Homeಕರ್ನಾಟಕಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ: ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ: ರಾಷ್ಟ್ರಪತಿ ದ್ರೌಪದಿ ಮುರ್ಮು ಆದೇಶ

- Advertisement -
- Advertisement -

ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಪಾರ್ಲಿಮೆಂಟರಿ ಬೋರ್ಡ್ ಸದಸ್ಯೆ ಹಾಗೂ ಮಾಜಿ ಸಂಸದೆ ಡಾ. ಸುಧಾ ಯಾದವ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿದ್ದಾರೆ. ಪ್ರಸ್ತುತ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಥಾವರ್ ಚಂದ್ ಗೆಹ್ಲೋಟ್ ಅವರ ಸ್ಥಾನಕ್ಕೆ 60 ವರ್ಷದ ಡಾ. ಸುಧಾ ಯಾದವ್ ಅವರನ್ನು ನಿಯೋಜಿಸಲಾಗಿದ್ದು, ರಾಷ್ಟ್ರಪತಿ ಭವನವು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ.

ಈ ನೇಮಕದೊಂದಿಗೆ, ವಿ.ಎಸ್. ರಮಾದೇವಿ (ಡಿಸೆಂಬರ್ 1999 ರಿಂದ ಆಗಸ್ಟ್ 2002) ಅವರ ನಂತರ ಕರ್ನಾಟಕದ ರಾಜ್ಯಪಾಲರ ಹುದ್ದೆ ಅಲಂಕರಿಸುತ್ತಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಡಾ. ಸುಧಾ ಯಾದವ್ ಪಾತ್ರರಾಗಿದ್ದಾರೆ.

ಹರಿಯಾಣದ ರೇವಾರಿ ಜಿಲ್ಲೆಯ ಮೋಟ್ಲಾ ಕಲಾನ್‌ನಲ್ಲಿ ಜನಿಸಿದ ಸುಧಾ ಯಾದವ್ ಅವರು ರೂರ್ಕಿ ವಿಶ್ವವಿದ್ಯಾಲಯದಿಂದ (ಪ್ರಸ್ತುತ ಐಐಟಿ ರೂರ್ಕಿ) ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ (PhD) ಪದವಿ ಪಡೆದಿದ್ದಾರೆ.

1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರ ಪತಿ, ಬಿಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಸುಖ್‌ಬೀರ್ ಸಿಂಗ್ ಯಾದವ್ ಅವರು ವೀರಮರಣ ಹೊಂದಿದ್ದರು. ಪತಿಯ ಅಗಲಿಕೆಯ ನಂತರ ರಾಜಕೀಯ ಪ್ರವೇಶಿಸಿದ ಸುಧಾ ಯಾದವ್ ಅವರನ್ನು 1999ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹರಿಯಾಣದ ಮಹೇಂದ್ರಗಢ ಕ್ಷೇತ್ರದಿಂದ ಕಣಕ್ಕಿಳಿಸಿತು. ಆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅವರು 13ನೇ ಲೋಕಸಭೆಯ (1999 – 2004) ಸದಸ್ಯೆಯಾಗಿ ಆಯ್ಕೆಯಾಗಿದ್ದರು.

ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದ ಡಾ. ಸುಧಾ ಯಾದವ್ ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಹಾಗೂ ಒಬಿಸಿ ಮೋರ್ಚಾದ ಅಧ್ಯಕ್ಷರಾಗಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. 2019 ರಿಂದ 2022 ರವರೆಗೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಆಗಸ್ಟ್ 2022 ರಲ್ಲಿ, ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯಾದ ‘ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್’ ಸದಸ್ಯೆಯಾಗಿ ಅವರನ್ನು ಸೇರ್ಪಡೆಗೊಳಿಸಲಾಯಿತು.

ಕರ್ನಾಟಕದ 19ನೇ ರಾಜ್ಯಪಾಲರಾಗಿ ಜುಲೈ 11, 2021 ರಂದು ಅಧಿಕಾರ ಪ್ರಮಾಣ ವಚನ ಸ್ವೀಕರಿಸಿದ್ದ ಥಾವರ್ ಚಂದ್ ಗೆಹ್ಲೋಟ್ ಅವರ ನಂತರ, ಈಗ ಡಾ. ಸುಧಾ ಯಾದವ್ ಅವರು ರಾಜ್ಯದ ನೂತನ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಅಧಿಕಾರ ಸ್ವೀಕರಿಸುವ ದಿನಾಂಕದಿಂದ ಈ ಹೊಸ ನೇಮಕಾತಿಯು ಜಾರಿಗೆ ಬರಲಿದೆ ಎಂದು ರಾಷ್ಟ್ರಪತಿ ಭವನದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಇತರ ರಾಜ್ಯಗಳ ಹೊಸ ರಾಜ್ಯಪಾಲರು (ರಾಷ್ಟ್ರಪತಿ ಭವನದ ಆದೇಶದಂತೆ):

