Homeಕರ್ನಾಟಕಡಿಸೆಂಬರ್‌ನಿಂದ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ತರಗತಿ: ಶಿಕ್ಷಣ ಸಚಿವ ಬಿಸಿ ನಾಗೇಶ್‌

ಡಿಸೆಂಬರ್‌ನಿಂದ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ತರಗತಿ: ಶಿಕ್ಷಣ ಸಚಿವ ಬಿಸಿ ನಾಗೇಶ್‌

- Advertisement -
- Advertisement -

ರಾಜ್ಯದಾದ್ಯಂತ ಶಾಲಾ-ಕಾಲೇಜುಗಳಲ್ಲಿ ನೈತಿಕ ಶಿಕ್ಷಣದ ಪಠ್ಯಕ್ರಮದ ಭಾಗವಾಗಿ ಭಗವದ್ಗೀತೆಯನ್ನು ಡಿಸೆಂಬರ್‌ನಿಂದ ಬೋಧಿಸಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸೋಮವಾರ ಘೋಷಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಸೋಮವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿ.ಸಿ.ನಾಗೇಶ್, “ಈ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಭಗವದ್ಗೀತೆ ಅಳವಡಿಕೆಗೆ ಚಿಂತನೆ ನಡೆಸಿದ್ದೇವೆ. ನೈತಿಕ ಶಿಕ್ಷಣ ವಿಷಯದಡಿಯಲ್ಲಿ ಇದನ್ನು ಬೋಧಿಸಲಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮಿತಿಯನ್ನು ರಚಿಸಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.

‘‘ವಿರೋಧವಿಲ್ಲದಿರೂ ಶಾಲೆಗಳಲ್ಲಿ ಭಗವದ್ಗೀತೆಯನ್ನು ಪರಿಚಯಿಸಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆಯೇ” ಎಂದು ಬಿಜೆಪಿ ಎಂಎಲ್‌ಸಿ ಎಂಕೆ ಪ್ರಾಣೇಶ್ ಪ್ರಶ್ನಿಸಿದ್ದರು. ‘‘ಕರ್ನಾಟಕದ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆಯನ್ನು ಜಾರಿಗೆ ತರುವ ಪ್ರಸ್ತಾವನೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಭಗವದ್ಗೀತೆ ಕಲಿಸಲು ಸರ್ಕಾರ ಹಿಂದೇಟು ಹಾಕುತ್ತಿದೆಯೇ? ಸರ್ಕಾರ ಈ ಹಿಂದೆ ಹೇಳಿಕೆ ನೀಡುವಾಗ ತೋರಿದ ಆಸಕ್ತಿ ಈಗ ಯಾಕೆ ಇಲ್ಲ’’ ಎಂದು ಅವರು ಪ್ರಶ್ನಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಚಿವ ನಾಗೇಶ್ ಅವರು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಪ್ರಕಾರ ಗುಜರಾತ್ ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲಿ ಕೂಡಾ ಭಗವದ್ಗೀತೆಯನ್ನು ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಪರಿಚಯಿಸಲಾಗುವುದು ಎಂದು ಹೇಳಿದ್ದರು. ಭಗವದ್ಗೀತೆಯನ್ನು ನೈತಿಕ ಶಿಕ್ಷಣದ ಭಾಗವಾಗಿ ಪಠ್ಯಕ್ರಮದಲ್ಲಿ ಸೇರಿಸುವುದು ತಮ್ಮ ಸರ್ಕಾರದ ನಿಲುವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಹೇಳಿದ್ದರು.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌ | ನೆದರ್‌ಲ್ಯಾಂಡ್ಸ್‌‌ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಡ್ಡಾಯ ಎಂಬುದು ಸುಳ್ಳು ಸುದ್ದಿ

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಪರಿಷತ್ತಿನಲ್ಲಿ ಮಾತನಾಡಿ, “ಭಗವದ್ಗೀತೆಯು ಮಾನವೀಯ ಮೌಲ್ಯಗಳನ್ನು ಹೊಂದಿದ್ದು, ಮಕ್ಕಳು ಆ ಮೌಲ್ಯಗಳನ್ನು ಕಲಿಯಬೇಕು. ಗುಜರಾತ್ ಸರ್ಕಾರವು ಭಗವದ್ಗೀತೆಯನ್ನು ಪಠ್ಯಕ್ರಮಕ್ಕೆ ಸೇರಿಸಲು ನಿರ್ಧಾರ ತೆಗೆದುಕೊಂಡಿದೆ. ಮಕ್ಕಳಿಗೆ ಭಗವದ್ಗೀತೆಯನ್ನು ಪರಿಚಯಿಸಲು ಕರ್ನಾಟಕದಲ್ಲಿಯೂ ನಿರ್ಧಾರ ತೆಗೆದುಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.

