Homeಮುಖಪುಟ‘ಜೈ ಭೀಮ್‌’ ಚಿತ್ರದಲ್ಲಿ ಹಿಂದಿ ಮಾತನಾಡುವ ವ್ಯಕ್ತಿಗೆ ಕಪಾಳ ಮೋಕ್ಷ: ಪ್ರಕಾಶ್ ರಾಜ್‌ ಹೇಳಿದ್ದೇನು?

‘ಜೈ ಭೀಮ್‌’ ಚಿತ್ರದಲ್ಲಿ ಹಿಂದಿ ಮಾತನಾಡುವ ವ್ಯಕ್ತಿಗೆ ಕಪಾಳ ಮೋಕ್ಷ: ಪ್ರಕಾಶ್ ರಾಜ್‌ ಹೇಳಿದ್ದೇನು?

- Advertisement -
- Advertisement -

ಇತ್ತೀಚೆಗೆ ಬಿಡುಗಡೆಯಾದ ಜೈ ಭೀಮ್‌ ಚಿತ್ರದಲ್ಲಿ ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿಯೊಬ್ಬನಿಗೆ ಚಿತ್ರದ ನಟ ಪ್ರಕಾಶ್‌ ರಾಜ್‌ ಕಪಾಳಮೋಕ್ಷ ಮಾಡಿದ್ದರು. ಇದಕ್ಕೆ ಹಿಂದಿ ಹೇರಿಕೆ ಸಮರ್ಥನೆ ಮಾಡುವ ಬಲಪಂಥೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪ್ರಕಾಶ್‌ ರಾಜ್, “ಚಿತ್ರದಲ್ಲಿ ಇರುಳರ್‌ ಸಮುದಾಯದ ಸಂಕಷ್ಟಗಳನ್ನು ತೋರಿಸಿದರೂ, ಅವರಿಗೆ ಕಪಾಳಮೋಕ್ಷ ದೃಶ್ಯದ ಬಗ್ಗೆ ಮಾತ್ರ ಆಕ್ಷೇಪ ಇದೆ ಎಂದರೆ, ಅವರ ಅಜೆಂಡಾ ಬಹಿರಂಗವಾಗುತ್ತದೆ” ಎಂದಿದ್ದಾರೆ.

ಪ್ರಕಾಶ್ ರಾಜ್ ಚಿತ್ರದಲ್ಲಿ, ಸುಳ್ಳು ಪ್ರಕರಣದಲ್ಲಿ ಸಿಲುಕಿ ಪೊಲೀಸರಿಂದ ಅನ್ಯಾಯಕ್ಕೆ ಒಳಗಾಗಿದ್ದ ಇರುಳ ಸಮುದಾಯದ ಪರವಾಗಿ ನ್ಯಾಯಾಲಯ ರಚಿಸಿದ ಆಯೋಗದ ತನಿಖಾಧಿಕಾರಿಯಾಗಿ ನಟಿಸಿದ್ದಾರೆ. ಪ್ರಕರಣದ ವಿಚಾರಣೆಯಲ್ಲಿ ಹಿಂದಿ ಮಾತನಾಡುವ ‘ಸೇಠ್‌‌’ ಎಂಬ ವ್ಯಕ್ತಿ ಹಿಂದಿಯಲ್ಲಿ ಮಾತನಾಡುತ್ತಾರೆ. ಈ ವೇಳೆ ಪ್ರಕಾಶ್ ರಾಜ್ ಕಪಾಳ ಮೋಕ್ಷ ಮಾಡಿ ತಮಿಳಿನಲ್ಲಿ ಮಾತನಾಡು ಎಂದು ಹೇಳುತ್ತಾರೆ. ಇದು ಬಲಪಂಥೀಯ ಹಿಂದಿ ಹೇರಿಕೆ ಸಮರ್ಥಿಸುವ ಜನರ ಆಕ್ರೋಶಕ್ಕೆ ಈಡು ಮಾಡಿತ್ತು. ಆದರೆ ದಕ್ಷಿಣ ಭಾರತದ ಜನರು ನಟ ಪ್ರಕಾಶ್‌ ರಾಜ್ ಅವರನ್ನು ಬೆಂಬಲಿಸಿದ್ದರು.

ಇದನ್ನೂ ಓದಿ: ‘ಜೈ ಭೀಮ್‌’ ಚಿತ್ರಕ್ಕೆ ಸ್ಪೂರ್ತಿಯಾದ ವಕೀಲ ‘ಚಂದ್ರು’ ಯಾರು?

ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರಕಾಶ್ ರಾಜ್, “ಜೈ ಭೀಮ್ ನಂತಹ ಚಿತ್ರ ನೋಡಿದ ಅವರು ಬುಡಕಟ್ಟು ಜನರ ಯಾತನೆ ನೋಡಲಿಲ್ಲ. ಅನ್ಯಾಯವನ್ನು ನೋಡಿ ಭಯಪಡಲಿಲ್ಲ, ಆದರೆ ಕಪಾಳಮೋಕ್ಷವನ್ನು ಮಾತ್ರ ನೋಡಿದರು. ಅವರಿಗೆ ಅರ್ಥವಾದದ್ದು ಇಷ್ಟೇ; ಇದು ಅವರ ಅಜೆಂಡಾವನ್ನು ಬಹಿರಂಗಪಡಿಸುತ್ತದೆ.” ಎಂದು ಹೇಳಿದ್ದಾರೆ.

