Homeರಾಜಕೀಯಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಡಿಎಂಕೆ ಅಧಿಕೃತ ಬೆಂಬಲ: ದಕ್ಷಿಣ ಭಾರತದ ಪ್ರಾತಿನಿಧ್ಯಕ್ಕೆ ಸಂದ ಜಯ ಎಂದ...

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಡಿಎಂಕೆ ಅಧಿಕೃತ ಬೆಂಬಲ: ದಕ್ಷಿಣ ಭಾರತದ ಪ್ರಾತಿನಿಧ್ಯಕ್ಕೆ ಸಂದ ಜಯ ಎಂದ ಎಂ.ಕೆ. ಸ್ಟಾಲಿನ್

- Advertisement -
- Advertisement -

ಚೆನ್ನೈ: ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಪುನರ್‌ವಿಂಗಡಣೆ (Delimitation) ಸಂವಿಧಾನ ತಿದ್ದುಪಡಿ ಮಸೂದೆಗೆ ಡಿಎಂಕೆ ಶನಿವಾರ ಅಧಿಕೃತವಾಗಿ ಬೆಂಬಲ ಘೋಷಿಸಿದೆ.

ಚೆನ್ನೈನಲ್ಲಿ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಡಿಎಂಕೆ ಸಂಸದರ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಣಯ ಅಂಗೀಕರಿಸಲಾಗಿದೆ. ಪರಿಷ್ಕೃತ ಮಸೂದೆಯು ತಮಿಳುನಾಡು ಹಾಗೂ ಒಕ್ಕೂಟ ವ್ಯವಸ್ಥೆಯ ಹಕ್ಕುಗಳಿಗೆ ದೊರೆತಿರುವ ದೊಡ್ಡ ಗೆಲುವು ಎಂದು ಸ್ಟಾಲಿನ್ ಬಣ್ಣಿಸಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಡಿಎಂಕೆ ತೀವ್ರವಾಗಿ ವಿರೋಧಿಸಿತ್ತು. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿದರೆ, ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ದಕ್ಷಿಣ ಭಾರತದ ರಾಜ್ಯಗಳ ಲೋಕಸಭಾ ಸ್ಥಾನಗಳು ಕಡಿತಗೊಂಡು, ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಸ್ಥಾನಗಳು ದೊರೆಯುತ್ತವೆ ಎಂಬುದು ದಕ್ಷಿಣದ ರಾಜ್ಯಗಳ ಆತಂಕವಾಗಿತ್ತು.

ಆದರೆ ಇದೀಗ ತರಲಾಗಿರುವ ಪರಿಷ್ಕೃತ ಮಸೂದೆಯಲ್ಲಿ ಡಿಎಂಕೆ ಮುಂದಿಟ್ಟಿದ್ದ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ. ಹೊಸ ಪ್ರಸ್ತಾವನೆಯ ಪ್ರಕಾರ, ಲೋಕಸಭೆಯ ಒಟ್ಟು ಸ್ಥಾನಗಳನ್ನು ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಶೇ. 50ರಷ್ಟು ಹೆಚ್ಚಿಸಲಾಗುತ್ತಿದ್ದು, 1971ರ ಜನಗಣತಿಯ ಅನುಪಾತವನ್ನೇ ಮುಂದಿನ 25 ವರ್ಷಗಳ ಕಾಲ ಕಾಯ್ದುಕೊಳ್ಳಲಾಗುತ್ತದೆ. ಇದರಿಂದ ಲೋಕಸಭೆಯಲ್ಲಿ ತಮಿಳುನಾಡಿನ ಪ್ರಸ್ತುತ ಶೇ. 7.18ರಷ್ಟು ಸ್ಥಾನಗಳ ಪಾಲು (39 ಸ್ಥಾನಗಳಿಂದ 59 ಸ್ಥಾನಗಳಿಗೆ ಏರಿಕೆ) ಸುರಕ್ಷಿತವಾಗಿರಲಿದ್ದು, ದಕ್ಷಿಣದ ರಾಜ್ಯಗಳಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಡಿಎಂಕೆ ಸಂಸದರಾದ ಎ. ರಾಜಾ ಮತ್ತು ದಯಾನಿಧಿ ಮಾರನ್ ತಿಳಿಸಿದ್ದಾರೆ.

ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಮೀಕರಣ:

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನಟ ವಿಜಯ್ ನೇತೃತ್ವದ ‘ಟಿವಿಕೆ’ (TVK) ಪಕ್ಷಕ್ಕೆ ಬೆಂಬಲ ನೀಡಿದ ಬಳಿಕ ಡಿಎಂಕೆ ‘ಇಂಡಿಯಾ’ (INDIA) ಮೈತ್ರಿಕೂಟದಿಂದ ಹೊರಬಂದಿದೆ. ಶನಿವಾರ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಗೂ ಡಿಎಂಕೆ ಗೈರಾಗಿದೆ. ಮತ್ತೊಂದೆಡೆ, ಡಿಎಂಕೆ ನಿರ್ಧಾರವನ್ನು ಪ್ರಶ್ನಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, “ಸಂವಿಧಾನ ಮತ್ತು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಸಬಲೀಕರಣದಲ್ಲಿ ನಂಬಿಕೆಯಿರುವವರು ಬಿಜೆಪಿಯ ಈ ಮಸೂದೆಯನ್ನು ಬೆಂಬಲಿಸುವುದಿಲ್ಲ” ಎಂದು ಟೀಕಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನ್ಯಾಯಾಂಗ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ, ವಿಚಾರಣೆಯಿಲ್ಲದೆ ವರ್ಷಗಳ ಕಾಲ ಜೈಲು ಮತ್ತು ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಹ್ಯೂಮನ್ ರೈಟ್ಸ್ ವಾಚ್ ಗಂಭೀರ ಆತಂಕ!

ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಮತ್ತು ನ್ಯಾಯಾಂಗದ ಸ್ವಾತಂತ್ರ್ಯದ ಕುರಿತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ 'ಹ್ಯೂಮನ್ ರೈಟ್ಸ್ ವಾಚ್' (HRW) ಗಂಭೀರ ಆತಂಕ ವ್ಯಕ್ತಪಡಿಸಿದೆ. ಕಾನೂನು ತಿದ್ದುಪಡಿಗಳು, ರಾಜಕೀಯ...

ತಿರುಪರಂಕುಂದ್ರಂ ಬೆಟ್ಟದ ಭದ್ರತೆ ವಹಿಸಿಕೊಂಡ ಸಿಆರ್‌ಪಿಎಫ್ : ದೀಪ ಬೆಳಗಿಸಲು ಸಿದ್ಧತೆ; ದರ್ಗಾಕ್ಕೆ ಮುಸ್ಲಿಮರ ಭೇಟಿ

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮಧುರೈನ ತಿರುಪರಂಕುಂದ್ರಂ ಬೆಟ್ಟದ ಸಂಪೂರ್ಣ ಭದ್ರತೆ ಮತ್ತು ಕಣ್ಗಾವಲು ಹೊಣೆಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಶನಿವಾರ (ನ.28) ಬೆಳಿಗ್ಗೆ ವಹಿಸಿಕೊಂಡಿದೆ. ಬೆಟ್ಟದ ಮೇಲಿರುವ ದೀಪತ್ತೂಣ್...

ಜಾತಿವಾದಿ ಹೇಳಿಕೆ ಆರೋಪ: ಎಚ್‌ಸಿಯು ಪ್ರಾಧ್ಯಾಪಕರ ಅಮಾನತಿಗೆ ಮಾನವ ಹಕ್ಕುಗಳ ವೇದಿಕೆ ಆಗ್ರಹ

ಹಳೆಯ ವಿದ್ಯಾರ್ಥಿಗಳ ವಿರುದ್ಧ ಜಾತಿವಾದಿ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದ (ಎಚ್‌ಸಿಯು) ಸಹಾಯಕ ಪ್ರಾಧ್ಯಾಪಕ ವಿಜಯ್ ರಾಮದಾಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾನವ...

ಪಾಕಿಸ್ತಾನದಿಂದ ಹಣ ಪಡೆದ ಆರೋಪ : ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ಗೆ ಅಶುತೋಷ್ ರಾಂಕಾ ಮಾನನಷ್ಟ ನೋಟಿಸ್, 3 ಕೋಟಿ ರೂ. ಪರಿಹಾರ ನೀಡಲು ಆಗ್ರಹ

ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಮಧ್ಯವರ್ತಿಗಳಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರಿಗೆ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನಾಯಕ ಅಶುತೋಷ್ ರಾಂಕಾ ಅವರು ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ....

ಪಂಜಾಬ್‌| ದಲಿತ ಯುವಕನ ‘ಲಾಕಪ್ ಡೆತ್’ ಆರೋಪ: ನ್ಯಾಯಕ್ಕೆ ಆಗ್ರಹಿಸಿ ಕುಟುಂಬಸ್ಥರ ಪ್ರತಿಭಟನೆ

ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಜಿರಾದಲ್ಲಿ 19 ವರ್ಷದ ಜಶನ್‌ದೀಪ್ ಎಂಬ ಯುವಕನ ಸಾವಿನ ಪ್ರಕರಣ ಉದ್ವಿಗ್ನತೆಗೆ ಕಾರಣವಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ಹಿಂಸೆ ನೀಡಿದ್ದರಿಂದಲೇ ಯುವಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿರುವ ಕುಟುಂಬಸ್ಥರು, ಶುಕ್ರವಾರ ಶೆರಾವಾಲಾ...

