Homeಮುಖಪುಟಆಸ್ಕರ್ ವಿಜೇತ ನಾಟು ನಾಟು ಸಾಂಗ್, ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರ ನಿದೇರ್ಶಿಸಿದ್ದು ಮೋದಿ ಎನ್ನಬೇಡಿ:...

ಆಸ್ಕರ್ ವಿಜೇತ ನಾಟು ನಾಟು ಸಾಂಗ್, ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರ ನಿದೇರ್ಶಿಸಿದ್ದು ಮೋದಿ ಎನ್ನಬೇಡಿ: ಖರ್ಗೆ ವ್ಯಂಗ್ಯ

- Advertisement -
- Advertisement -

ಸೋಮವಾರ ಅಮೆರಿಕದಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಆರ್‌ಆರ್‌ಆರ್’ ಮತ್ತು ‘ದಿ  ಎಲಿಫೆಂಟ್ ವಿಸ್ಪರರ್ಸ್’ ಪ್ರಶಸ್ತಿ ಪಡೆದಿರುವುದರ ಕ್ರೆಡಿಟ್‌ನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿ ತೆಗೆದುಕೊಳ್ಳಬಾರದು ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಕಾಲೆಳೆದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತದ ಈ ಗೆಲುವಿನ ಬಗ್ಗೆ ಎಲ್ಲಾ ಪಕ್ಷದ ಸದಸ್ಯರು ಸಂತೋಷ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ, ತೆಲುಗು ನಿರ್ಮಾಣದ ‘ಆರ್‌ಆರ್‌ಆರ್’ ಚಿತ್ತದ ಹಾಡು ಮತ್ತು ದಿ ಎಲಿಫೆಂಟ್  ವಿಸ್ಪರರ್ಸ್ ‘ದೇಶದ ಕೊಡುಗೆ’ ಎಂದು ಹೇಳಿದರು.

”ನಾವು (ಬಿಜೆಪಿ) ನಿರ್ದೇಶಿಸಿದ್ದೇವೆ, ನಾವು (ಬಿಜೆಪಿ) ಕವಿತೆ ಬರೆದಿದ್ದೇವೆ.. ಅಥವಾ ಮೋದಿಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದು ಆಡಳಿತ ಪಕ್ಷವು ಕ್ರೆಡಿಟ್ ತೆಗೆದುಕೊಳ್ಳಬಾರದು ಎಂಬುದು ನನ್ನ ವಿನಂತಿ. ಇದು ದೇಶದ ಕೊಡುಗೆಯಾಗಿದೆ” ಎಂದು ಖರ್ಗೆ ಸಂಸತ್ತಿನಲ್ಲಿ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ ದೀಪಿಕಾ ಪಡುಕೋಣೆ ಸೇರಿ ಭಾರತೀಯರ ಸಂಭ್ರಮ: ನಾಟು ನಾಟು ಹಾಡಿಗೆ ನೃತ್ಯ

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ರಾಜ್ಯಸಭೆಯಲ್ಲಿ ‘ಆರ್‌ಆರ್‌ಆರ್’ ಚಿತ್ರಕಥೆಗಾರ ವಿ ವಿಜಯೇಂದ್ರ ಪ್ರಸಾದ್ ಅವರನ್ನು ಮೋದಿ ಸರ್ಕಾರವು ಸಂಸತ್ತಿಗೆ ನಾಮನಿರ್ದೇಶನ ಮಾಡಿದೆ ಎಂದು ಹೇಳುವ ಮೂಲಕ ಅದರ ಕ್ರೇಡಿಟ್‌ಗೆ ಬಿಜೆಪಿ ಮತ್ತು ಮೋದಿ ಹೆಸರು ಸೇರಿಸುವ ಪ್ರಯತ್ನ ಮಾಡಿದರು. ಹಾಗಾಗಿ ಖರ್ಗೆ ಅವರ ಈ ಟೀಕೆ ವ್ಯಕ್ತವಾಯಿತು.

”ನಾವು ನಿರ್ದೇಶಿಸಿದ್ದೇವೆ, ಸಾಂಗ್ ಬರೆದಿದ್ದೇವೆ, ಅಥವಾ ಮೋದಿಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದು ಆಡಳಿತ ಪಕ್ಷ  ಕ್ರೆಡಿಟ್ ತೆಗೆದುಕೊಳ್ಳಬಾರದು, ಅದು ನನ್ನ ಮನವಿ ಮಾತ್ರ ಅನ್ನಬಾರದು. ಇದು ದೇಶದ ಕೊಡುಗೆ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರ ಮಾತನ್ನು ಸಭಾಪತಿಯವರು ಕಡತದಿಂದ ತೆಗೆಯಬಾರದು” ಎಂದು ಜೈರಾಮ್ ರಮೇಶ್ ಹೇಳಿದರು.

ಸಮಾಜವಾದಿ ಪಕ್ಷದ ನಾಯಕಿ ಮತ್ತು ನಟಿ ಜಯಾ ಬಚ್ಚನ್ ಅವರು, ”ಅವರು ಉತ್ತರ, ಪೂರ್ವ, ದಕ್ಷಿಣ ಅಥವಾ ಪಶ್ಚಿಮದವರು ಎಂಬುದು ಮುಖ್ಯವಲ್ಲ, ಅವರು ಭಾರತೀಯರು” ಎಂಬುದು ಮುಖ್ಯವಾಗಿದೆ ಎಂದರು.

”ನಾಟು ನಾಟು’ ಹಾಡು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುತ್ತದೆ” ಮತ್ತು ಈ ಕಿರುಚಿತ್ರವು ಸುಸ್ಥಿರ ಅಭಿವೃದ್ಧಿ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಮಹತ್ವವನ್ನು ಎತ್ತಿ ತೋರಿಸುತ್ತದೆ ಎಂದು ಜಯಾ ಬಚ್ಚನ್ ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...