Homeಮುಖಪುಟಅನಿಷ್ಟ ಸತಿ ಪದ್ದತಿ ಇನ್ನೂ ಜೀವಂತ: ಸತಿ ಹಾರಬೇಕೆಂಬ ಒತ್ತಡಕ್ಕೆ ಬೇಸೆತ್ತು ಇಂಜಿನಿಯರ್ ಮಹಿಳೆ ಆತ್ಮಹತ್ಯೆ

ಅನಿಷ್ಟ ಸತಿ ಪದ್ದತಿ ಇನ್ನೂ ಜೀವಂತ: ಸತಿ ಹಾರಬೇಕೆಂಬ ಒತ್ತಡಕ್ಕೆ ಬೇಸೆತ್ತು ಇಂಜಿನಿಯರ್ ಮಹಿಳೆ ಆತ್ಮಹತ್ಯೆ

- Advertisement -
- Advertisement -

ಸ್ವಾತಂತ್ರ್ಯ ಪೂರ್ವದಲ್ಲಿಯೇ ಅನಿಷ್ಟ ಪದ್ದತಿಯೆಂಬ ಕಾರಣಕ್ಕೆ ನಿಷೇಧಕ್ಕೊಳಗಾಗಿದ್ದ ಸತಿ ಸಹಗಮನ ಪದ್ದತಿ ಇನ್ನೂ ಜೀವಂತವಿರುವುದು ಬೆಳಕಿಗೆ ಬಂದಿದೆ. ಅತ್ತೆಯಂದಿರು ಸತಿಯಾಗಲು ಒತ್ತಡ ಹೇರಿದ್ದರಿಂದ ನೊಂದ 28 ವರ್ಷ ವಯಸ್ಸಿನ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಮಹಿಳೆಯೊಬ್ಬರು ಸಬರಮತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಗುಜರಾತ್‌ನಲ್ಲಿ ವರದಿಯಾಗಿದೆ.

ಈ ಘಟನೆಯಿಂದಾಗಿ ಗಂಡ ಮೃತಪಟ್ಟಾಗ ಆ ಶವದ ಚಿತೆಗೆ ಆತನ ಪತ್ನಿಯೂ ಹಾರಿ ಜೀವ ತೆರಬೇಕಾದ ಪುರಾತನ, ಕಾನೂನುಬಾಹಿರ ಕ್ರಿಯೆಯಾದ ಸತಿ ಸಹಗಮನ ಪದ್ದತಿ ಇನ್ನೂ ಜೀವಂತವಿರುವುದು ನಮ್ಮ ದೇಶದ ದೊಡ್ಡ ದುರಂತವಾಗಿದೆ.

ಘಟನೆಯ ವಿವರ

ರಾಜಸ್ಥಾನದ ಭಿಲ್ವಾಡ ಮೂಲದ ಸಂಗೀತಾ ಲಖ್ರಾ ಅವರು ಕಳೆದ ವರ್ಷ ಫೆಬ್ರವರಿ 10 ರಂದು ತನ್ನ ಪತಿಯ ಸಾವಿನ ನಂತರ ತನ್ನ ಅತ್ತೆಯಂದಿರು ಸತಿಯಾಗುವಂತೆ ತನಗೆ ನೀಡಿದ ಕಿರುಕುಳದ ವಿವರಗಳೊಂದಿಗೆ ಡೆತ್ ನೋಟ್ ಬರೆದಿದ್ದಾರೆ. ಅದರ ಆಧಾರದ ಮೇಲೆ ಆಕೆಯ ತಂದೆ ಸೂರತ್‌ನಲ್ಲಿ ದಿನಸಿ ವ್ಯಾಪಾರಿಯಾಗಿರುವ ರಮೇಶ್ ಲಖ್ರಾರವರು ಸಬರಮತಿ ರಿವರ್‌ಫ್ರಂಟ್ (ಪಶ್ಚಿಮ) ಪೊಲೀಸರಿಗೆ ಆಕೆಯ ಅತ್ತೆ ಮತ್ತು ಇತರ ನಾಲ್ವರ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