“ಇಲ್ಲಿ ಕೆಲವು ವಿಷಯಗಳನ್ನು ದಾಖಲಿಸಬೇಕು. ಉದಾಹರಣೆಗೆ, ಹಿಂದಿ ಮೇಲಿನ ದಕ್ಷಿಣ ಭಾರತೀಯರ ಆಕ್ರೋಶ. ಹಿಂದಿ ಅವರ ಮೇಲೆ ಬಲವಂತವಾಗಿ ಹೇರಲ್ಪಟ್ಟಿದೆ. ಸ್ಥಳೀಯ ಭಾಷೆ ತಿಳಿದಿರುವ ವ್ಯಕ್ತಿಯೊಬ್ಬರು ಪ್ರಶ್ನಿಸುವುದನ್ನು ತಪ್ಪಿಸಲು ಹಿಂದಿಯಲ್ಲಿ ಮಾತನಾಡುತ್ತಾರೆ ಎಂದು ತಿಳಿದಾಗ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯು ಹೇಗೆ ಪ್ರತಿಕ್ರಿಯಿಸುತ್ತಾನೆ?” ಎಂದು ಅವರು ಪ್ರಶ್ನಿಸಿದ್ದಾರೆ.

“ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯದ ಬುಡಕಟ್ಟು ಮಹಿಳೆಯರಿಗೆ ಇಂಗ್ಲಿಷ್‌ನಲ್ಲಿ ನೋಟಿಸ್ ಕಳುಹಿಸುವ ಸಾವಿರಕ್ಕೂ ಹೆಚ್ಚು ಪ್ರಕರಣಗಳಿವೆ. ಇವುಗಳನ್ನು ವಿಶಾಲ ದೃಷ್ಟಿಕೋನದಿಂದ ನೋಡುವ ಅವಶ್ಯಕತೆಯಿದೆ. ಕಪಾಳಮೋಕ್ಷದ ದೃಶ್ಯದಲ್ಲಿ ಪ್ರಕಾಶ್ ರಾಜ್ ತೆರೆಯ ಮೇಲೆ ಇದ್ದುದರಿಂದ ಕೆಲವರಿಗೆ ಅದು ಕೆರಳಿಸಿದೆ”

ಇದನ್ನೂ ಓದಿ: ಹಿಂದಿ ಹೇರಿಕೆಗೆ ಕಪಾಳ ಮೋಕ್ಷ: ‘ಜೈ ಭೀಮ್‌’ ದೃಶ್ಯಕ್ಕೆ ದ್ರಾವಿಡ ಭಾಷಿಗರ ಮೆಚ್ಚುಗೆ

“ಬುಡಕಟ್ಟು ಜನರ ನೋವು ಅವರನ್ನು ಕಲಕದಿದ್ದರೆ? ಅವರೀಗ ನನಗಿಂತ ಹೆಚ್ಚು ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಅವರ ದುರುದ್ದೇಶ ಬಹಿರಂಗವಾಗಿದೆ. ಅಂತಹ ಧರ್ಮಾಂಧರಿಗೆ ಪ್ರತಿಕ್ರಿಯಿಸುವುದರಲ್ಲಿ ಅರ್ಥವಿಲ್ಲ.” ಎಂದು ಪ್ರಕಾಶ್‌ ರಾಜ್‌ ಹೇಳಿದ್ದಾರೆ.

ಜೈ ಭೀಮ್‌ ಚಿತ್ರ

ನಿರ್ದೇಶಕ ತಾ. ಸೇ. ಜ್ಞಾನವೇಲ್ ಅವರು ರಚಿಸಿ ನಿರ್ದೇಶಿಸಿರುವ ಜೈ ಭೀಮ್‌ ಚಿತ್ರವು 90 ರ ದಶಕದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಚಿತ್ರವು ಇರುಳರ್ ಬುಡಕಟ್ಟಿನ ಸಮುದಾಯದ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು, ಕಮ್ಯುನಿಷ್ಟ್‌ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದ ವಕೀಲ ಚಂದ್ರು ಹೇಗೆ ಸಂವಿಧಾನವನ್ನು ಬಳಸಿಕೊಂಡು ಅವರಿಗೆ ನ್ಯಾಯ ಕೊಡಿಸುತ್ತಾನೆ ಎಂಬ ಬಗ್ಗೆ ಹೇಳುತ್ತದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಅಗಾಧ ಪ್ರತಿಕ್ರಿಯೆಗಳು ಬಂದಿವೆ.

ಜೈ ಭೀಮ್‌ ನವೆಂಬರ್ 2 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೇರವಾಗಿ ಬಿಡುಗಡೆಯಾಯಿತು. ಚಿತ್ರವನ್ನು ಸೂರ್ಯ ಮತ್ತು ಜ್ಯೋತಿಕಾ ಜಂಟಿಯಾಗಿ 2D ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಕೊಳೆತು ನಾರುತ್ತಿರುವ ವ್ಯವಸ್ಥೆಯ ಕಥೆ ಹೇಳುವ ‘ಜೈ ಭೀಮ್’…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕರ್ನಾಟಕ ವಿಧಾನ ಪರಿಷತ್‌ನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

0
ಕರ್ನಾಟಕ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜೂನ್ 3ರಂದು ಮತದಾನ ನಡೆಯಲಿದೆ. ಕರ್ನಾಟಕ ವಿಧಾನ ಪರಿಷತ್ತಿನ 3 ಶಿಕ್ಷಕರ ಕ್ಷೇತ್ರ ಮತ್ತು 3 ಪದವೀಧರ ಕ್ಷೇತ್ರಗಳಿಗೆ...