Homeಮುಖಪುಟದ್ವಾರಕಾ ಎಕ್ಸ್‌ಪ್ರೆಸ್‌ವೇ ವೆಚ್ಚ ಅನುಮೋದಿತ ಮೊತ್ತಕ್ಕಿಂತ 14 ಪಟ್ಟು ಹೆಚ್ಚು: ಸಿಎಜಿ

ದ್ವಾರಕಾ ಎಕ್ಸ್‌ಪ್ರೆಸ್‌ವೇ ವೆಚ್ಚ ಅನುಮೋದಿತ ಮೊತ್ತಕ್ಕಿಂತ 14 ಪಟ್ಟು ಹೆಚ್ಚು: ಸಿಎಜಿ

- Advertisement -
- Advertisement -

ಕೇಂದ್ರದ ಭಾರತ ಮಾಲಾ ಪರಿಯೋಜನಾ ಹಂತ-1 ರ ಅಡಿಯಲ್ಲಿ ನಿರ್ಮಿಸಲಾದ ದ್ವಾರಕಾ ಹೆದ್ದಾರಿಯ ವೆಚ್ಚವು 2017 ರಲ್ಲಿ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಅನುಮೋದಿಸಿದ ಮೊತ್ತವನ್ನು 14 ಪಟ್ಟು ಮೀರಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್( ಸಿಎಜಿ) ತಿಳಿಸಿದೆ.

ದೆಹಲಿ ಮತ್ತು ಗುರುಗ್ರಾಮ್ ನಡುವೆ 14-ಲೇನ್ ನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸುವ ಮೂಲಕ ಸಂಚಾರಿ ದಟ್ಟಣೆಯನ್ನು ಕಡಿಮೆ ಮಾಡಲು ಆದ್ಯತೆ ನೀಡುವ ಉದ್ದೇಶದಿಂದ ಹೆದ್ದಾರಿ ನಿರ್ಮಿಸಲು ಯೋಜನೆ ಹಾಕಲಾಗಿತ್ತು.

CCEA ಅನುಮೋದನೆ ಮಾಡಿದ ಪ್ರತಿ ಕಿಮೀ ವೆಚ್ಚ  18.20 ಕೋಟಿ ವೆಚ್ಚಕ್ಕೆ ಬದಲಾಗಿ ಎಕ್ಸ್‌ಪ್ರೆಸ್‌ವೇ ನ್ನು ಪ್ರತಿ ಕಿಮೀಗೆ 250.77 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಏಪ್ರಿಲ್ 2022ರಲ್ಲಿನ ಈ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರತಿಕ್ರಿಯೆಯನ್ನು ವರದಿ ಉಲ್ಲೇಖಿಸಿದೆ. ದ್ವಾರಕಾ ಎಕ್ಸ್‌ಪ್ರೆಸ್‌ವೇಯನ್ನು ಎಂಟು ಪಥಗಳ ಎಲಿವೇಟೆಡ್ ಕಾರಿಡಾರ್ ಆಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಇದಕ್ಕೆ ಹೆಚ್ಚು ವೆಚ್ಚ ತಗುಲಲಿದೆ ಎಂದು ಹೇಳಿದೆ.

ಸರಿಸುಮಾರು 55,432 ಪ್ರಯಾಣಿಕ ವಾಹನಗಳ ಸರಾಸರಿ ದೈನಂದಿನ ಸಂಚಾರಕ್ಕಾಗಿ ಎಂಟು ಲೇನ್‌ಗಳ (ಎಲಿವೇಟೆಡ್ ಲೇನ್‌ಗಳು) ಹೆದ್ದಾರಿಯ ಯೋಜನೆ ನಿರ್ಮಾಣಕ್ಕೆ ದಾಖಲೆಯಲ್ಲಿ ಯಾವುದೇ ಸಮರ್ಥನೆ ಇಲ್ಲ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಹೇಳಿದ್ದಾರೆ. 2,32,959 ಪ್ರಯಾಣಿಕ ವಾಹನಗಳ ಸರಾಸರಿ ವಾರ್ಷಿಕ ದೈನಂದಿನ ಸಂಚಾರಕ್ಕಾಗಿ ಕೇವಲ ಆರು ಲೇನ್‌ಗಳನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ರೀತಿ ವೆಚ್ಚ ಮೀರಿರುವುದು ಇದು ಒಂದೇ ಹೆದ್ದಾರಿಯ ನಿರ್ಮಾಣದಲ್ಲಿ ಅಲ್ಲ. ದೇಶದಾದ್ಯಂತ ಕೇಂದ್ರದ ಭಾರತ ಮಾಲಾ ಪರಿಯೋಜನೆಯಡಿ ನಿರ್ಮಾಣ ವಾಗುತ್ತಿರುವ ಹೆದ್ದಾರಿಗಳ ವೆಚ್ಚ ನಿಗದಿತ ವೆಚ್ಚಕ್ಕಿಂತ ಶೇಕಡಾ 58 ರಷ್ಟು ಹೆಚ್ಚಾಗಿದೆ ಎಂದು ವರದಿ ಬಹಿರಂಗಪಡಿಸಿದೆ.

26,316 ಕಿಮೀ ಯೋಜನೆಯ ಉದ್ದದ ಹೆದ್ದಾರಿಗೆ ಮಂಜೂರಾದ ವೆಚ್ಚ  8,46,588 ಕೋಟಿ (ರೂ 32.17 ಕೋಟಿ/ಕಿಮೀ) ಆಗಿದೆ. ಆದರೆ ಸಿಸಿಇಎ ಅನುಮೋದಿಸಿದ್ದು 34,800 ಕಿಮೀ ಉದ್ದಕ್ಕೆ 5,35,000 ಕೋಟಿ (ರೂ. 15.37 ಕೋಟಿ/ಕಿಮೀ) ವೆಚ್ಚವಾಗಿದೆ.

ವೆಚ್ಚದ ಹೆಚ್ಚಳದ  ಹೊರತಾಗಿ, 34,800 ಕಿಮೀ ರಾಷ್ಟ್ರೀಯ ಹೆದ್ದಾರಿಗಳನ್ನು ಪೂರ್ಣಗೊಳಿಸಲು 2022ರ ಗಡುವನ್ನು ನೀಡಲಾಗಿತ್ತು. ಆದರೆ 31 ಮಾರ್ಚ್ 2023 ರವರೆಗೆ ಕೇವಲ 13,499 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳು ಪೂರ್ಣಗೊಂಡಿವೆ ಎಂದು ವರದಿ ಹೇಳಿದೆ.

ಇದನ್ನು ಓದಿ: ದಲಿತ ಸಮುದಾಯಕ್ಕೆ ಅವಮಾನ: ನಟ ಉಪೇಂದ್ರ ವಿರುದ್ಧ ಎರಡನೇ ಪ್ರಕರಣ ದಾಖಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿಂದನೆ ಸಾರ್ವಜನಿಕವಾಗಿ ನಡೆದಿದ್ದರೆ ಮಾತ್ರ ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗುತ್ತದೆ: ಸುಪ್ರೀಂ ಕೋರ್ಟ್‌

0
ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಮಾನ ಅಥವಾ ನಿಂದನೆ ಮಾಡಿದರೆ  ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗಬೇಕಿದ್ದರೆ 'ನಿಂದನೆಯು...