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬೆಂಬಲ

ನವೆಂಬರ್ 30 ರಿಂದ ಡಿಸೆಂಬರ್ 3 ರವರೆಗೆ ನಡೆಯಲಿರುವ ಮುಂಬರುವ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಪುನರ್‌ವಿಂಗಡಣೆ (ಡಿಲಿಮಿಟೇಶನ್) ಮಸೂದೆಯನ್ನು ಬೆಂಬಲಿಸುವುದಾಗಿ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ...

ಪಶ್ಚಿಮ ಬಂಗಾಳ: ಎಸ್‌ಐಆರ್ ವಿವಾದದ ಬಳಿಕ ಶಿಶುವಿಗೆ ಜನನ ಪ್ರಮಾಣಪತ್ರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ವೇಳೆ ತಂದೆಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು ಎಂಬ ಕಾರಣಕ್ಕೆ ಜನನ ಪ್ರಮಾಣಪತ್ರ ನೀಡಲು ನಿರಾಕರಿಸಿದ್ದ ಪಶ್ಚಿಮ ಬಂಗಾಳ ಸರ್ಕಾರವು, ಅಂತಿಮವಾಗಿ ಎರಡು ತಿಂಗಳ...

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟಿಗೆ ಖರ್ಗೆ ಮನವಿ; ಡಿಎಂಕೆ, ಎಎಪಿ, ಬಿಜೆಡಿಗೂ ಆಹ್ವಾನ

ನವದೆಹಲಿ: ಮಹಿಳಾ ಮೀಸಲಾತಿ ಜಾರಿ ನೆಪದಲ್ಲಿ ಕ್ಷೇತ್ರ ಪುನರ್ವಿಂಗಡಣೆಗೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮತ್ತೆ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂಬ ಸೂಚನೆಗಳ ಬೆನ್ನಲ್ಲೇ, ಸರ್ಕಾರದ ನಡೆಗೆ ಸಂಘಟಿತ...

ನಿಗದಿತ ಮಿತಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣ: ಕರ್ನಾಟಕ ಸರ್ಕಾರದಿಂದ ಇಂಡಿಯನ್ ಆಯಿಲ್‌ಗೆ ಕಾರಣ ಕೇಳಿ ನೋಟಿಸ್

ಬೆಂಗಳೂರು ಸಮೀಪದ ದೇವನಗೊಂದಿ ಟರ್ಮಿನಲ್‌ನಲ್ಲಿ ಪೆಟ್ರೋಲ್‌ಗೆ ನಿಗದಿತ ಶೇ. 20 ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡುತ್ತಿರುವುದು ತಪಾಸಣೆಯ ವೇಳೆ ಪತ್ತೆಯಾದ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಇಂಡಿಯನ್ ಆಯಿಲ್ ಕಾರ್ಪೊರೇಷನ್...

ಅಸ್ಸಾಂನ ಲಖಿಂಪುರದಲ್ಲಿ ತೆರವು ಕಾರ್ಯಾಚರಣೆ ಬಳಿಕವೂ ನಿಲ್ಲದ ಸಂಕಷ್ಟ: ಸೂರು ಕಳೆದುಕೊಂಡು ಬಯಲಿನಲ್ಲಿ ಕಾಲಕಳೆಯುತ್ತಿರುವ 135 ಬಡ ಮುಸ್ಲಿಂ ಕುಟುಂಬಗಳು, ಧರ್ಮದ ಆಧಾರದ ತಾರತಮ್ಯದ ಗಂಭೀರ ಆರೋಪ!

ಲಖಿಂಪುರ (ಅಸ್ಸಾಂ): ಅಸ್ಸಾಂನ ಲಖಿಂಪುರ ಜಿಲ್ಲೆಯ ಕದಮ್ ಕಂದಾಯ ವೃತ್ತದ ವ್ಯಾಪ್ತಿಯ ಬೋಗಿನದಿ ಪ್ರದೇಶದಲ್ಲಿ ಜಿಲ್ಲಾಡಳಿತ ನಡೆಸಿದ ಬೃಹತ್ ತೆರವು ಕಾರ್ಯಾಚರಣೆಯ ಬೆನ್ನಲ್ಲೇ ಸುಮಾರು 135 ಬಡ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ....