Homeಮುಖಪುಟಪ್ರಧಾನಿ ಮೋದಿ ವಿರುದ್ಧ ಹೇಳಿಕೆ : ರಾಹುಲ್ ಗಾಂಧಿ ಮೇಲಿನ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಚಾರಣೆಗೆ...

ಪ್ರಧಾನಿ ಮೋದಿ ವಿರುದ್ಧ ಹೇಳಿಕೆ : ರಾಹುಲ್ ಗಾಂಧಿ ಮೇಲಿನ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರನ್ನು “ಚೋರೋ ಕೆ ಸರ್ದಾರ್” (ಕಳ್ಳರ ಸರದಾರ) ಮತ್ತು “ಕಮಾಂಡರ್-ಇನ್-ಚೀಫ್” (ಕಳ್ಳರ ಸೇನಾಧಿಪತಿ) ಎಂದು ನಿಂದಿಸಿದ್ದಾರೆ ಎನ್ನಲಾದ ಆರೋಪಕ್ಕೆ ಸಂಬಂಧಿಸಿದಂತೆ, ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣಾ ಪ್ರಕ್ರಿಯೆಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ಪೀಠವು, ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಲು ನಿರಾಕರಿಸಿದ ಬಾಂಬೆ ಹೈಕೋರ್ಟ್‌ನ ಸೆಪ್ಟೆಂಬರ್ 8ರ ಆದೇಶದ ವಿರುದ್ಧ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ಕುರಿತು 4 ವಾರಗಳಲ್ಲಿ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದೆ.

“ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿ. ಅಲ್ಲಿಯವರೆಗೆ, ವಿಚಾರಣಾ ನ್ಯಾಯಾಲಯದ ಮುಂದಿನ ನಡಾವಳಿಗಳಿಗೆ ತಡೆಯಾಜ್ಞೆ ಮುಂದುವರಿಯುತ್ತದೆ” ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಹೈಕೋರ್ಟ್‌ನ ಮುಂದೆ, ರಾಹುಲ್ ಗಾಂಧಿಯವರು ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸಮನ್ಸ್‌ಗಳನ್ನು ಪ್ರಶ್ನಿಸಿದ್ದರು ಮತ್ತು ಬಿಜೆಪಿ ಕಾರ್ಯಕರ್ತರೊಬ್ಬರು ದಾಖಲಿಸಿರುವ ದೂರು ಕಾನೂನುಬದ್ಧವಾಗಿ ಮಾನ್ಯವಲ್ಲ ಎಂದು ವಾದಿಸಿದ್ದರು. ತಾವು ಯಾವುದೇ ಪಕ್ಷದ ಹೆಸರನ್ನು ಹೆಸರಿಸಿಲ್ಲ ಮತ್ತು ಯಾವುದೇ “ಗುರುತಿಸಬಹುದಾದ ಅಥವಾ ನಿರ್ದಿಷ್ಟ ವರ್ಗವನ್ನು” ಗುರಿಯಾಗಿಸಿಕೊಂಡಿಲ್ಲ ಎಂದು ಅವರು ಪ್ರತಿಪಾದಿಸಿದ್ದರು. ಇದರ ಅನುಪಸ್ಥಿತಿಯಲ್ಲಿ, ಪ್ರಕರಣದ ವಿಚಾರಣೆ ನಡೆಸಲು ಯಾವುದೇ ಸ್ಪಷ್ಟವಾಗಿ ನೊಂದ ವ್ಯಕ್ತಿ ಅಥವಾ ಗುಂಪಿಗೆ ಕಾನೂನಾತ್ಮಕ ಹಕ್ಕು (Locus standi) ಇರುವುದಿಲ್ಲ ಎಂದು ಅವರು ವಾದ ಮಂಡಿಸಿದ್ದರು.

ದೂರುದಾರರು, ರಾಹುಲ್ ಗಾಂಧಿ ಮತ್ತು ಮಹಾರಾಷ್ಟ್ರ ಸರ್ಕಾರ ಮಂಡಿಸಿದ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, ಹೈಕೋರ್ಟ್ ಈ ವರ್ಷದ ಫೆಬ್ರವರಿಯಲ್ಲಿ ಈ ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು.