  1. ಓಂ ಪ್ರಕಾಶ್ ಮಾಥುರ್ – ಕೇರಳ ರಾಜ್ಯಪಾಲರು
  2. ರಾಜೇಂದ್ರ ವಿಶ್ವನಾಥ್ ಅರ್ಲೇಕರ್ – ತಮಿಳುನಾಡು ರಾಜ್ಯಪಾಲರು
  3. ಬ್ರಜ್ ಮೋಹನ್ ರಾಮ್ – ಒಡಿಶಾ ರಾಜ್ಯಪಾಲರು
  4. ಡಾ. ಧಲ್ ಸಿಂಗ್ ಬಿಸೆನ್ – ಉತ್ತರಾಖಂಡ ರಾಜ್ಯಪಾಲರು
  5. ದುಷ್ಯಂತ್ ಗೌತಮ್ – ಸಿಕ್ಕಿಂ ರಾಜ್ಯಪಾಲರು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಯ ವರದಿ ಮಾಡುತ್ತಿದ್ದ ಮಹಿಳಾ ಪತ್ರಕರ್ತರ ಮೇಲೆ ದೌರ್ಜನ್ಯ : ದೆಹಲಿ ಪೊಲೀಸ್‌ನ ಹಿರಿಯ ಅಧಿಕಾರಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ ಸುಪ್ರೀಂ ಕೋರ್ಟ್

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಮಹಿಳಾ ಪತ್ರಕರ್ತೆಯರ ಮೇಲೆ ನಡೆದ ಹಲ್ಲೆಯ ಕುರಿತು ವಿವರಣೆ ನೀಡಲು ದೆಹಲಿ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ವೈಯಕ್ತಿಕವಾಗಿ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಅ.13)...

ಪ್ರಧಾನಿ ಮೋದಿ ವಿರುದ್ಧ ಹೇಳಿಕೆ : ರಾಹುಲ್ ಗಾಂಧಿ ಮೇಲಿನ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

ಪ್ರಧಾನಿ ನರೇಂದ್ರ ಮೋದಿ ಅವರನ್ನು "ಚೋರೋ ಕೆ ಸರ್ದಾರ್" (ಕಳ್ಳರ ಸರದಾರ) ಮತ್ತು "ಕಮಾಂಡರ್-ಇನ್-ಚೀಫ್" (ಕಳ್ಳರ ಸೇನಾಧಿಪತಿ) ಎಂದು ನಿಂದಿಸಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ, ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ...

DELHI PROTEST : ಜಂತರ್ ಮಂತರ್ ಪ್ರವೇಶಿಸಿದ ಸಿಜೆಪಿ ನಾಯಕರು ಪೊಲೀಸ್ ವಶಕ್ಕೆ

ನಿರ್ಬಂಧಗಳ ನಡುವೆ ಜಂತರ್ ಮಂತರ್ ಪ್ರವೇಶಿಸಿದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್, ಅಶುತೋಷ್ ರಾಂಕಾ, ಅಜಿಂಕ್ಯ ಶಿಂದೆ ಮತ್ತು ಇತರರನ್ನು ದೆಹಲಿ ಪೊಲೀಸರು ಮಂಗಳವಾರ (ಅ.13) ವಶಕ್ಕೆ ಪಡೆದಿದ್ದಾರೆ....

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ: ಚುನಾವಣಾ ಆಯೋಗಕ್ಕೆ ಸವಾಲು

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ರಿಟ್...

ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಪ್ರತಿಪಕ್ಷಗಳ ಮೆರವಣಿಗೆ: ದೆಹಲಿಯ 6 ಮೆಟ್ರೋ ನಿಲ್ದಾಣಗಳಿಗೆ ನಿರ್ಬಂಧ 

ಸುಪ್ರೀಂ ಕೋರ್ಟ್‌ಗೆ ‘ಚಲೋ ದೆಹಲಿ’ ಮೆರವಣಿಗೆ ಹಿನ್ನೆಲೆಯಲ್ಲಿ ಭದ್ರತಾ ಕ್ರಮ | ಗ್ಯಾನೇಶ್ ಕುಮಾರ್ ರಾಜೀನಾಮೆ, ಎಸ್‌ಐಆರ್ ಸ್ಥಗಿತಕ್ಕೆ ಆಗ್ರಹ | ಸಿಜೆಐ ಭೇಟಿಗೆ ಇಂಡಿಯಾ ಮೈತ್ರಿಕೂಟದ ನಾಯಕರ ಮನವಿ ತಿರಸ್ಕಾರ ನವದೆಹಲಿ: ಚುನಾವಣಾ...

