿಭಟನೆ

ಕೋಮುವಾದಿಗಳು ಎಷ್ಟೇ ವಿಷಯ ತಿರುಚುವ ಕೆಲಸ ಮಾಡಿದರೂ ಬಾಬಾ ಬುಡನ್ ಗಿರಿಯ ಜಾತ್ಯತೀತ ಹಿನ್ನೆಲೆಯನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಅಲ್ಲಿನ ಸೌಹಾರ್ಧ ಪರಂಪರೆಯನ್ನು ಬದಿಗೆ ಸರಿಸಿ, ವೈದಿಕ ಆಚರಣೆಗೆ ಅನುಮತಿ ನೀಡುವ ಮೂಲಕ ಹಿಂದುತ್ವ...

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಜಲಾಂತರ್ಗಾಮಿ ದಾಳಿ: ಸಮುದ್ರದಲ್ಲಿ ಶವಗಳು ಪತ್ತೆ

ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಬುಧವಾರ ಜಲಾಂತರ್ಗಾಮಿ ದಾಳಿಯ ನಂತರ ಇರಾನ್ ನೌಕಾ ಯುದ್ಧನೌಕೆ ಐರಿಸ್ ದೇನಾ ಮುಳುಗಿದೆ ಎಂದು ವರದಿಯಾಗಿದೆ.  ಈ ದಾಳಿಯಲ್ಲಿ ಕನಿಷ್ಠ 101 ಜನರು ಕಾಣೆಯಾಗಿದ್ದಾರೆ ಮತ್ತು 78 ಜನರು ಗಾಯಗೊಂಡಿದ್ದಾರೆ,...

ಹೆದ್ದಾರಿಯಲ್ಲಿ ದ್ವೇಷ ಬರಹ : ಮುಸ್ಲಿಮರು ಭಾರತದಲ್ಲಿ ‘ಬಾಡಿಗೆದಾರರು’ ಅವರು ಹಾಗೆಯೇ ಬದುಕಬೇಕು ಎಂದ ಹಿಂದೂ ರಕ್ಷಾ ದಳದ ಸದಸ್ಯರು

2026ರ ಫೆಬ್ರವರಿ 26 ಮತ್ತು 27ರ ನಡುವಿನ ಮಧ್ಯರಾತ್ರಿ ಉತ್ತರ ಪ್ರದೇಶದ ದೆಹಲಿ–ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆಯ ಮೇಲೆ ಹಿಂದೂ ರಕ್ಷಾ ದಳಕ್ಕೆ (ಹೆಚ್‌ಆರ್‌ಡಿ) ಸೇರಿದ ಮಹಿಳೆಯರು ಹಿಂದಿಯಲ್ಲಿ “मुसलमान के लिए...

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಹತ್ಯೆಗೆ ಗುರಿಯಾಗುತ್ತಾನೆ: ಇಸ್ರೇಲ್ ರಕ್ಷಣಾ ಸಚಿವನಿಂದ ಬೆದರಿಕೆ

ದುಬೈ: ‘ಅಯತೊಲ್ಲಾ ಅಲಿ ಖಮೇನಿ ಉತ್ತರಾಧಿಕಾರಿಯಾಗಿ ಯಾರೇ ಆಯ್ಕೆಯಾದರೂ ಅವರನ್ನು ಹತ್ಯೆ ಮಾಡುತ್ತೇವೆ’ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಬುಧವಾರ ಪರೋಕ್ಷವಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ...

ಇರಾನ್ ಮೇಲಿನ ಇಸ್ರೇಲ್-ಅಮೆರಿಕ ದಾಳಿಗಳು ಅಂತರರಾಷ್ಟ್ರೀಯ ಕಾನೂನಿಗೆ ಸರಿ ಹೊಂದುವುದಿಲ್ಲ: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ

ಸಿಡ್ನಿ: ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಗಳನ್ನು "ವಿಷಾದದಿಂದ" ಬೆಂಬಲಿಸುವುದಾಗಿ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಹೇಳಿದ್ದಾರೆ. ಆದರೆ ಈ ಸಂಘರ್ಷವು ಅಂತರರಾಷ್ಟ್ರೀಯ ಕ್ರಮದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು...