ಈ ದೂರನ್ನು ಬಿಜೆಪಿ ಕಾರ್ಯಕರ್ತ ಮಹೇಶ್ ಶ್ರೀಶ್ರೀಮಾಲ್ ಎಂಬುವರು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ದಾಖಲಿಸಿದ್ದರು. ಅದರ ಅನ್ವಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಾಹುಲ್ ಗಾಂಧಿಯವರಿಗೆ ಸಮನ್ಸ್ ಜಾರಿ ಮಾಡಿತ್ತು. ರಾಹುಲ್ ಗಾಂಧಿಯವರ ಹೇಳಿಕೆಗಳು ನೇರವಾಗಿ ಪ್ರಧಾನಮಂತ್ರಿಯವರನ್ನು ಗುರಿಯಾಗಿಸಿಕೊಂಡಿದ್ದವು ಮತ್ತು ಆ ಮೂಲಕ ಆಡಳಿತ ಪಕ್ಷ ಹಾಗೂ ಅದರ ಸದಸ್ಯರ ವರ್ಚಸ್ಸನ್ನು ಸಾರ್ವಜನಿಕವಾಗಿ ಕುಂದಿಸುವ ಉದ್ದೇಶವನ್ನು ಹೊಂದಿದ್ದವು ಎಂದು ದೂರುದಾರರು ವಾದಿಸಿದ್ದರು. ಅವರ ಪ್ರಕಾರ, ಪ್ರಧಾನಿ ಮೋದಿಯವರನ್ನು “ಚೋರೋ ಕೆ ಸರ್ದಾರ್” (ಕಳ್ಳರ ಸರದಾರ) ಎಂದು ಕರೆಯುವ ಮೂಲಕ ಪರೋಕ್ಷವಾಗಿ ಬಿಜೆಪಿಯ ಎಲ್ಲಾ ಸದಸ್ಯರನ್ನೂ “ಕಳ್ಳರು” ಎಂದು ಬಿಂಬಿಸಿದಂತಾಗುತ್ತದೆ; ಹಾಗಾಗಿ ಪಕ್ಷದ ಕಾರ್ಯಕರ್ತರಿಗೆ ಮಾನನಷ್ಟ ಮೊಕದ್ದಮೆ ಹೂಡುವ ಸಂಪೂರ್ಣ ಹಕ್ಕಿದೆ ಎಂದು ದೂರುದಾರರು ಪ್ರತಿಪಾದಿಸಿದ್ದರು.

ತಮಗೆ ಜಾರಿಯಾಗಿದ್ದ ಸಮನ್ಸ್ ಮತ್ತು ವಿಚಾರಣೆಯ ಮುಂದುವರಿಕೆಯನ್ನು ಪ್ರಶ್ನಿಸಿ ರಾಹುಲ್ ಗಾಂಧಿಯವರು ಹೈಕೋರ್ಟ್ ಮೆಟ್ಟಿಲೇರಿದ್ದರು ಹಾಗೂ ಈ ದೂರು ಕಾನೂನುಬದ್ಧವಾಗಿ ಮಾನ್ಯವಲ್ಲ ಎಂದು ವಾದಿಸಿದ್ದರು. ಅವರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಸುದೀಪ್ ಪಸ್ಬೋಲಾ ಅವರು, ಗಾಂಧಿಯವರು ತಮ್ಮ ಟ್ವೀಟ್‌ನಲ್ಲಿ ಬಿಜೆಪಿ ಅಥವಾ ಯಾವುದೇ ರಾಜಕೀಯ ಪಕ್ಷದ ಹೆಸರನ್ನು ಉಲ್ಲೇಖಿಸಿಲ್ಲ ಮತ್ತು ಯಾವುದೇ “ಗುರುತಿಸಬಹುದಾದ ಅಥವಾ ನಿರ್ದಿಷ್ಟ ವರ್ಗವನ್ನು” ಗುರಿಯಾಗಿಸಿಕೊಂಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಯಾವುದೇ ನಿರ್ದಿಷ್ಟವಾಗಿ ನೊಂದ ವ್ಯಕ್ತಿ ಅಥವಾ ಗುಂಪು ಇಲ್ಲದಿರುವುದರಿಂದ, ದೂರುದಾರರಿಗೆ ಈ ಪ್ರಕರಣವನ್ನು ನಡೆಸಲು ಕಾನೂನಾತ್ಮಕ ಹಕ್ಕು ಇಲ್ಲ ಎಂದು ಪಸ್ಬೋಲಾ ವಾದಿಸಿದ್ದರು. ಈ ಹೇಳಿಕೆಯು ಪಕ್ಷದ ಕಾರ್ಯಕರ್ತರಿಗೂ ಅನ್ವಯಿಸುತ್ತದೆ ಎಂದು ಕೇವಲ ಸ್ವಯಂ ವ್ಯಾಖ್ಯಾನ ಮಾಡಿಕೊಳ್ಳುವುದರಿಂದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿದ್ದರು.

