Homeಮುಖಪುಟದಲಿತ ಸಮುದಾಯಕ್ಕೆ ಅವಮಾನ: ನಟ ಉಪೇಂದ್ರ ವಿರುದ್ಧ ಎರಡನೇ ಪ್ರಕರಣ ದಾಖಲು

ದಲಿತ ಸಮುದಾಯಕ್ಕೆ ಅವಮಾನ: ನಟ ಉಪೇಂದ್ರ ವಿರುದ್ಧ ಎರಡನೇ ಪ್ರಕರಣ ದಾಖಲು

- Advertisement -
- Advertisement -

ದಲಿತ ಸಮುದಾಯಕ್ಕೆ ಅವಮಾನ ಮಾಡಿದ ನಟ ಉಪೇಂದ್ರ ಅವರ ವಿರುದ್ಧ ಎರಡನೇ ಪ್ರಕರಣ  ದಾಖಲಾಗಿದೆ.

ಲೈವ್ ವಿಡಿಯೋದಲ್ಲಿ ‘ಊರು ಅಂದ್ಮೇಲೆ ಹೊಲೆಗೇರಿ ಇರುತ್ತೆ’ ಎಂದು  ಹೇಳಿಕೆ ನೀಡಿದ್ದ ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ವಿರುದ್ಧ ಹರೀಶ್ ಕುಮಾರ್ ಎಂಬವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹರೀಶ್ ಕುಮಾರ್ ಅವರು, ಭಾರತೀಯ ದಂಡಸಂಹಿತೆಯ 505(1)(B)(C), 153a, 295, 295A, sc st prevention of atrocities act 1989 ಅಡಿಯಲ್ಲಿ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕರಾದ ಉಪೇಂದ್ರ ಅವರು, ಫೇಸ್ ಬುಕ್ ಲೈವ್ ವಿಡಿಯೋ ವೇಳೆ ‘ಊರು ಅಂದ್ಮೇಲೆ ಹೊಲೆಗೇರಿ ಕೂಡ ಇರುತ್ತೆ’ ಎಂದು ಗಾದೆಯನ್ನು ಉಲ್ಲೇಖಿಸಿ ಮಾತನಾಡಿದ್ದರು. ಇದರ ಬೆನ್ನಲ್ಲೇ ಉಪೇಂದ್ರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿ ಮೊದಲು ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂದನ್ ಎಂಬವರು ನೀಡಿದ್ದ ದೂರಿನ ಮೇರೆಗೆ ಮೊದಲ ಎಫ್ಐಆರ್ ದಾಖಲಾಗಿತ್ತು.

ದೀಪು ಗೌಡ್ರು ಎಂಬವರು ಈ ಕುರಿತು ಪ್ರತಿಕ್ರಿಯಿಸಿ,”ಅಲ್ಲ ಈತನ ಯಾವುದೋ ಒಂದು ಪಕ್ಷದ ಸಿದ್ದಾಂತದ ವಿರುದ್ಧ ಒಂದಷ್ಟು ಜನ ವಿರೋಧ ವ್ಯಕ್ತಪಡಿಸಿದರೆ, ಆ ಜನರನ್ನು “ಹೊಲ್ಗೇರಿ”ಗೆ ಹೊಲಿಸೋದು ಎಷ್ಟರ ಮಟ್ಟಕ್ಕೆ ಸರಿ..?? ಹಾಗಾದರೆ ಈ ಮನುಷ್ಯನ ಪ್ರಕಾರ ಹೊಲ್ಗೇರಿಯಲ್ಲಿ ಬದುಕುವ ಜನರೆಲ್ಲರು ಕೆಟ್ಟವರಾ? ಇಂತಹ ಕೆಟ್ಟ ಮನಸ್ಥಿತಿಗೆನೇ ನಾವು ಬ್ರಾಹ್ಮಣ್ಯ ಅಂತ ಉಗಿಯೋದು.. ಅಲ್ಲ್ರೀ ಸ್ವಾಮಿ ನಿಮಗೆ ನಿಜವಾಗಿಯೂ ಸಮಾಜದ ಮೇಲೆ ಕಾಳಜಿ ಇದಿದ್ದಿದ್ರೆ ಊರಿನಲ್ಲಿ ಹೊಲ್ಗೇರಿನೆ ಇರಬಾರದು ಅನ್ನೋ ಸಮಾನತೆಯ ಸಮಾಜದ ಬಗ್ಗೆ ಯೋಚನೆ ಮಾಡ್ತಿದ್ರಿ” ಎಂದು ಬರೆದಿದ್ದಾರೆ.

ಕರ್ನಾಟಕ ರಾಜ್ಯ ಭೀಮ್ ಆರ್ಮಿ ಅಧ್ಯಕ್ಷರಾದ ರಾಜಗೋಪಾಲ್. ಡಿ ಅವರು ಪ್ರತಿಕ್ರಿಯಿಸಿ, ಉಪೇಂದ್ರ ಅವರೆ, “ಊರು ಅಂದರೆ ಹೋಲಗೇರಿ ಇರುತ್ತೆ” ಎಂದು ಹೇಳುವುದರ ಮೂಲಕ ನೀವು ದಲಿತರನ್ನು ಅಪಮಾನಿಸುತ್ತಾ ಇದ್ದಿರಿ… ಕೂಡಲೆ ನಿಮ್ಮ ಹೇಳಿಕೆ ವಾಪಸ್ಸು ಪಡೆದುಕೋಳ್ಳಬೇಕು ಮತ್ತೆ ಈ ದಲಿತ ಸಮಾಜಕ್ಕೆ ಕ್ಷಮೆ ಕೇಳಬೇಕು.ಇಲ್ಲದಿದ್ದಲ್ಲಿ ನಿಮ್ಮ ವಿರುದ್ದ ಭೀಮ್ ಆರ್ಮಿ ಮತ್ತು ದಲಿತ ಸಂಘಟನೆಗಳಿಂದ ಹೋರಾಟ ಮಾಡಬೇಕಾಗುತ್ತದೆ ಮತ್ತೆ ದೌರ್ಜನ್ಯ ಕಾಯ್ದೆ ಅಡಿ ನಿಮ್ಮ ಮೇಲೆ ಕೇಸು ದಾಖಲಿಸಬೇಕಾಗುತ್ತದೆ ಎಂದು ಹೇಳಿದ್ದರು.

ಉಪೇಂದ್ರ ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕ್ಷಮಾಪನೆಯನ್ನು ಕೇಳಿದ್ದು, ಬಾಯಿ ತಪ್ಪಿನಿಂದ  ಗಾದೆ ಮಾತು ಬಂದಿದೆ. ಇದರಿಂದ ಹಲವರ ಭಾವನೆಗಳು ಧಕ್ಕೆಯಾಗಿರುವುದನ್ನು ಗಮನಿಸಿ ತಕ್ಷಣ ಲೈವ್ ವಿಡಿಯೋವನ್ನು ಡಿಲಿಟ್ ಮಾಡಿದ್ದೇನೆ. ಮಾತಿಗೆ ಕ್ಷಮೆ ಇರಲಿ ಎಂದು ಹೇಳಿದ್ದರು.

ಇದನ್ನು ಓದಿ: ದಲಿತ ಸಮುದಾಯಕ್ಕೆ ಅವಮಾನ – ತೀವ್ರ ಟೀಕೆಯ ನಂತರ ಕ್ಷಮೆಯಾಚಿಸಿದ ನಟ ಉಪೇಂದ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...