Homeಕರ್ನಾಟಕಈಶ್ವರಪ್ಪ 'ಗುಂಡಿಕ್ಕಿ ಕೊಲ್ಲಿ' ಹೇಳಿಕೆ: ಗೋಡ್ಸೆ ಸಂತತಿಯವರ ಭಯೋತ್ಪಾದಕ ಮನಸ್ಥಿತಿ ಅನಾವರಣ ಎಂದ ಕಾಂಗ್ರೆಸ್

ಈಶ್ವರಪ್ಪ ‘ಗುಂಡಿಕ್ಕಿ ಕೊಲ್ಲಿ’ ಹೇಳಿಕೆ: ಗೋಡ್ಸೆ ಸಂತತಿಯವರ ಭಯೋತ್ಪಾದಕ ಮನಸ್ಥಿತಿ ಅನಾವರಣ ಎಂದ ಕಾಂಗ್ರೆಸ್

- Advertisement -
- Advertisement -

“ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ” ಎಂದು ಹೇಳಿಕೆ ಕೊಟ್ಟಿರುವ ಬಿಜೆಪಿ ನಾಯಕ ಕೆ.ಎಸ್‌ ಈಶ್ವರಪ್ಪ ವಿರುದ್ದ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಕಾಂಗ್ರೆಸ್‌ “ಮಹಾತ್ಮ ಗಾಂಧಿಯವರಿಗೆ ಗುಂಡಿಕ್ಕಿದ ಗೋಡ್ಸೆ ಸಂತತಿಯವರಾದ ಕರ್ನಾಟಕ ಬಿಜೆಪಿ ನಾಯಕರ ಭಯೋತ್ಪಾದಕ ಮನಸ್ಥಿತಿ ಅನಾವರಣವಾಗಿದೆ. ಸಂಸದರಾದ ಡಿ. ಕೆ ಸುರೇಶ್ ಹಾಗೂ ಶಾಸಕರಾದ ವಿನಯ್ ಕುಲಕರ್ಣಿಯವರನ್ನು ಗುಂಡಿಕ್ಕಿ ಕೊಲ್ಲಬೇಕು ಎನ್ನುವ ಮೂಲಕ ಬಿಜೆಪಿಯ ಕೆ.ಎಸ್ ಈಶ್ವರಪ್ಪ ಭಯೋತ್ಪಾದನೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ್ದಾರೆ. ಈ ‘ಗುಂಡು’ ಹಾಕುವ ವ್ಯಕ್ತಿಯ ಮೇಲೆ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಗೃಹ ಸಚಿವರಲ್ಲಿ ಮನವಿ ಮಾಡುತ್ತೇವೆ” ಎಂದಿದೆ.

ದಾವಣಗೆರೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಗುರುವಾರ ಮಾತನಾಡಿದ್ದ ಈಶ್ವರಪ್ಪ, “ಡಿ.ಕೆ ಸುರೇಶ್ ಮತ್ತು ವಿನಯ್ ಕುಲಕರ್ಣಿ ದೇಶ ದ್ರೋಹಿಗಳು. ಇವರಂತೆ ದೇಶ ವಿಭಜನೆಯ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಲು ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಆಗ್ರಹಿಸುತ್ತೇನೆ” ಎಂದಿದ್ದರು.

ಫೆ.1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಬಜೆಟ್‌ ಮಂಡಿಸಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಸಂಸದ ಡಿ.ಕೆ ಸುರೇಶ್, “ಅನುದಾನ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗ್ತಿದೆ. ಹೀಗೆ ಆದರೆ, ನಾವು ಪ್ರತ್ಯೇಕ ರಾಷ್ಟ್ರವನ್ನೂ ಕೇಳಬೇಕಾಗುತ್ತದೆ” ಎಂದಿದ್ದರು. ಈ

ಈ ಹೇಳಿಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಡಿ.ಕೆ ಸುರೇಶ್ ವಿರುದ್ದ ವಿಕಾಸ್ ಪುತ್ತೂರು ಎಂಬವರು ದೂರು ದಾಖಲಿಸಿದ್ದಾರೆ. ಫೆ.7ರಂದು ದೂರಿನ‌‌ ವಿಚಾರಣೆಯನ್ನು ಮಂಗಳೂರು ಕೋರ್ಟ್ ಕೈಗೆತ್ತಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ದೂರುದಾರ ವಿಕಾಸ್ ಪುತ್ತೂರು ಪರ ವಕೀಲ ಮೋಹನ್ ರಾಜ್ ಕೆ.ಆರ್ ವಾದ ಮಂಡಿಸಿದ್ದಾರೆ. ಎಫ್ಐಆರ್ ದಾಖಲಿಸಿ ಡಿಕೆ ಸುರೇಶ್ ವಿರುದ್ದ ತನಿಖೆ‌ ನಡೆಸಲು ನಿರ್ದೇಶಿಸಲು ಮನವಿ ಮಾಡಿದ್ದಾರೆ. ದೂರು ಅರ್ಜಿ ಸ್ವೀಕರಿಸಿದ ಮಂಗಳೂರಿನ 2ನೇ ಜೆಎಂಎಫ್‌ಸಿ ನ್ಯಾಯಾಲಯ ಫೆ.12ಕ್ಕೆ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ : ‘ನಿಮಗೆ ನಾಲಿಗೆಗಳೆಷ್ಟು..?’; ‘ದೆಹಲಿ ಚಲೋ’ ಟೀಕಿಸಿದ ಬಿಜೆಪಿಗರ ವಿರುದ್ಧ ಸಿಎಂ ಕಿಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿವಾಹವಾದ ಕಾರಣಕ್ಕೆ ಸೇನಾ ಮಹಿಳಾ ಅಧಿಕಾರಿಯ ವಜಾ; ‘ಲಿಂಗ ತಾರತಮ್ಯ’ ಎಂದ ಸುಪ್ರೀಂಕೋರ್ಟ್‌

0
ವಿವಾಹವಾದ ಕಾರಣಕ್ಕೆ ಮಿಲಿಟರಿ ನರ್ಸಿಂಗ್ ಸೇವೆಯಲ್ಲಿ ಖಾಯಂ ನಿಯೋಜಿತ ಅಧಿಕಾರಿಯನ್ನು ವಜಾ ಮಾಡಿರುವುದು ಸ್ವೇಚ್ಛೆಯ ಹಾಗೂ ಸೂಕ್ಷ್ಮತೆ ಇಲ್ಲದ ಲಿಂಗ ತಾರತಮ್ಯ ಹಾಗೂ ಅಸಮಾನತೆಯನ್ನು ಬಿಂಬಿಸುತ್ತದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗ‌ಳಾದ ಸಂಜೀವ್ ಖನ್ನಾ...