HomeUncategorizedFact Check: ಪಾಕಿಸ್ತಾನಕ್ಕೆ 5 ಸಾವಿರ ಕೋಟಿ ಸಾಲ ನೀಡುವುದಾಗಿ ರಾಹುಲ್ ಗಾಂಧಿ ಹೇಳಿದ್ರಾ?

Fact Check: ಪಾಕಿಸ್ತಾನಕ್ಕೆ 5 ಸಾವಿರ ಕೋಟಿ ಸಾಲ ನೀಡುವುದಾಗಿ ರಾಹುಲ್ ಗಾಂಧಿ ಹೇಳಿದ್ರಾ?

- Advertisement -
- Advertisement -

“ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದರೆ ಮುಂದಿನ 50 ವರ್ಷಗಳ ಕಾಲ ಪಾಕಿಸ್ತಾನಕ್ಕೆ ₹5,000 ಕೋಟಿ ಬಡ್ಡಿ ರಹಿತ ಸಾಲ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದೆ.

‘stubborn_mad’ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಾಹುಲ್ ಗಾಂಧಿಯವರ ಫೋಟೋ ಮೇಲೆ ಮೇಲಿನಂತೆ ಬರೆದು ಪೋಸ್ಟ್‌ ಮಾಡಲಾಗಿದೆ. ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದಾರೆ.

ಹಿಂದಿ ಸುದ್ದಿವಾಹಿನಿ ಎಬಿಪಿ ನ್ಯೂಸ್ ಹೆಸರಿನಲ್ಲೂ ರಾಹುಲ್ ಗಾಂಧಿ ಕುರಿತು ಸುದ್ದಿ ಹಬ್ಬಿಸಲಾಗಿದೆ. ಹಲವರು ರಾಹುಲ್ ಗಾಂಧಿಯ ಹೇಳಿಕೆಯನ್ನು ಎಬಿಪಿ ನ್ಯೂಸ್ ಪ್ರಸಾರ ಮಾಡಿದೆ ಎಂದು ಬಿಂಬಿಸುವ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.

Mission Modi 2024 में अपने 100 मित्रों को जोड़ें  ಎಂಬ 5 ಲಕ್ಷ 65 ಸಾವಿರ ಜನರು ಸದಸ್ಯರಿರುವ ಫೇಸ್‌ಬುಕ್‌ ಗ್ರೂಪ್‌ನಲ್ಲಿ ‘Vipin Motwani’ ಎಂಬ ಸದಸ್ಯ 28 ನವೆಂಬರ್ 2018ರಂದು ಕೂಡ ಎಬಿಪಿ ನ್ಯೂಸ್ ಹೆಸರಿನಲ್ಲಿ ಈ ಸುದ್ದಿಯನ್ನು ಪೋಸ್ಟ್‌ ಮಾಡಿದ್ದ.

ಫ್ಯಾಕ್ಟ್‌ಚೆಕ್ : ರಾಹುಲ್ ಗಾಂಧಿಯ ಹೆಸರಿನಲ್ಲಿ ಹರಿದಾಡುತ್ತಿರುವ ಸುದ್ದಿಯ ಕುರಿತು ಸತ್ಯಾಸತ್ಯತೆ ಪರಿಶೀಲನೆ ನಡೆಸಲು ನಾನುಗೌರಿ.ಕಾಂ ಗೂಗಲ್‌ನಲ್ಲಿ ಕೆಲವು ಕೀ ವರ್ಡ್‌ ಬಳಸಿ ಹುಡುಕಾಡಿದೆ. ಈ ವೇಳೆ ರಾಹುಲ್ ಗಾಂಧಿ ಪಾಕಿಸ್ತಾನಕ್ಕೆ 5 ಸಾವಿರ ಕೋಟಿ ರೂಪಾಯಿ ಸಾಲ ಕೊಡುವುದಾಗಿ ಹೇಳಿರುವ ಯಾವುದೇ ವಿಡಿಯೋ, ಆಡಿಯೋ ಮತ್ತು ಸುದ್ದಿ ನಮಗೆ ದೊರೆತಿಲ್ಲ.

ಅಲ್ಲದೆ ಎಬಿಪಿ ನ್ಯೂಸ್ ಕೂಡ ತನ್ನ ಹೆಸರು ಬಳಸಿ ಸುಳ್ಳು ಸುದ್ದಿ ಹಬ್ಬಿರುವ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದೆ. “ರಾಹುಲ್ ಕುರಿತು ನಮ್ಮ ಹೆಸರಿನಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ನಾವು ರಾಹುಲ್ ಗಾಂಧಿ ಆ ರೀತಿ ಹೇಳಿರುವುದಾಗಿ ಯಾವುದೇ ಸುದ್ದಿ ಪ್ರಕಟಿಸಿಲ್ಲ ಎಂದು ಎಬಿಪಿ ಸ್ಪಷ್ಟನೆ ನೀಡಿದೆ.

ಯಾವುದೇ ಮುಖ್ಯವಾಹಿನಿ ಮಾಧ್ಯಮಗಳು ಕೂಡ ರಾಹುಲ್ ಗಾಂಧಿ ಆ ರೀತಿ ಹೇಳಿರುವುದಾಗಿ ಎಲ್ಲೂ ಸುದ್ದಿ ಮಾಡಿಲ್ಲ.

ನಾವು ನಡೆಸಿದ ಪರಿಶೀಲನೆಯಲ್ಲಿ “ಪಾಕಿಸ್ತಾನಕ್ಕೆ ₹5000ಕೋಟಿ ಬಡ್ಡಿ ರಹಿತ ಸಾಲ ನೀಡುವುದಾಗಿ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ” ಎಂಬ ಸುದ್ದಿ ಸುಳ್ಳು ಎಂಬುವುದು ಖಚಿತವಾಗಿದೆ.

ಇದನ್ನೂ ಓದಿ: Fact Check: ಮುಸ್ಲಿಮರು ಸಿಖ್‌ ವೇಷ ಧರಿಸಿ ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...