Homeಮುಖಪುಟನುಹ್ ಜಿಲ್ಲೆ ವಿಸರ್ಜಿಸಿ, ಜನರಿಗೆ ಶಸ್ತ್ರಾಸ್ತ್ರಗಳನ್ನು ಕೊಡಿ; ಹಿಂದೂ ಮಹಾಪಂಚಾಯತ್ ಆಗ್ರಹ

ನುಹ್ ಜಿಲ್ಲೆ ವಿಸರ್ಜಿಸಿ, ಜನರಿಗೆ ಶಸ್ತ್ರಾಸ್ತ್ರಗಳನ್ನು ಕೊಡಿ; ಹಿಂದೂ ಮಹಾಪಂಚಾಯತ್ ಆಗ್ರಹ

- Advertisement -
- Advertisement -

ಹರಿಯಾಣದ ಪಾಲ್ವಾಲ್ ಜಿಲ್ಲೆಯ  ಪೊಂಡ್ರಿ ಗ್ರಾಮದಲ್ಲಿ ಆಯೋಜಿಸಿದ್ದ ಹಿಂದೂ ಮಹಾಪಂಚಾಯತ್, ವಿಶ್ವ ಹಿಂದೂ ಪರಿಷತ್ ನ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ಪುನರಾರಂಭಿಸುವ ನಿರ್ಧಾರವನ್ನು ಪ್ರಕಟಿಸಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಯಾತ್ರೆಯು ನುಹ್‌ನಲ್ಲಿರುವ ನಲ್ಹಾರ್‌ನಿಂದ ಪುನರಾರಂಭವಾಗುತ್ತದೆ ಮತ್ತು ನಂತರ ಜಿಲ್ಲೆಯ ಫಿರೋಜ್‌ಪುರ ಜಿರ್ಕಾದ ಜೀರ್ ಮತ್ತು ಸಿಂಗರ್ ದೇವಾಲಯಗಳ ಮೂಲಕ ಹಾದುಹೋಗುತ್ತದೆ ಎಂದು ಹೇಳಿದೆ.

“ಸರ್ವ  ಹಿಂದೂ ಸಮಾಜ” ಎಂಬ ಸಮುದಾಯದ ಗುಂಪು ಆಯೋಜಿಸಿದ ‘ಸರ್ವ ಜಾತಿಯ ಮಹಾಪಂಚಾಯತ್’ ಈ ತಿಂಗಳ ಆರಂಭದಲ್ಲಿ ನುಹ್‌ನಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಗೆ ಕರೆ ಸೇರಿದಂತೆ ಒಂಬತ್ತು ಬೇಡಿಕೆಗಳನ್ನು ಮುಂದಿಟ್ಟಿದೆ.

ನುಹ್ ಹಿಂಸಾಚಾರವನ್ನು ಹರ್ಯಾಣ ಸರಕಾರದ ಬದಲಾಗಿ ಎನ್ಐಎ ತನಿಖೆ ನಡೆಸಬೇಕು.

ಕೋಮುಗಲಭೆಯಲ್ಲಿ ಸತ್ತವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಮತ್ತು ಗಾಯಗೊಂಡವರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು. ಹಿಂಸಾಚಾರದ ಸಂದರ್ಭದಲ್ಲಿ ಆದ ಹಾನಿಯನ್ನು ಆರೋಪಿಗಳಿಂದ ವಸೂಲಿ ಮಾಡುವಂತೆ ಒತ್ತಾಯಿಸಿದ್ದಾರೆ.

ನುಹ್ ಜಿಲ್ಲೆಯನ್ನು ವಿಸರ್ಜಿಸಬೇಕು.ನುಹ್‌ನ್ನು ಗೋಹತ್ಯೆ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು.

ಈ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲಾ ಗಲಾಟೆಗಳಿಗೆ ಗೋವು ಕಳ್ಳಸಾಗಣೆಯೇ ಮೂಲ ಕಾರಣ ಎಂದು ಹೇಳಿರುವ ಸಮಿತಿಯು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನುಹ್‌ನಲ್ಲಿ ಅರೆಸೈನಿಕ ಪಡೆಗಳ ಪ್ರಧಾನ ಕಚೇರಿಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದೆ.

ಸರ್ಕಾರವು ನುಹ್ ಮತ್ತು ಪಲ್ವಾಲ್ ಜನರಿಗೆ ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

ಹರ್ಯಾಣ ಸರ್ಕಾರವು ನುಹ್ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಗುರುಗ್ರಾಮ್ ಅಥವಾ ಇತರ ಜಿಲ್ಲೆಗಳಿಗೆ ವರ್ಗಾಯಿಸಬೇಕು ಎಂದು ಪಂಚಾಯತ್ ಒತ್ತಾಯಿಸಿದೆ.

ರೋಹಿಂಗ್ಯಾಗಳು ಸೇರಿದಂತೆ ಎಲ್ಲಾ ವಿದೇಶಿಯರನ್ನು ನುಹ್ ಜಿಲ್ಲೆಯಿಂದ  ಹೊರ ಕಳುಹಿಸಬೇಕು ಎಂದು ಮಹಾಪಂಚಾಯತ್ ಹೇಳಿದೆ.

ಇದನ್ನು ಓದಿ: ಆದಿವಾಸಿ ಬಾಲಕನ ಕೊಲೆ ಶಂಕೆ: ವ್ಯಕ್ತಿಯನ್ನು ಮರಕ್ಕೆ ಕಟ್ಟಿಹಾಕಿ ಥಳಿತ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...