HomeದಿಟನಾಗರFact Check: ಮಸೀದಿ ಮುಂದೆ ಮಹಿಳೆಯರಿಂದ ಅಶ್ಲೀಲ ಕೃತ್ಯವೆಂದು ಸುಳ್ಳು ಸುದ್ದಿ ಹಂಚಿಕೆ

Fact Check: ಮಸೀದಿ ಮುಂದೆ ಮಹಿಳೆಯರಿಂದ ಅಶ್ಲೀಲ ಕೃತ್ಯವೆಂದು ಸುಳ್ಳು ಸುದ್ದಿ ಹಂಚಿಕೆ

- Advertisement -
- Advertisement -

ಮಸೀದಿ ಮುಂದೆ ಇಬ್ಬರು ಮಹಿಳೆಯರು ಅರೆ ನಗ್ನಾವಸ್ತೆಯಲ್ಲಿ ಚುಂಬಿಸಿದ್ದಾರೆ ಎನ್ನಲಾದ ಪೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದ್ದು, ಅದರ ಜೊತೆಗೆ ಮುಸ್ಲಿಮರ ರಂಝಾನ್ ತಿಂಗಳ ಕುರಿತು ಆಕ್ಷೇಪಾರ್ಹ ಬರಹ ಬರೆಯಲಾಗಿದೆ.

ಹಲವಾರು ಬಲಪಂಥೀಯರ ಎಕ್ಸ್‌ ಖಾತೆಗಳಲ್ಲಿ ಫೋಟೋ ಹಂಚಿಕೊಳ್ಳಲಾಗಿದೆ. ಮುಖ್ಯವಾಗಿ 53 ಸಾವಿರ ಫಾಲೋವರ್ಸ್ ಇರುವ ‘ಸನಾತನಿ ಹಿಂದೂ ರಾಕೇಶ್ (ಮೋದಿ ಪರಿವಾರ) ಎಂಬ ಎಕ್ಸ್ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡಲಾಗಿದೆ.

ಫ್ಯಾಕ್ಟ್‌ ಚೆಕ್: ವೈರಲ್ ಫೋಟೋದ ಕುರಿತು ನಾನುಗೌರಿ. ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ. ಈ ವೇಳೆ ಅದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ನಿರ್ಮಿತ ಚಿತ್ರ, ನಿಜವಾದೂದ್ದಲ್ಲ ಎಂದು ಗೊತ್ತಾಗಿದೆ.

ಮೊದಲನೆಯದಾಗಿ ಫೋಟೋದಲ್ಲಿ ನೆಲದಲ್ಲಿ ಕುಳಿತಿರುವ ಮಹಿಳೆಯರಲ್ಲಿ ಮುಖದ ಯಾವುದೇ ರಚನೆ ಗೋಚರಿಸುತ್ತಿಲ್ಲ. ಸಾಮಾನ್ಯವಾಗಿ ಇದು ಎಐ ನಿರ್ಮಿತ ಚಿತ್ರಗಳಲ್ಲಿ ಉಂಟಾಗುತ್ತದೆ.

‘Hive Moderation’ಎಂಬ ಟೂಲ್ ಬಳಸಿ ನಾವು ಅದು ಎಐ ನಿರ್ಮಿತ ಪೋಟೋನಾ? ಎಂದು ಪರಿಶೀಲಿಸಿದ್ದೇವೆ. ಈ ವೇಳೆ ಅದು ಶೇ.80ರಷ್ಟು ಎಐ ಚಿತ್ರ ಎಂದಿದೆ. ಆದ್ದರಿಂದ ವೈರಲ್ ಫೋಟೋ ಎಐ ನಿರ್ಮಿತ ಎಂಬುವುದು ಖಚಿತ.

ಮೇಲೆ ನಾವು ಉಲ್ಲೇಖಿಸಿದ ಮೂಲಗಳನ್ನು ಹೊರತುಪಡಿಸಿ ಹೇಳುವುದಾದರೆ, ಇಸ್ಲಾಂ ಧರ್ಮದಲ್ಲಿ ಮಸೀದಿ ಮುಂದೆ ಮಹಿಳೆಯರು ಈ ರೀತಿಯ ಕೃತ್ಯದಲ್ಲಿ ತೊಡಗಿದ್ದರು ಎಂದರೆ ನಂಬಲಸಾಧ್ಯ ಎಂದು ಹಲವರು ವೈರಲ್‌ ಪೋಸ್ಟ್‌ನ ಕಾಮೆಂಟ್‌ನಲ್ಲೇ ತಿಳಿಸಿದ್ದಾರೆ. ಅಲ್ಲದೆ, ಈ ರೀತಿಯ ಯಾವುದೇ ಆಚರಣೆಯೂ ಇಸ್ಲಾಂನಲ್ಲಿ ಇಲ್ಲ. ಅದರಲ್ಲೂ ರಂಝಾನ್‌ನಲ್ಲಿ ಇಲ್ಲವೇ ಇಲ್ಲ. ಹಾಗಾಗಿ , ಇದು ಸುಳ್ಳು ಸುದ್ದಿಯಾಗಿದೆ.

ಇದನ್ನೂ ಓದಿ : Fact Check: ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದಂತೆ ಕೇಂದ್ರದಿಂದ ಕರ್ನಾಟಕಕ್ಕೆ ಬರ ಬೇಕಿರುವ ಎಲ್ಲಾ ಹಣ ಬಂದಿದೆಯಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಚಲೋ’ ಮೆರವಣಿಗೆಗೆ 100 ದಿನ; ಶಂಭು-ಖಾನೌರಿ ಗಡಿ ಬಿಂದುಗಳಲ್ಲಿ ಜಮಾಯಿಸಿದ ಸಾವಿರಾರು ಅನ್ನದಾತರು

0
ಬೆಳೆಗಳಿಗೆ ಎಂಎಸ್‌ಪಿ ಕಾನೂನು ಖಾತರಿಯೂ ಸೇರಿದಂತೆ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ನಡೆಯುತ್ತಿರುವ ಪ್ರತಿಭಟನೆಯು 100 ದಿನಗಳನ್ನು ಪೂರ್ಣಗೊಳಿಸುತ್ತಿದ್ದು, ಶಂಭು ಮತ್ತು ಖನೌರಿ ಗಡಿ ಬಿಂದುಗಳಲ್ಲಿ...