#UnitedStatesOfIndia

ಇಂದು ದ್ರಾವಿಡ ಚಳವಳಿ ನೇತಾರ, ಡಿಎಂಕೆ ಸ್ಥಾಪಕ ಸಿ.ಎನ್.‌ ಅಣ್ಣಾದೊರೈ ಅವರ 112 ನೇ ಜನ್ಮದಿನವಾಗಿದ್ದು ಟ್ವಿಟ್ಟರ್‌ನಲ್ಲಿ  #UnitedStatesOfIndia ಟ್ರೆಂಡ್ ಆಗಿದೆ. ಹಿಂದಿ ಹೇರಿಕೆಯನ್ನು ವಿರೋಧಿಸಿ ನಿರಂತರ ಹೋರಾಟ ನಡೆಸಿದ್ದ ಅಣ್ಣಾದೊರೈ ತಮಿಳುನಾಡಿನಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಿದವರಾಗಿದ್ದಾರೆ.

ಕೇಂದ್ರ ಸರ್ಕಾರ ಭಾಷೆಯ ಹೆಸರಲ್ಲಿ, ಸಂಸ್ಕೃತಿಯ ಹೆಸರಲ್ಲಿ ಅಧಿಕಾರವನ್ನು ಕೇಂದ್ರೀಕರಣ ಮಾಡುತ್ತಿರುವುದರ ವಿರುದ್ದ ಧ್ವನಿ ಎತ್ತಿರುವ ನೆಟ್ಟಿಗರು ಒಕ್ಕೂಟ ವ್ಯವಸ್ಥೆ ಗಟ್ಟಿಯಾಗಲು ದೇಶವು ’ಭಾರತ ಸಂಯುಕ್ತ ರಾಜ್ಯ’ ಆಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸಿದ್ದಾರೆ. ಇದನ್ನು ತಮಿಳುನಾಡಿನ ಮೊದಲ ಮುಖ್ಯಮಂತ್ರಿಯಾಗಿದ್ದ ಅಣ್ಣಾದೊರೈ ಕೂಡಾ ಆಗ್ರಹಿಸಿದ್ದರು ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ #UnitedStatesOfIndia ಟ್ರೆಂಡ್ ಆಗಿದೆ.

ಇದನ್ನೂ ಓದಿ: ನಾನು ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ: ಹಿಂದಿ ಹೇರಿಕೆ ವಿರುದ್ಧ ವಿಭಿನ್ನ ಪ್ರತಿರೋಧ

ಸಂಯುಕ್ತ ಒಕ್ಕೂಟ ರಾಜ್ಯ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯಗಳೂ ತನ್ನದೇ ಆದ ಅಧಿಕಾರವನ್ನು ಹೊಂದಿರುತ್ತದೆ. ಇಲ್ಲಿ ಹೆಚ್ಚನ ಅಧಿಕಾರವು ವಿಕೇಂದ್ರೀಕರಣಗೊಂಡಿರುತ್ತದೆ.

ಪ್ರಸ್ತುತ ಅಣ್ಣಾ ದೊರೈ ಅವರ ಜನ್ಮ ದಿನದ ಹಿನ್ನಲೆಯಲ್ಲಿ #UnitedStatesOfIndia ಟ್ರೆಂಡ್ ಆಗಿದ್ದರೂ ಭಾರತ ಇತರ ಭಾಗದ ಜನರು ಕೂಡಾ ಇದಕ್ಕೆ ಧ್ವನಿ ಸೇರಿಸಿದ್ದಾರೆ.

ನಿತ್ಯಾನಂದನ್ ಎಂಬವರು ಟ್ವೀಟ್ ಮಾಡಿ, “ತಮಿಳುನಾಡು ಒಂದು ರಾಜ್ಯವಾಗಿದೆ, ಅದು ಭಾರತದ ವಸಾಹತು ಅಲ್ಲ” ಎಂದು ಹೇಳಿದ್ದಾರೆ.

ಅಜಿತ್ ಮನ್ನ ಎಂಬುವವರು, “ಫ್ಯಾಸಿಸಮ್ ಕೇಂದ್ರೀಕರಣವನ್ನು ಬಯಸುತ್ತದೆ. ಅಭಿವೃದ್ದಿಗೆ ಒಕ್ಕೂಟ ವ್ಯವಸ್ಥೆಯನ್ನು ಬಯಸುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.

ಸೌತ್ ಇಂಡಿಯನ್ ಬಾಯ್ ಎಂಬ ಟ್ವಿಟ್ಟರ್‌ ಹ್ಯಾಂಡಲ್, “ಭಾರತ ಒಂದು ರಾಷ್ಟ್ರವಲ್ಲ, ಅದು ಹಲವಾರು ಜನಾಂಗೀಯ ಗುಂಪಿನ ಒಕ್ಕೂಟವಾಗಿದೆ. ಒಂದೇ ಭಾಷೆ ಇಡೀ ಒಕ್ಕೂಟಕ್ಕೆ ಅಸಾಧ್ಯವಾಗಿದೆ.” ಎಂದು ಬರೆದಿದೆ.

ತಮಿಳಿಗರು ಮಾತ್ರವಲ್ಲದೆ ಬಂಗಾಳಿಗರು ಕೂಡಾ #UnitedStatesOfIndia ಗೆ ಬೆಂಬಲ ನೀಡಿದ್ದು, “ಬಂಗಾಳ ಸಂಪತ್ತನ್ನು ಸೃಷ್ಟಿಸುತ್ತದೆ, ಹಿಂದಿ ಪ್ರದೇಶ ಅದನ್ನು ಉಪಯೋಗಿಸುತ್ತದೆ ಆದರೆ ನಮ್ಮನ್ನು ದೇಶ ವಿರೋಧಿಗಳು ಎಂದು ಕರೆಯುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ’ಹಿಂದಿ’ ದಕ್ಷಿಣ ಭಾರತೀಯರ ಅವಕಾಶಗಳನ್ನು ಕಸಿದಿದೆ

 

LEAVE A REPLY

Please enter your comment!
Please enter your name here