ರಾಹುಲ್ ಗಾಂಧಿಯವರ ಅರ್ಜಿಯನ್ನು ವಿರೋಧಿಸಿದ್ದ ಮಹಾರಾಷ್ಟ್ರ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಡಾ. ಮಿಲಿಂದ್ ಸಾಥೆ ಅವರು, ಮಾನನಷ್ಟ ಮೊಕದ್ದಮೆಗೆ ಅಗತ್ಯವಿರುವ ಕಾನೂನಾತ್ಮಕ ಅಂಶಗಳು ಇಲ್ಲಿ ಅನ್ವಯಿಸುತ್ತವೆಯೇ ಮತ್ತು ಸದರಿ ಆಕ್ಷೇಪಾರ್ಹ ಹೇಳಿಕೆಯು ಒಂದು ನಿರ್ದಿಷ್ಟ ಹಾಗೂ ಗುರುತಿಸಬಹುದಾದ ಗುಂಪಿಗೆ ಸಂಬಂಧಿಸಿದ್ದೇ ಎಂಬುದನ್ನು ನ್ಯಾಯಾಲಯವು ಪರಿಶೀಲಿಸಬೇಕು ಎಂದು ವಾದಿಸಿದ್ದರು. ಅಂತಹ ಒಂದು ನಿರ್ದಿಷ್ಟ ಗುಂಪನ್ನು ಗುರುತಿಸಲು ಸಾಧ್ಯವಿದ್ದರೆ, “ನೊಂದ ಯಾರಾದರೂ ಒಬ್ಬ ವ್ಯಕ್ತಿ” ಕಾನೂನು ಪ್ರಕ್ರಿಯೆಯನ್ನು ಆರಂಭಿಸಲು ಕಾನೂನಿನಲ್ಲಿ ಅವಕಾಶವಿದೆ, ಆದ್ದರಿಂದ ಈ ಹಂತದಲ್ಲೇ ಪ್ರಕರಣವನ್ನು ರದ್ದುಗೊಳಿಸಬಾರದು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಆದ್ದರಿಂದ, ನ್ಯಾಯಾಲಯದ ಮುಂದಿದ್ದ ಪ್ರಮುಖ ಕಾನೂನಾತ್ಮಕ ಪ್ರಶ್ನೆಯೆಂದರೆ; ಈ ಆಕ್ಷೇಪಾರ್ಹ ಹೇಳಿಕೆಗಳು ಕ್ರಿಮಿನಲ್ ಮಾನನಷ್ಟದ ವ್ಯಾಪ್ತಿಗೆ ಬರುತ್ತವೆಯೇ ಮತ್ತು ರಾಜಕೀಯ ಪಕ್ಷದ ಹೆಸರನ್ನಾಗಲಿ ಅಥವಾ ಅದರ ಸದಸ್ಯರ ಹೆಸರನ್ನಾಗಲಿ ನೇರವಾಗಿ ಉಲ್ಲೇಖಿಸದೇ ಇದ್ದಾಗಲೂ, ಕೇವಲ ಒಬ್ಬ ಪಕ್ಷದ ಕಾರ್ಯಕರ್ತ ದಾಖಲಿಸಿರುವ ದೂರನ್ನು ಕಾನೂನುಬದ್ಧವಾಗಿ ಮುಂದುವರಿಸಲು ಸಾಧ್ಯವಿದೆಯೇ ಎಂಬುದಾಗಿತ್ತು.

Courtesy : livelaw.in











ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ ಎಸ್‌ಐಆರ್ ನ್ಯಾಯಮಂಡಳಿಗೆ ನಿವೃತ್ತ ನ್ಯಾಯಾಧೀಶ ಬಿಸ್ವಜಿತ್ ಬಸು ರಾಜೀನಾಮೆ

ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಬಿಸ್ವಜಿತ್ ಬಸು ಪಶ್ಚಿಮ ಬಂಗಾಳ ಎಸ್‌ಐಆರ್ ನ್ಯಾಯಮಂಡಳಿಗಳಿಗೆ ರಾಜೀನಾಮೆ ನೀಡಿದ್ದಾರೆ, ಒಂದು ತಿಂಗಳಲ್ಲಿ ಸಮಿತಿಯಿಂದ ಹೊರಗುಳಿದ 19 ಸದಸ್ಯರಲ್ಲಿ ನಾಲ್ಕನೇ ವ್ಯಕ್ತಿಯಾಗಿದ್ದಾರೆ. ರಾಜ್ಯದ ಮತದಾರರ ಪಟ್ಟಿಯಿಂದ ಹೊರಗುಳಿದ...

‘ನೋಟ್ ಬಂದಿ’ ಆರ್ಥಿಕತೆ ಹಾಳು ಮಾಡಿದೆ, ‘ವೋಟ್ ಬಂದಿ’ ರಾಜಕೀಯ ನಾಶಪಡಿಸುತ್ತಿದೆ: ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದೆ. 2016ರಲ್ಲಿ ಜಾರಿಗೊಳಿಸಿದ 'ನೋಟ್ ಬಂದ್' ದೇಶದ ಆರ್ಥಿಕತೆಯನ್ನು ಹಾಳುಮಾಡಿದ್ದರೆ, ಈಗ ನಡೆಯುತ್ತಿರುವ 'ವೋಟ್ ಬಂದ್' ದೇಶದ ರಾಜಕೀಯ...

“ಪಟಾಕಿಗಳನ್ನು ಸಿಡಿಸುವುದರಿಂದ ಹಲವು ರೋಗ-ರುಜಿನಗಳು ಗುಣಮುಖವಾಗುತ್ತವೆ” – ಪಶ್ಚಿಮ ಬಂಗಾಳ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ ಹೇಳಿಕೆ!

ಕಾಳಿ ಪೂಜೆ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಹಾಗೂ ಶಬ್ದ ನಿಯಂತ್ರಿಸಲು ಆಡಳಿತ ಮಂಡಳಿಗಳು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ವಿಧಿಸುತ್ತಿರುವ ಬೆನ್ನಲ್ಲೇ, ಕೋಲ್ಕತ್ತಾದ ಟಾಲಿಗಂಜ್ ಕ್ಷೇತ್ರದ ಬಿಜೆಪಿ ಶಾಸಕಿ ಪಾಪಿಯಾ ಅಧಿಕಾರಿ...

ಎನ್‌ಡಿಎ ಪರೀಕ್ಷೆ; ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶಿವಮೊಗ್ಗದ ವಿದ್ಯಾರ್ಥಿನಿ

ಕರ್ನಾಟಕದ 18 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪ್ರವೇಶ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ...

ಗೂಗಲ್ ‘ರೀಯೂನಿಯನ್’ ಜಾಹೀರಾತು ಬಿಡುಗಡೆಯಾಗಿ 13 ವರ್ಷ: ಕುನಾಲ್ ಕಾಮ್ರಾ ಪೋಸ್ಟ್‌ನಿಂದ ಮತ್ತೆ ನೆನಪಾದ ಗಡಿ ಮೀರಿದ ಸೌಹಾರ್ದತೆ!

13 ವರ್ಷಗಳ ಹಿಂದೆ ಅಂದರೆ 2013ರ ನವೆಂಬರ್ 13ರಂದು ಗೂಗಲ್ ಇಂಡಿಯಾ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದ ಜಾಗತಿಕ ಪ್ರಸಿದ್ಧ ‘ರೀಯೂನಿಯನ್’ (Google Reunion) ಜಾಹೀರಾತು, ಇಂದು ಸಾಮಾಜಿಕ ಜಾಲತಾಣ...

ಕೇಂದ್ರ ಸಚಿವರ ಜೇಬು ತುಂಬಿಸಲು ಎಥನಾಲ್ ದಂಧೆ!: 130 ಕೋಟಿ ಜನರಿಗೆ 20% ಹೆಸರಲ್ಲಿ 40% ಎಥನಾಲ್ – ಪ್ರಿಯಾಂಕ್‌ ಖರ್ಗೆ!

