Homeದಿಟನಾಗರಫ್ಯಾಕ್ಟ್‌‌ಚೆಕ್‌ | ನೆದರ್‌ಲ್ಯಾಂಡ್ಸ್‌‌ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಡ್ಡಾಯ ಎಂಬುದು ಸುಳ್ಳು ಸುದ್ದಿ

ಫ್ಯಾಕ್ಟ್‌‌ಚೆಕ್‌ | ನೆದರ್‌ಲ್ಯಾಂಡ್ಸ್‌‌ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಕಡ್ಡಾಯ ಎಂಬುದು ಸುಳ್ಳು ಸುದ್ದಿ

- Advertisement -
- Advertisement -

ನೆದರ್‌ಲ್ಯಾಂಡ್ಸ್‌‌ ದೇಶವು ಡಚ್‌‌‌‌‌ ವಿದ್ಯಾರ್ಥಿಗಳಿಗೆ 5 ನೇ ತರಗತಿಯಿಂದ ಭಗವದ್ಗೀತೆ ತರಗತಿಗಳನ್ನು ಕಡ್ಡಾಯಗೊಳಿಸಿದೆ ಎಂಬ ಪೋಸ್ಟ್‌‌ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸುಳ್ಳು ಸುದ್ದಿಗೆ ಹೆಸರು ವಾಸಿಯಾಗಿರುವ, ಬಿಜೆಪಿ ಪರವಾಗಿ ಪ್ರೊಪಗಾಂಡ ಸೃಷ್ಟಿಸುವ ‘ಪೋಸ್ಟ್‌ಕಾರ್ಡ್‌‌’ ಅವರ ಲೋಗೋ ಇರುವ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ಸುಳ್ಳಾಗಿದ್ದು, ಇದರ ಫ್ಯಾಕ್ಟ್‌ಚೆಕ್‌ ಮಾಡೋಣ ಬನ್ನಿ.

ವೈರಲ್‌ ಚಿತ್ರ

ಪೋಸ್ಟ್‌ನಲ್ಲಿರುವ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದಾಗ, ಅದೇ ಚಿತ್ರ 20 ಸೆಪ್ಟೆಂಬರ್ 2013 ರಂದು ‘ಇಸ್ಕಾನ್ ಡಿಸೈರ್ ಟ್ರೀ’ ವೆಬ್‌ಸೈಟ್‌ನಲ್ಲಿ ಇರುವುದು ಕಂಡು ಬಂದಿದೆ. ವೆಬ್‌ಸೈಟ್‌ನಲ್ಲಿ ಭಗವದ್ಗೀತೆಯೊಂದಿಗೆ ಇರುವ ಹಲವಾರು ಮಕ್ಕಳ ಚಿತ್ರಗಳು ಕಂಡುಬಂದಿವೆ. ಈ ಚಿತ್ರಗಳ ಶೀರ್ಷಿಕೆಯಲ್ಲಿ ‘ಸುಂದರವಾದ ಪುಟ್ಟ ವೈಷ್ಣವ !!!!’ ಎಂದು ಬರೆದಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ‘ಕೋವಿಶೀಲ್ಡ್ ವ್ಯಾಕ್ಸಿನ್ ಹಾಕಿಸಿಕೊಂಡ ವರ ಬೇಕಾಗಿದ್ದಾನೆ’- ಇದು ನಿಜವಾದ ಪ್ರಕಟಣೆಯಲ್ಲ

ಈ ವೆಬ್‌ಸೈಟ್‌ನಲ್ಲಿ ನೆದರ್‌ಲ್ಯಾಂಡ್ಸ್ ತನ್ನ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಕಡ್ಡಾಯಗೊಳಿಸಿದ ಬಗ್ಗೆ ಯಾವುದೆ ಉಲ್ಲೇಖವಿಲ್ಲ. 2014 ರಿಂದಲೂ ಇದೇ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು.

ನೆದರ್‌ಲ್ಯಾಂಡ್ಸ್‌‌ ದೇಶದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕಲಿಸಲಾಗುತ್ತಿರುವ ವಿಷಯಗಳ ಬಗ್ಗೆ ಅವರ ವೆಬ್‌ಸೈಟ್‌ನಲ್ಲಿ ಕೂಡಾ ಭಗವದ್ಗೀತೆಯ ಬಗ್ಗೆ ಉಲ್ಲೇಖವಿಲ್ಲ.ಇದನ್ನು ಕೆಳಗೆ ನೋಡಬಹುದಾಗಿದೆ.

ಒಟ್ಟಿನಲ್ಲಿ ಡಚ್ ವಿದ್ಯಾರ್ಥಿಗಳಿಗೆ ಭಗವದ್ಗೀತೆ ತರಗತಿಗಳನ್ನು ಕಡ್ಡಾಯಗೊಳಿಸಲಾಗಿಲ್ಲ. ನೆದರ್‌ಲ್ಯಾಂಡ್ಸ್‌‌ದೇಶದ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿ ಕಲಿಸಬೇಕಾಗದ ವಿಷಯಗಳ ಪಟ್ಟಿಯಲ್ಲಿ ಭಗವದ್ಗೀತೆಯ ಉಲ್ಲೇಖವಿಲ್ಲ. ಆದ್ದರಿಂದ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ಸುಳ್ಳಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ‘ಅನುಕಂಪಕ್ಕಾಗಿ ಗಾಝಾ ನಾಟಕವಾಡುತ್ತಿದೆ’ ಎಂದು ಎಡಿಟೆಡ್‌‌ ವಿಡಿಯೊ ಶೇರ್‌ ಮಾಡುತ್ತಿರುವ ಬಲಪಂಥೀಯರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...