Homeಮುಖಪುಟಅದೃಷ್ಟದ ಆಟದಲ್ಲಿ ಪಾಕ್ ಮಣಿಸಿದ ಇಂಗ್ಲೆಂಡ್ ಗೆ ಟಿ20 ವಿಶ್ವಕಪ್ ಕಿರೀಟ

ಅದೃಷ್ಟದ ಆಟದಲ್ಲಿ ಪಾಕ್ ಮಣಿಸಿದ ಇಂಗ್ಲೆಂಡ್ ಗೆ ಟಿ20 ವಿಶ್ವಕಪ್ ಕಿರೀಟ

- Advertisement -
- Advertisement -

ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಇಂಗ್ಲೆಂಡ್ ಪಾಕ್ ನಡುವಿನ ಟಿ20 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿದ ಇಂಗ್ಲೆಂಡ್‌ ಮತ್ತೊಮ್ಮೆ ಚಾಂಪಿಯನ್ ಆಯಿತು.

2010 ರಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಜಯಿಸಿದ್ದ ಇಂಗ್ಲೆಂಡ್ ಇಂದಿನ ಗೆಲುವಿನ ಮೂಲಕ ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿತು. ಆಲ್ ರೌಂಡ್ ಆಟ ಪ್ರದರ್ಶಿಸಿದ ಬೆನ್ ಸ್ಟೋಕ್ಸ್ ಕಪ್ ಗೆಲುವಿನ ರೂವಾರಿ ಎನಿಸಿದರು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ನಿರೀಕ್ಷೆಯನ್ನು ಬೌಲರ್‌ಗಳು ಹುಸಿಗೊಳಿಸಲಿಲ್ಲ. ಸ್ಯಾಮ್ ಕರಣ್ (3 ವಿಕೆಟ್) ಮತ್ತು ಆದಿಲ್ ರಶೀದ್ (2 ವಿಕೆಟ್) ಶಿಸ್ತುಬದ್ಧ ದಾಳಿಯ ಮೂಲಕ ಪಾಕಿಸ್ತಾನವನ್ನು 137 ರನ್ ಗಳಿಗೆ ಕಟ್ಟಿ ಹಾಕಿದರು. 138 ರನ್ ಗೆಲುವಿನ ಗುರಿಪಡೆದ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು ತಲುಪಿ ಸಂಭ್ರಮ ಆಚರಿಸಿತು.

49 ಎಸೆತಗಳಲ್ಲಿ 51 ರನ್ ಗಳಿಸಿದ ಬೆನ್ ಸ್ಟೋಕ್ಸ್ ಗಟ್ಟಿಯಾಗಿ ನಿಂತು ಇಂಗ್ಲೆಂಡ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಬೌಲಿಂಗ್‌ ನಲ್ಲಿ 1 ವಿಕೆಟ್ ಸಹ ಪಡೆದರು.

ಪಾಕ್ ತಂಡದ ಶಾಹೀನ್ ಅಫ್ರಿದಿ ಬಿಗುವಿನ ದಾಳಿ ನಡೆಸಿ ಒಂದು ವಿಕೆಟ್ ಪಡೆದಿದ್ದರು. ಆದರೆ ಗಾಯಗೊಂಡ ಕಾರಣ ಕೇವಲ ಎರಡು ಓವರ್ ಅಷ್ಟೇ ಬೌಲಿಂಗ್ ಮಾಡಲು ಸಾಧ್ಯವಾಯಿತು. ನಂತರ ಗಾಯಗೊಂಡ ಮೈದಾನದಿಂದ ಹೊರನಡೆಯಬೇಕಾಯಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...