ಪ್ರತಿಭಟನೆಗೆ ಜಂತರ್ ಮಂತರ್ ಇನ್ಮುಂದೆ ಅಧಿಕೃತ ಸ್ಥಳವಲ್ಲ: ಹೊಸ ಆದೇಶ ಹೊರಡಿಸಿದ ದೆಹಲಿ ಪೊಲೀಸ್!

ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕ ಪ್ರತಿಭಟನೆಗಳು ಹಾಗೂ ಧರಣಿಗಳನ್ನು ಆಯೋಜಿಸಲು ನಿಗದಿಪಡಿಸಲಾಗಿದ್ದ ಪ್ರಮುಖ ಸ್ಥಳ 'ಜಂತರ್ ಮಂತರ್' ಹೊಂದಿದ್ದ ಅಧಿಕೃತ ಸ್ಥಾನಮಾನವನ್ನು ದೆಹಲಿ ಪೊಲೀಸ್ ಇಲಾಖೆ ಹಿಂಪಡೆದಿದೆ. ಕೇಂದ್ರ ಗೃಹ ಸಚಿವಾಲಯದ ಸಮಿತಿಯ ಶಿಫಾರಸಿನ...

‘ಗ್ಯಾನೇಶ್ ಕುಮಾರ್ ಅಪರಾಧ ಮಾಡಿದ್ದಾರೆ, ಈಗ ಸಾಕ್ಷಾಧಾರರಾಗಬೇಕು’: ಸಿಇಸಿಗೆ ರಾಹುಲ್ ಗಾಂಧಿ ನೇರ ಎಚ್ಚರಿಕೆ

ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸುವ ಮುನ್ನ ರಾಹುಲ್ ಗಾಂಧಿ ಆರೋಪ | ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧವೂ ಹೋರಾಟ ಮುಂದುವರಿಸುವುದಾಗಿ ಘೋಷಣೆ | ಚುನಾವಣಾ ವ್ಯವಸ್ಥೆಯ ಸುಧಾರಣೆ...

ಸಿಜೆಪಿ ಪ್ರತಿಭಟನೆಯಲ್ಲಿ ಭಾಗಿಯಾದ ‘ಇಮ್ರಾನ್ ಖಾನ್ ಅವರನ್ನು ತಕ್ಷಣ ಗಡೀಪಾರು ಮಾಡಿ’: ನಟನ ಪೌರತ್ವದ ವಿರುದ್ಧ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ದೂರು

ಮುಂಬೈ: ಚುನಾವಣಾ ಆಯೋಗದ ಕಾರ್ಯವೈಖರಿ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಬಿಡುಗಡೆಯಾದ ನಟ ಇಮ್ರಾನ್ ಖಾನ್ ವಿರುದ್ಧ ಬಿಜೆಪಿ ನಾಯಕ...

2ನೇ ದಿನಕ್ಕೆ ಕಾಲಿಟ್ಟ ದೆಹಲಿ ಪ್ರತಿಭಟನೆ; 100 ಕ್ಕೂ ಹೆಚ್ಚು ಜನರನ್ನು ಬಂಧಿಸಿದ ದೆಹಲಿ ಪೊಲೀಸರು

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿದ್ದ ಪ್ರತಿಭಟನೆಯು ದೆಹಲಿಯಾದ್ಯಂತ ಭಾರಿ ಭದ್ರತೆಯ ನಡುವೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ (ಅ.11) ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸಿ ಘೋಷಣೆಗಳನ್ನು ಕೂಗುತ್ತಿದ್ದ 100...

ಪೊಲೀಸರಿಂದ ಗಂಭೀರ ಹಲ್ಲೆ ಆರೋಪ : CPIM ಸಂಸದ ಜಾನ್ ಬ್ರಿಟ್ಟಾಸ್ ಆಸ್ಪತ್ರೆಗೆ ದಾಖಲು

ಭಾನುವಾರ (ಅಕ್ಟೋಬರ್ 11, 2026) ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ, ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದಿ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಅವರನ್ನು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಸಿಬ್ಬಂದಿ ವಶಕ್ಕೆ ಪಡೆದು...