Homeಮುಖಪುಟ'ನಮ್ಮ ಚುನಾವಣಾ ಕಾರ್ಯತಂತ್ರ ತಿಳಿದುಕೊಳ್ಳಲು ಇಡಿ ಫೋನ್ ಹುಡುಕುತ್ತಿದೆ..'; ಆತಿಶಿ ಗಂಭೀರ ಆರೋಪ

‘ನಮ್ಮ ಚುನಾವಣಾ ಕಾರ್ಯತಂತ್ರ ತಿಳಿದುಕೊಳ್ಳಲು ಇಡಿ ಫೋನ್ ಹುಡುಕುತ್ತಿದೆ..’; ಆತಿಶಿ ಗಂಭೀರ ಆರೋಪ

- Advertisement -
- Advertisement -

ಜಾರಿ ನಿರ್ದೇಶನಾಲಯವು (ಇಡಿ) ಬಿಜೆಪಿಯ ರಾಜಕೀಯ ಅಸ್ತ್ರವಾಗಿ ಕೆಲಸ ಮಾಡುತ್ತಿದೆ; ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಫೋನ್ ಅನ್ನು ಪರಿಶೀಲಿಸುವ ಮೂಲಕ ಎಎಪಿಯ ಲೋಕಸಭಾ ಚುನಾವಣಾ ಕಾರ್ಯತಂತ್ರದ ವಿವರಗಳನ್ನು ಪಡೆಯಲು ಅಧಿಕಾರಿಗಳು ಬಯಸಿದ್ದಾರೆ ಎಂದು ಎಎಪಿ ಹಿರಿಯ ನಾಯಕಿ ಅತಿಶಿ ಶುಕ್ರವಾರ ಆರೋಪಿಸಿದ್ದಾರೆ.

ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರಾಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ದೆಹಲಿ ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಮಾರ್ಚ್ 21 ರಂದು ಕೇಂದ್ರ ತನಿಖಾ ಸಂಸ್ಥೆಯು ಬಂಧಿಸಿದ್ದು, ಏಪ್ರಿಲ್ 1 ರವರೆಗೆ ತನ್ನ ಕಸ್ಟಡಿಯಲ್ಲಿದೆ. ಜಾರಿ ನಿರ್ದೇಶನಾಲಯ (ಇಡಿ) ಅರವಿಂದ್ ಕೇಜ್ರಿವಾಲ್ ಅವರ ಮೊಬೈಲ್ ಫೋನ್ ಅನ್ನು ಹುಡುಕುತ್ತಿದೆ. ಇಡಿ ಅಧಿಕಾರಿಗಳು ಬಿಜೆಪಿಯ “ರಾಜಕೀಯ ಅಸ್ತ್ರ” ವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಾಬೀತುಪಡಿಸುತ್ತದೆ ಎಂದು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಆರೋಪಿಸಿದ್ದಾರೆ.

“ವಾಸ್ತವವಾಗಿ ಇದು ಬಿಜೆಪಿಯೇ ಹೊರತು ಕೇಜ್ರಿವಾಲ್ ಅವರ ಫೋನ್‌ನಲ್ಲಿ ಏನಿದೆ ಎಂದು ತಿಳಿಯಲು ಇಡಿ ಬಯಸುವುದಿಲ್ಲ” ಎಂದು ಹೇಳಿದರು.

ಅಬಕಾರಿ ನೀತಿಯನ್ನು 2021-22ರಲ್ಲಿ ಜಾರಿಗೆ ತರಲಾಗಿದ್ದು, ಮುಖ್ಯಮಂತ್ರಿಯವರ ಪ್ರಸ್ತುತ ಫೋನ್ ಕೆಲವೇ ತಿಂಗಳು ಹಳೆಯದು ಎಂದು ಅವರು ಹೇಳಿದ್ದಾರೆ. ಆ ಅವಧಿಯ ಕೇಜ್ರಿವಾಲ್ ಅವರ ಫೋನ್ ಲಭ್ಯವಿಲ್ಲ ಎಂದು ಇಡಿ ಹೇಳಿದೆ. ಈಗ ಅಧಿಕಾರಿಗಳು ಅವರ ಹೊಸ ಫೋನ್‌ನ ಪಾಸ್‌ವರ್ಡ್ ಅನ್ನು ಬಯಸುತ್ತಿದ್ದಾರೆ ಎಂದು ಅತಿಶಿ ಹೇಳಿದರು.

“ಅವರು ಫೋನ್ ಪರಿಶಿಲಿಸಲು ಬಯಸುತ್ತಿದ್ದಾರೆ. ಏಕೆಂದರೆ, ಅವರು ಅದರಲ್ಲಿ ಎಎಪಿಯ ಲೋಕಸಭಾ ಚುನಾವಣಾ ಕಾರ್ಯತಂತ್ರ, ಪ್ರಚಾರ ಯೋಜನೆಗಳು, ಇಂಡಿಯಾ ಬ್ಲಾಕ್ ನಾಯಕರೊಂದಿಗಿನ ಮಾತುಕತೆಗಳು ಮತ್ತು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಕಾರ್ಯತಂತ್ರದ ಬಗ್ಗೆ ಮಾಹಿತಿಯನ್ನು ಕಾಣಬಹುದು” ಎಂದು ಅವರು ಹೇಳಿದರು.

ಸಂಸತ್ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಎಎಪಿ, ಟಿಎಂಸಿ, ಕಾಂಗ್ರೆಸ್, ಡಿಎಂಕೆ ಮತ್ತು ಎಸ್‌ಪಿ ಸೇರಿದಂತೆ ಕೆಲವು ವಿರೋಧ ಪಕ್ಷಗಳು ಈ ಬಣವನ್ನು ರಚಿಸಿವೆ. ಭ್ರಷ್ಟಾಚಾರದ ಆರೋಪದ ನಂತರ 2021-22 ನೀತಿಯನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ; ಅರವಿಂದ್ ಕೇಜ್ರಿವಾಲ್ ಬಂಧನ ವಿರೋಧಿಸಿ ಇಂಡಿಯಾ ಬ್ಲಾಕ್ ಪ್ರತಿಭಟನೆ; ದೆಹಲಿ ಪೊಲೀಸರಿಂದ ಬಿಗಿ ಭದ್ರತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...