ಉತ್ತರ ಪ್ರದೇಶ | ಅತ್ಯಾಚಾರ ಸಂತ್ರಸ್ತೆಯನ್ನು ಗುಂಡಿಕ್ಕಿ ಕೊಂದ ಆರೋಪಿ

ಸುಮಾರು 17 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು 22 ವರ್ಷದ ಆರೋಪಿ ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಯ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು...

ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್; ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಸಿದ 37 ಭಾರತೀಯ ಹಡಗುಗಳು

ಇಸ್ರೇಲ್-ಯುಎಸ್ ಜಂಟಿ ದಾಳಿಯ ನಂತರ, ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಭಾರತೀಯ ಹಡಗುಗಳು ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ. ಭಾರತೀಯ ಧ್ವಜ ಹೊಂದಿರುವ 37 ಹಡಗುಗಳು ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ನೀರಿನಲ್ಲಿ ಸಿಲುಕಿಕೊಂಡಿವೆ. 37 ಹಡಗುಗಳು...

ಪಾಲ್ಘರ್: ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಹೊತ್ತಿ ಉರಿದ ಟೆಂಪೋ: 28 ವರ್ಷದ ಚಾಲಕ ಸಜೀವ ದಹನ, ಕ್ಲೀನರ್ ಗೆ ಗಾಯ

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಟೆಂಪೋಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಪಂಜಾಬ್‌ನ 28 ವರ್ಷದ ಚಾಲಕ ಸುಟ್ಟು ಕರಕಲಾಗಿದ್ದು, ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಘಟನೆಯ ಬಗ್ಗೆ ಜನನಿಬಿಡ...

ಗುಜರಾತ್| ಅಂತರ್ಧರ್ಮೀಯ ದಂಪತಿಗೆ ಪೊಲೀಸರ ರಕ್ಷಣೆ; ‘ಲವ್ ಜಿಹಾದ್’ ಎಂದು ಕೂಗಿದ ವಿಎಚ್‌ಪಿ

ಮಾರ್ಚ್ 3 ರಂದು ಗುಜರಾತ್‌ನ ಅಹಮದಾಬಾದ್‌ನ ಮೆಟ್ರೋ ನ್ಯಾಯಾಲಯದ ಸಂಕೀರ್ಣದೊಳಗಿನ ವಿವಾಹ ನೋಂದಣಿ ಕಚೇರಿಯು ಅವ್ಯವಸ್ಥೆಯ ತಾಣವಾಯಿತು. ಗಾಂಧಿನಗರದ ಹಿಂದೂ ಮಹಿಳೆಯೊಬ್ಬರು ನಗರದ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಲು ಬಂದ ನಂತರ ಹಿಂದುತ್ವ ಸಂಘಟನೆಯ...

ಖಮೇನಿ ಹತ್ಯೆ ಕುರಿತು ಪೋಸ್ಟ್‌ : ನ್ಯಾಷನಲ್ ಕಾನ್ಫರೆನ್ಸ್ ಸಂಸದ, ಶ್ರೀನಗರದ ಮಾಜಿ ಮೇಯರ್ ವಿರುದ್ಧ ಎಫ್‌ಐಆರ್

ದಾರಿತಪ್ಪಿಸುವ ಆನ್‌ಲೈನ್ ವಿಷಯವನ್ನು ಹಂಚಿಕೊಂಡ ಆರೋಪದ ಮೇಲೆ ಜಮ್ಮು ಕಾಶ್ಮೀರದ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಅಗಾ ಸೈಯದ್ ರೂಹುಲ್ಲಾ ಮೆಹದಿ ಮತ್ತು ಶ್ರೀನಗರದ ಮಾಜಿ ಮೇಯರ್ ಜುನೈದ್ ಅಝೀಂ ಮಟ್ಟು ವಿರುದ್ಧ...