Homeಕರ್ನಾಟಕಒಪಿಎಸ್ ಜಾರಿ ಪ್ರತಿಭಟನೆಯಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ಶಿಸ್ತು ಕ್ರಮ: ಕೇಂದ್ರದ ಎಚ್ಚರಿಕೆ

ಒಪಿಎಸ್ ಜಾರಿ ಪ್ರತಿಭಟನೆಯಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ಶಿಸ್ತು ಕ್ರಮ: ಕೇಂದ್ರದ ಎಚ್ಚರಿಕೆ

- Advertisement -
- Advertisement -

ಒಪಿಎಸ್ (ಹಳೆ ಪಿಂಚಣಿ ವ್ಯವಸ್ಥೆ) ಜಾರಿಗಾಗಿನ ಪ್ರತಿಭಟನೆಯಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಕುರಿತು ಎಲ್ಲಾ ಸಚಿವಾಲಯಗಳಿಗೆ ಆದೇಶ ಹೊರಡಿಸಿದೆ. “ಹಳೆಯ ಪಿಂಚಣಿ ಯೋಜನೆ ಮರುಸ್ಥಾಪನೆಗಾಗಿ ಜಂಟಿ ವೇದಿಕೆ’ ಎಂಬ ಬ್ಯಾನರ್‌ನ ಅಡಿಯಲ್ಲಿ ರಾಷ್ಟ್ರೀಯ ಜಂಟಿ ಕ್ರಿಯಾ ಮಂಡಳಿಯು ಮಾರ್ಚ್ 21 ರಂದು ದೇಶಾದ್ಯಂತ ಜಿಲ್ಲೆಗಳಲ್ಲಿ ಒಪಿಎಸ್ ಜಾರಿಗಾಗಿ ರ್ಯಾಲಿಗಳನ್ನು ಆಯೋಜಿಸಿದೆ. ಈ ಪ್ರತಿಭಟನೆಗೆ ಕರೆ ನೀಡಿದ ಹೇಳಿಕೆಯಲ್ಲಿ ಸಹಿ ಮಾಡಿದ ವ್ಯಕ್ತಿಗಳು ಮತ್ತು ಭಾಗವಹಿಸುವ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಹೊರಡಿಸಿದ ಸೂಚನೆಗಳಲ್ಲಿ “ಸಾಮೂಹಿಕ ಕ್ಯಾಶುಯಲ್ ರಜೆ ಹಾಕುವುದು, ಪ್ರತಿಭಟನೆಯಲ್ಲಿ ಭಾಗವಹಿಸುವುದು ಸೇರಿದಂತೆ ಯಾವುದೇ ರೀತಿಯ ಮುಷ್ಕರದಲ್ಲಿ ಭಾಗವಹಿಸುವುದು ಅಥವಾ ಯಾವುದೇ ರೀತಿಯ ಮುಷ್ಕರಕ್ಕೆ ಉತ್ತೇಜನ ನೀಡುವುದು ನಿಯಮ 7 CCS (ನಡತೆ) ನಿಯಮಗಳ ಉಲ್ಲಂಘನೆಯಾಗಿದೆ. ಯಾವುದೇ ಅನುಮತಿಯಿಲ್ಲದೆ ಕರ್ತವ್ಯದಿಂದ ಗೈರುಹಾಜರಾದ ನೌಕರನಿಗೆ 1964 ಮತ್ತು ಮೂಲಭೂತ ನಿಯಮಗಳ ನಿಯಮ 17 (1) ರ ನಿಬಂಧನೆಗೆ ಅನುಸಾರವಾಗಿ ವೇತನ ಮತ್ತು ಭತ್ಯೆಗಳನ್ನು ನೀಡುವುದಿಲ್ಲ” ಎಂದು ತಿಳಿಸಿದೆ.

ನಿಮ್ಮ ಸಚಿವಾಲಯ/ಇಲಾಖೆಗಳ ಅಡಿಯಲ್ಲಿನ ಕೇಂದ್ರ ಸರ್ಕಾರಿ ನೌಕರರಿಗೆ ಈ ಇಲಾಖೆಯಿಂದ ಹೊರಡಿಸಲಾದ ನಡವಳಿಕೆ ನಿಯಮಗಳು ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್ ಎತ್ತಿಹಿಡಿದ ಇತರ ನಿಯಮಗಳ ಅಡಿಯಲ್ಲಿ ಮೇಲಿನ ಸೂಚನೆಗಳನ್ನು ಸೂಕ್ತವಾಗಿ ತಿಳಿಸಬಹುದು. ಆ ಮೂಲಕ ಅವರು ಯಾವುದೇ ರೂಪದ ಪ್ರತಿಭಟನೆಗಳಲ್ಲಿ ಭಾಗವಹಿಸದಂತೆ ತಡೆಯಬಹುದು ಎಂದು ತಿಳಿಸಲಾಗಿದೆ.

“ಉದ್ದೇಶಿತ ಪ್ರತಿಭಟನೆ/ಮುಷ್ಕರದ ಅವಧಿಯಲ್ಲಿ ನೌಕರರು ಸಾಂದರ್ಭಿಕ ರಜೆ ಅಥವಾ ಇತರ ರೀತಿಯ ರಜೆಯನ್ನು ಕೋರಿದರೆ ಅದನ್ನು ಮಂಜೂರು ಮಾಡದಂತೆ ಸೂಚನೆಗಳನ್ನು ನೀಡಬಹುದು. ಒಂದು ವೇಳೆ ನೌಕರರು ಪ್ರತಿಭಟನೆ/ಮುಷ್ಕರ ನಡೆಸಿದರೆ, ಉದ್ದೇಶಿತ ಧರಣಿ/ಪ್ರತಿಭಟನೆ ಮುಷ್ಕರದಲ್ಲಿ ಭಾಗವಹಿಸಿದ ನೌಕರರ ಸಂಖ್ಯೆಯನ್ನು ಸೂಚಿಸುವ ವರದಿಯನ್ನು ದಿನದ ಸಂಜೆ ಈ ಇಲಾಖೆಗೆ ತಿಳಿಸಬಹುದು” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಆದೇಶದ ಮೇರೆಗೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ತನ್ನ ನೌಕರರು ಒಪಿಎಸ್ ಬೇಡಿಕೆಯ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದೆ. ಯಾವುದೇ ಅಧಿಕಾರಿಗಳು ಮುಷ್ಕರ/ಪ್ರತಿಭಟನೆಯಲ್ಲಿ ಭಾಗವಹಿಸಿದ್ದಲ್ಲಿ ಸೂಕ್ತ ಶಿಸ್ತು/ಶಿಕ್ಷಾ ಕ್ರಮಕ್ಕಾಗಿ ಸಕ್ಷಮ ಪ್ರಾಧಿಕಾರದ ಗಮನಕ್ಕೆ ತರಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಏಪ್ರಿಲ್‌ 1ರಿಂದ ಹಿಮಾಚಲ ಪ್ರದೇಶದಲ್ಲಿ ಒಪಿಎಸ್‌ ಜಾರಿ: ಸರ್ಕಾರ ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೋರ್ಟ್

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರ ಅಪಹರಣ ಪ್ರತ್ಯೇಕ ಪ್ರಕರಣದಲ್ಲಿ ಶಾಸಕ ಹೆಚ್‌.ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ...