Homeಮುಖಪುಟಚುನಾವಣೆ ಬಂದಿದೆ, ಮುಂದಕ್ಕೆ ಇಡಿ, ಸಿಬಿಐ ಬರುತ್ತದೆ: ಐಟಿ ದಾಳಿ ಬಗ್ಗೆ ಅಖಿಲೇಶ್‌ ಯಾದವ್‌

ಚುನಾವಣೆ ಬಂದಿದೆ, ಮುಂದಕ್ಕೆ ಇಡಿ, ಸಿಬಿಐ ಬರುತ್ತದೆ: ಐಟಿ ದಾಳಿ ಬಗ್ಗೆ ಅಖಿಲೇಶ್‌ ಯಾದವ್‌

- Advertisement -
- Advertisement -

ಇಂದು ಬೆಳಗ್ಗೆ ಸಮಾಜವಾದಿ ಪಕ್ಷದ ಉನ್ನತ ನಾಯಕರು ಮತ್ತು ಅವರ ಆಪ್ತ ಸಹಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದ ನಂತರ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಚುನಾವಣೆ ಸಮೀಪಿಸುತ್ತಿದ್ದಂತೆ ಇದೆಲ್ಲ ಆಗುತ್ತಿದೆ ಎಂದು ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಈಗ ಆದಾಯ ತೆರಿಗೆ ಇಲಾಖೆ ಬಂದಿದ್ದಾರೆ. ಮುಂದಕ್ಕೆ ಜಾರಿ ನಿರ್ದೇಶನಾಲಯ, ಸಿಬಿಐ ಬರುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮತಾಂತರ ನಿಷೇಧ ಕಾಯಿದೆ ಹಿಂದೆ ದೇಶದ ಕೋಮುಸೌಹಾರ್ದತೆ ಹಾಳುಗೆಡವುವ ದುರುದ್ದೇಶವಿದೆ- ಸಿದ್ದರಾಮಯ್ಯ

“ಇಷ್ಟೆಲ್ಲಾ ಆದರೂ ಸೈಕಲ್ (ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆ) ನಿಲ್ಲುವುದಿಲ್ಲ. ಅದರ ಚಲನೆಯು ನಿಲ್ಲುವುದಿಲ್ಲ…ಬಿಜೆಪಿಯನ್ನು ಯುಪಿಯಿಂದ ನಿರ್ನಾಮ ಮಾಡುತ್ತೇವೆ. ರಾಜ್ಯದ ಜನರು ಮೂರ್ಖರಲ್ಲ. ಒಂದು ತಿಂಗಳ ಹಿಂದೆ ರಾಜೀವ್ ರೈ ಮೇಲೆ ದಾಳಿ ನಡೆದಿಲ್ಲ ಯಾಕೆ? ಈಗ ಯಾಕೆ ನಡೆಯುತ್ತಿದೆ? ಚುನಾವಣೆ ಹತ್ತಿರವಿರುವ ಕಾರಣವೇ?” ಎಂದು ಅಖಿಲೇಶ್‌ ಯಾದವ್‌ ಪ್ರಶ್ನಿಸಿದ್ದಾರೆ.

“ಬಿಜೆಪಿಯು ಕಾಂಗ್ರೆಸ್ ಹಾದಿಯಲ್ಲಿದೆ. ಈ ಹಿಂದೆ ಕಾಂಗ್ರೆಸ್ ಕೂಡಾ ಯಾರನ್ನಾದರೂ ಹೆದರಿಸಲು ಬಯಸಿದರೆ ಅವರು ಕೂಡಾ ಇಂತಹ ತಂತ್ರಗಳನ್ನು ಬಳಸಿದ್ದರು. ಈಗ ಬಿಜೆಪಿ ಕೂಡಾ ಕಾಂಗ್ರೆಸ್‌‌ನ ಹಾದಿಯಲ್ಲಿ ಸಾಗುತ್ತಿದೆ” ಎಂದು ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

“ಈ ಎಲ್ಲಾ ದಾಳಿಯಗಳು ಚುನಾವಣೆ ಮುಂಚೆ ಮಾತ್ರ ಯಾಕೆ ಮಾಡಲಾಗುತ್ತಿದೆ?. ಚುನಾವಣಾ ಯುದ್ದದಲ್ಲಿ ತೆರಿಗೆ ಇಲಾಖೆ ಕೂಡಾ ಸೇರಿಕೊಂಡಂತೆ ತೋರುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.

ಇಂದು ಬೆಳಗ್ಗೆ ಸಮಾಜವಾದಿ ಪಕ್ಷದ ನಾಯಕ ಮತ್ತು ವಕ್ತಾರ ರಾಜೀವ್ ರೈ, ಅಖಿಲೇಶ್ ಯಾದವ್ ಅವರ ಆಪ್ತ ಕಾರ್ಯದರ್ಶಿ ಜೈನೇಂದ್ರ ಯಾದವ್ ಮತ್ತು ಪಕ್ಷದ ಮತ್ತೋರ್ವ ನಾಯಕ ಮನೋಜ್ ಯಾದವ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ಇದನ್ನೂ ಓದಿ:ಲಖಿಂಪುರ್‌ ಕೇರಿ ರೈತರ ಹತ್ಯಾಕಾಂಡ: ಸಚಿವರನ್ನು ವಜಾಗೊಳಿಸುವಂತೆ ಸಂಸತ್ತಿನಲ್ಲಿ ವಿಪಕ್ಷಗಳ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆ ಸಂಚು: ವಾಷಿಂಗ್ಟನ್ ಪೋಸ್ಟ್ ವರದಿಗೆ ಅಮೆರಿಕ ಪ್ರತಿಕ್ರಿಯೆ

0
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್‌ ಹತ್ಯೆಯ ಸಂಚಿಗೆ ಸಂಬಂಧಿಸಿದ 'ದಿ ವಾಷಿಂಗ್ಟನ್ ಪೋಸ್ಟ್ ವರದಿ' ಬೆನ್ನಲ್ಲಿ ಆರೋಪಗಳ ಬಗ್ಗೆ ತನಿಖೆಗೆ ಭಾರತ ಸರ್ಕಾರದೊಂದಿಗೆ ನಿಯಮಿತವಾಗಿ ಕೆಲಸ ಮಾಡುತ್ತಿದೆ ಎಂದು ಅಮೆರಿಕ...