Homeಮುಖಪುಟದೆಹಲಿ ವಿವಿ ವಿದ್ಯಾರ್ಥಿ ಸಂಘದ ಚುನಾವಣೆ: ABVP ಗೆ 4ರಲ್ಲಿ 3 ಸ್ಥಾನ, ಕೇವಲ 1...

ದೆಹಲಿ ವಿವಿ ವಿದ್ಯಾರ್ಥಿ ಸಂಘದ ಚುನಾವಣೆ: ABVP ಗೆ 4ರಲ್ಲಿ 3 ಸ್ಥಾನ, ಕೇವಲ 1 ಸ್ಥಾನಕ್ಕೆ NSUI ಸಿಮೀತ..

- Advertisement -
- Advertisement -

ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘ ಚುನಾವಣೆಯ ಫಲಿತಾಂಶ ಪ್ರಕಟಿಸಲಾಗಿದ್ದು ಎಬಿವಿಪಿಯು ನಾಲ್ಕರಲ್ಲಿ ಮೂರು ಸ್ಥಾನ ಗೆದ್ದುಕೊಂಡರೆ, ಒಂದು ಸ್ಥಾನ ಎನ್‌ಎಸ್‌ಯುಐ ಪಾಲಾಗಿದೆ.

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ಎಬಿವಿಪಿ ಪಡೆದುಕೊಂಡರೆ, ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಗೆದ್ದುಕೊಂಡಿದೆ.

ಎಬಿವಿಪಿಯ ಅಶ್ವಿತ್ ದಹಿಯಾ ಅವರು ಡಿಯುಎಸ್‌ಯು ಚುನಾವಣೆಯಲ್ಲಿ ಅಧ್ಯಕ್ಷ ಹುದ್ದೆ, ಪ್ರದೀಪ್ ತನ್ವಾರ್ ಉಪಾಧ್ಯಕ್ಷ ಮತ್ತು ಶಿವಂಗಿ ಖರ್ವಾಲ್ ಜಂಟಿ ಕಾರ್ಯದರ್ಶಿ ಆಯ್ಕೆಯಾಗಿದ್ದಾರೆ. NSUI ನ ಆಶಿಶ್ ಲಂಬ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಈ ಚುನಾವಣೆಯಲ್ಲಿ ಶೇ 39.9% ಮತದಾನವಾಗಿದ್ದು 1.3 ಲಕ್ಷ ವಿದ್ಯಾರ್ಥಿಗಳು ಮತ ಚಲಾಯಿಸಿದ್ದರು. 144 ಇವಿಯಂ ಗಳನ್ನು ಚುನಾವಣೆಗಾಗಿ ಬಳಸಿತ್ತು.

ಇಲ್ಲಿಯೂ ಇವಿಯಂ ತಿರುಚಲಾಗಿದೆ: NSUI ಆರೋಪ..

ಆರ್ಯಭಟ ಕಾಲೇಜಿನಲ್ಲಿ ಇವಿಯಂ ತಿರುಚಲಾಗಿದೆ ಎಂದು NSUI ರಾಷ್ಟ್ರೀಯ ಜವಾಬ್ದಾರಿ ಹೊತ್ತಿರುವ ರುಚಿ ಗುಪ್ತ ಆರೋಪಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು NSUI ಅಭ್ಯರ್ಥಿ ಪರವಾಗಿ ಬ್ಯಾಲೆಟ್ ಒತ್ತಿದರೆ ಮತವನ್ನು ಅಧಿಕೃತಗೊಳಿಸಲು ಲೈಟ್ ಬರುತ್ತಿರಲಿಲ್ಲ” ಎಂದು ಆರೋಪಿಸಿದ್ದಾರೆ. ಇದಕ್ಕೆ ಚುನಾವಣೆ ಸಮಿತಿ ಸದಸ್ಯರು ಸ್ಪಷ್ಟೀಕರಣ ನೀಡಿದ್ದು, ತಾಂತ್ರಿಕ ಕಾರಣದಿಂದ ಲೈಟ್ ಬರುತ್ತಿರಲಿಲ್ಲ ಅಷ್ಟೇ ಎಂದಿದ್ದಾರೆ.

ಪೇಜ್ ಪ್ರಮುಖ ತಂತ್ರ ABVP ಗೆಲುವಿಗೆ ಕಾರಣ

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ‘ಪೇಜ್ ಪ್ರಮುಖ್’ಗಳನ್ನು ನೇಮಿಸುವ ಹೊಸ ತಂತ್ರವನ್ನು ಅಳವಡಿಸಿಕೊಂಡಿತ್ತು, ಅಲ್ಲಿ ಪ್ರತಿ ಮತದಾರರ ಪುಟಕ್ಕೂ ಒಬ್ಬೊಬ್ಬರಿಗೆ ಜವಾಬ್ದಾರಿಯನ್ನು ನೀಡಲಾಗಿತ್ತು. ಅವರು ಪುಟದಲ್ಲಿನ ಹೆಸರುಗಳನ್ನು ಗುರಿಯಾಗಿಸಿಕೊಂಡು ಪ್ರತಿಯೊಬ್ಬರನ್ನು ಮಾತನಾಡಿಸಿ ಮತ ಹಾಕುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದು ಪ್ರಭಾರಿಯವರ ಕೆಲಸವಾಗಿತ್ತು. ಸಾಮಾನ್ಯವಾಗಿ ಒಂದು ಪುಟವು ಸುಮಾರು 30 ರಿಂದ 35 ಮತದಾರರ ಹೆಸರುಗಳನ್ನು ಹೊಂದಿರುತ್ತದೆ.

ಎಬಿವಿಪಿ ಸಹ ಈ ಚುನಾವಣೆಯಲ್ಲಿ ಇದೇ ಮಾದರಿಯನ್ನು ಅಳವಡಿಸಿಕೊಂಡಿತ್ತು ಎಂದು ಹೇಳಲಾಗುತ್ತಿದೆ. ಎಬಿವಿಪಿ ಎಲ್ಲಾ 51 ಡಿಯುಎಸ್‌ಯು-ಸಂಯೋಜಿತ ಕಾಲೇಜುಗಳ ಪ್ರತಿ ಕೋರ್ಸ್‌ಗೆ ವರ್ಗ ಉಸ್ತುವಾರಿಯನ್ನು ನೇಮಿಸಿತ್ತು ಎಂದು ಮೂಲಗಳು ತಿಳಿಸಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...