ದೂರಿನ ಪ್ರಕಾರ ತನ್ನ ಮಗಳು ಒಂದು ವರ್ಷದಿಂದ ಖಿನ್ನತೆಯಿಂದ ಬಳಲುತ್ತಿದ್ದಳು. ಮೇ 10 ರಂದು ಸಂಗೀತಾ ನಾಪತ್ತೆಯಾಗಿದ್ದು, ಮೇ 11 ರ ಬೆಳಿಗ್ಗೆ ಆಕೆಯ ದೇಹವನ್ನು ಸಬರಮತಿಯಿಂದ ಹೊರತೆಗೆಯಲಾಯಿತು. ಆಕೆ ತನ್ನ ಸಹೋದರ ನಿಮೇಶ್‌ಗೆ ವಾಟ್ಸಾಪ್‌ನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಕ್ಕೆ ಕ್ಷಮಿಸಿ ಎಂಬ ಪಠ್ಯ ಮತ್ತು ಆಡಿಯೊ ಸಂದೇಶಗಳನ್ನು ಸಹ ಕಳುಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದ ಸಂಗೀತಾ, ಪತಿಯ ಮರಣದ ನಂತರ ಸೂರತ್‌ನಲ್ಲಿರುವ ತನ್ನ ತಾಯಿಯ ಮನೆಗೆ ತೆರಳಿದ್ದರು. ಒಂದು ತಿಂಗಳಿನಿಂದ ಮಾಲ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು ಎನ್ನಲಾಗಿದೆ.

“ಸಂಗೀತಾ ಬರೆದ ಆತ್ಮಹತ್ಯೆ ಪತ್ರದಲ್ಲಿ ತನ್ನ ಅತ್ತೆ ಕೈಲಾಶ್ ದೇವಿ ಲಖರಾ ಮತ್ತು ಇತರ ನಾಲ್ವರು ಅತ್ತೆಯ ಕುಟುಂಬದ ಸದಸ್ಯರು ಸತಿಯಾಗುವಂತೆ ಕೇಳಿಕೊಂಡು ಕಿರುಕುಳ ನೀಡಿದ್ದಾರೆ. ಯಾರಾದರೂ ಒಳ್ಳೆಯ ಸ್ವಭಾವದ ಮಹಿಳೆಯಾಗಿದ್ದರೆ ಅವಳು ಸತಿಯಾಗಬೇಕು ಎಂದು ಕುಟುಂಬ ಸದಸ್ಯರು ಒತ್ತಡ ಹೇರಿದ್ದರು ಎಂದು ಎಫ್‌ಐಆರ್ ನಲ್ಲಿ ಬರೆಯಲಾಗಿದೆ.

ರಾಜಸ್ಥಾನದ ರಾಜಸಮಂದ್‌ನ ಡೆವಲಪರ್ ಆಗಿದ್ದ ಸಂಗೀತಾ ಅವರ ಪತಿ ವಿಷ್ಣು ಕುಮಾರ್ ಅವರು ಮೇ 10, 2022 ರಂದು ಅಪಘಾತದಲ್ಲಿ ನಿಧನರಾದರು. ದುರಂತದ ನಂತರ ಸಂಗೀತಾ ತನ್ನ ಅತ್ತೆಯೊಂದಿಗೆ ವಾಸಿಸುತ್ತಿದ್ದರು. ಆದರೆ ತನ್ನ ಗಂಡನ ಸಾವಿಗೆ ಅಪಹಾಸ್ಯ ಮಾಡಿದ್ದರಿಂದ ಬೇಸತ್ತು ಸೂರತ್‌ನಲ್ಲಿರುವ ತನ್ನ ಹೆತ್ತವರ ಮನೆಗೆ ತೆರಳಿದ್ದರು. ಅತ್ತೆಯ ನಿರಂತರ ಕಿರುಕುಳದಿಂದಾಗಿ ಆಕೆ ಸುಮಾರು ಒಂದು ವರ್ಷದಿಂದ ಖಿನ್ನತೆಗೆ ಒಳಗಾಗಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ.

1987ರ ಸತಿ ಪದ್ಧತಿ ಆಯೋಗದ (ತಡೆಗಟ್ಟುವಿಕೆ) ಕಾಯಿದೆಯೊಂದಿಗೆ 1988 ರಲ್ಲಿ ದೀರ್ಘಕಾಲದಿಂದ ರದ್ದುಗೊಂಡ ಸತಿ ಪದ್ಧತಿಯ ವಿರುದ್ಧದ ಕಾನೂನನ್ನು ಕಠಿಣಗೊಳಿಸಲಾಗಿದೆ. ಆದರೆ ಉತ್ತರ ಭಾರತದಲ್ಲಿ ಈ ಅನಿಷ್ಠ ಪದ್ದತಿ ಆಚರಣೆಯಲ್ಲಿ ಸ್ವಾತಂತ್ರ್ಯ ನಂತರವೂ 40 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ಶಾಂತಿ ಕದಡಿದರೆ RSS ಅಥವಾ ಇನ್ನಾವುದೇ ಸಂಘಟನೆಯಾದರೂ ನಿಷೇಧ: ಪ್ರಿಯಾಂಕ್ ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...