Homeಮುಖಪುಟಯಂಗ್ ಇಂಡಿಯಾ ದೇಶದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ: ಪ್ರಧಾನಿ ಮೋದಿ

ಯಂಗ್ ಇಂಡಿಯಾ ದೇಶದ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ: ಪ್ರಧಾನಿ ಮೋದಿ

ಕೊರೊನಾ ವೈರಸ್ ಕಾಲದಲ್ಲಿ ಹ್ಯಾಕಥಾನ್ ನಡೆಸುವುದು ದೊಡ್ಡ ಸವಾಲಾಗಿತ್ತು. ತೀವ್ರ ಸವಾಲುಗಳ ನಡುವೆಯೂ ಇದು ನಡೆಯುತ್ತಿರುವುದು ಆಶ್ಚರ್ಯಕರವಾಗಿದೆ.

- Advertisement -
- Advertisement -

ಯಂಗ್ ಇಂಡಿಯಾ ದೇಶದ ಸಮಸ್ಯೆಗಳಿಗೆ ನವೀನ ಮತ್ತು ಸೃಜನಶೀಲ ಪರಿಹಾರಗಳನ್ನು ನೀಡುವ ಪ್ರತಿಭೆಯ ಉಗ್ರಾಣವಾಗಿದೆ. ಸಣ್ಣ ಮಾರ್ಗದರ್ಶನ ಸಾಕು ವಿದ್ಯಾರ್ಥಿಗಳು ಕೊರೊನಾ ಸಾಂಕ್ರಾಮಿಕದ ಮಧ್ಯೆಯು ಭಾರತವನ್ನು ಬಹುದೂರ ಕೊಂಡ್ಯೊಯುತ್ತಾರೆ, ಸಾಂಕ್ರಾಮಿಕ ಮುಗಿದ ನಂತರ ಹೊಸ ಜಾಗತಿಕ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020 ಗ್ರ್ಯಾಂಡ್ ಫಿನಾಲೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ವೈರಸ್ ಕಾಲದಲ್ಲಿ ಹ್ಯಾಕಥಾನ್ ನಡೆಸುವುದು ದೊಡ್ಡ ಸವಾಲಾಗಿತ್ತು. ತೀವ್ರ ಸವಾಲುಗಳ ನಡುವೆಯೂ ಇದು ನಡೆಯುತ್ತಿರುವುದು ಆಶ್ಚರ್ಯಕರವಾಗಿದೆ. ಈ ಸಂದರ್ಭಕ್ಕೆ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ ಸಂಘಟಕರನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.

ಫೈನಲ್‌ನಲ್ಲಿ ಮಳೆ ಮುನ್ಸೂಚನೆ ಮಾದರಿಯ ಪರಿಕಲ್ಪನೆಯನ್ನು ಮಂಡಿಸಿದ ವಿದ್ಯಾರ್ಥಿಯನ್ನು ಶ್ಲಾಘಿಸಿದ ಅವರು, ಈ ಆವಿಷ್ಕಾರ ಯಶಸ್ವಿಯಾದರೆ, ದೇಶದಲ್ಲಿನ ರೈತರಿಗೆ ಅಪಾರ ಸಹಾಯವಾಗುತ್ತದೆ ಎಂದು ಹೇಳಿದರು.

ಈ ವರ್ಷ ಸುಮಾರು 10,000 ವಿದ್ಯಾರ್ಥಿಗಳು ಹ್ಯಾಕಥಾನ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020 (ಸಾಫ್ಟ್‌ವೇರ್) ಗ್ರ್ಯಾಂಡ್ ಫಿನಾಲೆ ಆಗಸ್ಟ್ 1 ರಿಂದ 3 ರವರೆಗೆ ನಡೆಯಲಿದೆ.

“ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಆದರ್ಶ ಮತ್ತು ಹೊಸತನವನ್ನು ನೀಡುವ ರೋಮಾಂಚಕ ವೇದಿಕೆಯಾಗಿ ಹೊರಹೊಮ್ಮಿದೆ. ಸ್ವಾಭಾವಿಕವಾಗಿ, ಈ ಸಮಯದಲ್ಲಿ ನಮ್ಮ ಯುವಕರು ಕೊರೊನಾದ ನಂತರದ ಪ್ರಪಂಚವನ್ನು ತಮ್ಮ ಆವಿಷ್ಕಾರಗಳಲ್ಲಿ ಕೇಂದ್ರೀಕರಿಸುತ್ತಾರೆ ಎಂದು ಹೇಳಿದ್ದಾರೆ.

ಹ್ಯಾಕಥಾನ್ ಅನ್ನು ಮಾನವ ಸಂಪನ್ಮೂಲ ಸಚಿವಾಲಯದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಆಯೋಜಿಸುತ್ತಿದೆ.

ಅಂತಿಮ ಪಂದ್ಯದ ಆರಂಭದಲ್ಲಿ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ವಿಜೇತರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನವಾಗಿ ನೀಡಲಾಗುವುದು ಎಂದು ಘೋಷಿಸಿದರು.

ದೈನಂದಿನ ಜೀವನದಲ್ಲಿ ಜನರು ಎದುರಿಸುತ್ತಿರುವ ಕೆಲವು ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಒದಗಿಸುವ ಹ್ಯಾಕಥಾನ್ ರಾಷ್ಟ್ರವ್ಯಾಪಿ ಕಾರ್ಯಕ್ರಮವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಉನ್ನತ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳಲ್ಲಿ ಸಮಸ್ಯೆ-ಪರಿಹರಿಸುವ ಮನೋಭಾವವನ್ನು ನಿರ್ಮಿಸುವ ಗುರಿಯನ್ನು ಇದು ಹೊಂದಿದೆ ಎಂದಿದ್ದಾರೆ.


ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ರಿಯಾ ಚಕ್ರವರ್ತಿಯನ್ನು ಪತ್ತೆ ಮಾಡಲಾಗುತ್ತಿಲ್ಲವೆಂದ ಬಿಹಾರ ಪೊಲೀಸರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪತಂಜಲಿಯ ತಪ್ಪು ದಾರಿಗೆಳೆಯುವ ಜಾಹೀರಾತು: ಸಾರ್ವಜನಿಕ ಕ್ಷಮೆಯಾಚನೆಗೆ ಸಿದ್ದ ಎಂದ ಬಾಬಾ ರಾಮ್‌ದೇವ್, ಬಾಲಕೃಷ್ಣ

0
ಇಂದು (ಏ.16) ಸುಪ್ರೀಂ ಕೋರ್ಟ್‌ಗೆ ಖುದ್ದಾಗಿ ಹಾಜರಾದ ಪತಂಜಲಿ ಆಯುರ್ವೇದ ಲಿಮಿಟೆಡ್‌ನ ಸಹ-ಸಂಸ್ಥಾಪಕ ಬಾಬಾ ರಾಮ್‌ದೇವ್, ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಮತ್ತು ಅಲೋಪತಿ ಔಷಧಿಗಳ ವಿರುದ್ಧ...