ಆದರೆ, ಮೈಸೂರಿನ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ತನ್ವೀರ್ ಸೇಠ್, “ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಪರಿಚಯಿಸುವುದು ಕೊರೊನಾ ಸಾಂಕ್ರಾಮಿಕಕ್ಕಿಂತ ಹೆಚ್ಚು ಅಪಾಯಕಾರಿ” ಎಂದು ಹೇಳಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಸ್ತಾವನೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದು, ಭಗವದ್ಗೀತೆಯನ್ನು ಕಲಿಸುವುದರಿಂದ ಖಾಲಿ ಹೊಟ್ಟೆ ತುಂಬುವುದಿಲ್ಲ ಎಂದು ಹೇಳಿದ್ದಾರೆ. “ರಾಜ್ಯವು ಸಾವಿರಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಭಗವದ್ಗೀತೆಯ ಬೋಧನೆಗಳು ಜನರಿಗೆ ಅನ್ನ ನೀಡುವುದಿಲ್ಲ, ದೇಶದಲ್ಲಿ ಭಾವನಾತ್ಮಕ ವಿಷಯಗಳು ಪ್ರಾಮುಖ್ಯತೆಯನ್ನು ಪಡೆಯುತ್ತಿದ್ದು, ಅಮಾಯಕರನ್ನು ದಾರಿ ತಪ್ಪಿಸಲಾಗುತ್ತಿದೆ. ಈ ಪ್ರವೃತ್ತಿಗೆ ಅಂತ್ಯವಿದ್ದು, ನಾವು ಅಲ್ಲಿಯವರೆಗೆ ಕಾಯುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮೂಲ ಭಗವದ್ಗೀತೆ ಕುರಿತು ಮಾಹಿತಿಯಿಲ್ಲ ಎಂದ ಕೇಂದ್ರ ಸರ್ಕಾರ: RTI ಅರ್ಜಿಯಿಂದ ಬಹಿರಂಗ

“ನಾವು ಹಿಂದೂ ಧರ್ಮವನ್ನು ನಂಬುತ್ತೇವೆ ಮತ್ತು ಇತರ ಧರ್ಮಗಳಿಗೆ ಸಮಾನ ಗೌರವ ನೀಡುತ್ತೇವೆ. ಮಕ್ಕಳಿಗೆ ಭಗವದ್ಗೀತೆ, ಬೈಬಲ್, ಕುರಾನ್ ಕಲಿಸಲು ನಮ್ಮ ವಿರೋಧವಿಲ್ಲ. ಆದರೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು” ಎಂದು ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಒಳ್ಳೆ ವೈಜ್ಞಾನಿಕ ಆಧುನಿಕ ಶಿಕ್ಷಣ ಕೊಡಿ ಸ್ವಾಮಿ ಭಗವದ್ಗೀತೆಯಿಂದ ಮಕ್ಕಳು ಏನು ಬರೇ ಚರಿತ್ರೆ ಕಲಿಬೇಕಾ…
    ಆಪ್ಷನ್ ಕೊಡಿ ಬೇಕಿದ್ರೆ ಭಗವದ್ಗೀತೆ ಬೇಕಾದವರು ಅದನ್ನೇ ಕಲಿಯಿರಿ ಇಷ್ಟ ಇಲ್ಲದವರಿಗೆ ಅದು ಯಾಕೆ ಬಲವಂತವಾಗಿ ಹೇರಿ ಬಿಡುವುದು ಸರಿಯಲ್ಲ

  2. ಅತ್ಯಂತ ತ್ವರಿತವಾಗಿ ನೈತಿಕ’ ಶಿಕ್ಷಣ ಬೇಕಾಗಿರುವುದು ಕೋಮುವಾದಿ ನೀಚ ಚಡ್ಡಿಗಳಿಗೆ,ಅಪರೇಶನ್ ಕಮಲ, 40% ಕೊಳ್ಳೆ, ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ಹಲ್ಲೆ, ಧಾರ್ಮಿಕ ಢಾಂಬಿಕತನದ ಹಿಂದುತ್ವ, ಸರಕಾರವನ್ನು ಪ್ರಶ್ನಿಸಿದವರಿಗೆ ಜೈಲು…ಇವರು ಮೈಗೂಡಿಸಿಕೊಂಡಿರುವ ಧಾರ್ಮಿಕ ಗುಣವಿಶೇಷಗಳು.

  3. Are u educated Mr educated minister why it is required bhagavat Gita , idiots wt ur going to doing india , try to create jobs and helps to public , bhagaita will never help to children, don’t bring rss agendas here , ur idiots making others also idiots

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...