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು (OMCs) ಸರಬರಾಜು ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಯಮಾನುಸಾರ ಇರಬೇಕಾದ ಶೇಕಡಾ 20 ಕ್ಕಿಂತಲೂ ಅಧಿಕ ಪ್ರಮಾಣದ ಎಥನಾಲ್ ಮಿಶ್ರಣ ಮಾಡುತ್ತಿರುವುದು ಈಗ ರಾಜ್ಯ ಸರ್ಕಾರ ನಡೆಸಿದ ತನಿಖೆಯಿಂದ...

ಎಥೆನಾಲ್ ಅತಿಯಾದ ಮಿಶ್ರಣ: ಸಾವಿರಾರು ವಾಹನಗಳಿಗೆ ಸಮಸ್ಯೆ, ಎಂಜಿನ್‌ಗಳು ಸ್ಥಗಿತ; ಆರೋಪ ಮತ್ತಷ್ಟು ತೀವ್ರಗೊಳಿಸಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ವಿವಾದ ಕರ್ನಾಟಕದಲ್ಲಿ ಮತ್ತಷ್ಟು ತೀವ್ರಗೊಂಡಿದೆ. ರಾಜ್ಯದ ವಿವಿಧೆಡೆ ಸಾವಿರಾರು ವಾಹನಗಳು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿವೆ, ಎಂಜಿನ್‌ಗಳು ಪದೇಪದೇ ಸ್ಥಗಿತಗೊಳ್ಳುತ್ತಿವೆ ಮತ್ತು...

‘ಕಾಂಗ್ರೆಸಿಗರನ್ನು ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತೇವೆ’ ಎಂದಿದ್ದ ನಾರಾಯಣಸ್ವಾಮಿ ಮನೆಗೆ ಬ್ಲಿಂಕಿಟ್ ಮೂಲಕ 20 ಚಾಕುಗಳ ಆರ್ಡರ್: ದೂರು ದಾಖಲಿಸಿದ ಬಿಜೆಪಿ

ಬೆಂಗಳೂರು: ಕ್ವಿಕ್ ಕಾಮರ್ಸ್ ವೇದಿಕೆ ಬ್ಲಿಂಕಿಟ್ ಮೂಲಕ ತನಗೆ 20 ಚಾಕುಗಳನ್ನು ಕಳುಹಿಸಲಾಗಿದೆ. ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರೇ ಈ ಚಾಕುಗಳನ್ನು ಆರ್ಡರ್ ಮಾಡಿದ್ದಾರೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ...

ಫಿರೋಜಾಬಾದ್‌ನಲ್ಲಿ ಸಾಮೂಹಿಕ ಅತ್ಯಾಚಾರ; ಬಹು ಅಂಗಾಂಗ ಹಾನಿಯಿಂದ 16 ವರ್ಷದ ದಲಿತ ಬಾಲಕಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನವೆಂಬರ್ 1 ರಂದು ಬರ್ಬರ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 16 ವರ್ಷದ ದಲಿತ ಬಾಲಕಿ, ಆಗ್ರಾದ ಆಸ್ಪತ್ರೆಯೊಂದರಲ್ಲಿ ಸುಮಾರು ಒಂದು ವಾರಗಳ ಕಾಲ ಸಾವಿನೊಂದಿಗೆ ಹೋರಾಡಿದ ನಂತರ ಶುಕ್ರವಾರ ಕೊನೆಯುಸಿರೆಳೆದಿದ್ದಾಳೆ. ಆಕೆಯನ್ನು...

ಬಂಗಾಳದ SIR ಟ್ರಿಬ್ಯೂನಲ್‌ನಿಂದ 4ನೇ ನ್ಯಾಯಾಧೀಶರ ನಿರ್ಗಮನ: ನಿವೃತ್ತ ನ್ಯಾಯಮೂರ್ತಿ ಬಿಸ್ವಜಿತ್ ಬಸು ರಾಜೀನಾಮೆ!

ಕೋಲ್ಕತಾ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಮೇಲ್ಮನವಿ ಟ್ರಿಬ್ಯೂನಲ್‌ನಿಂದ ನಿವೃತ್ತ ನ್ಯಾಯಮೂರ್ತಿ ಬಿಸ್ವಜಿತ್ ಬಸು ಅವರು ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವರದಿಗಳ ಪ್ರಕಾರ, ಕಲ್ಕತ್ತಾ...