HomeದಿಟನಾಗರFact Check : ಮೈಸೂರಿನಲ್ಲಿ ಶತಮಾನಗಳ ಹಳೆಯ ನಂದಿ ವಿಗ್ರಹ ಪತ್ತೆ ಎಂದು ಹಳೆಯ ಫೊಟೋ...

Fact Check : ಮೈಸೂರಿನಲ್ಲಿ ಶತಮಾನಗಳ ಹಳೆಯ ನಂದಿ ವಿಗ್ರಹ ಪತ್ತೆ ಎಂದು ಹಳೆಯ ಫೊಟೋ ಹಂಚಿಕೆ

- Advertisement -
- Advertisement -

ಮೈಸೂರಿನಲ್ಲಿ ಸುಮಾರು 2,200 ವರ್ಷಗಳಷ್ಟು ಹಳೆಯ ನಂದಿ ವಿಗ್ರಹಗಳು ಪತ್ತೆಯಾಗಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳಲಾಗಿದೆ.

Frontalforce (@FrontalForce) ಎಂಬ ಎಕ್ಸ್ ಖಾತೆಯಲ್ಲಿ “ಕರ್ನಾಟಕದ ಮೈಸೂರು ಬಳಿ ಅಗೆಯುವಾಗ ಸುಮಾರು 2,200 ವರ್ಷಗಳಷ್ಟು ಹಳೆಯದಾದ ನಂದಿಯ ಪ್ರತಿಮೆ ಪತ್ತೆಯಾಗಿದೆ. ಜಗತ್ತಿನಲ್ಲಿ ಎಲ್ಲಿ ಅಗೆದರೂ ನಮ್ಮ ಕುರುಹುಗಳು ಸಿಗುತ್ತವೆ. ನಾವು ಸನಾತನ ಹಿಂದೂ ಧರ್ಮದವರು.” ಎಂದು ಬರೆದುಕೊಂದು ಮಣ್ಣಿನಲ್ಲಿ ಹೂತು ಹೋಗಿರುವ ನಂದಿಯ ಫೋಟೋ ಹಂಚಿಕೊಳ್ಳಲಾಗಿದೆ.

ಪೋಸ್ಟ್ ಲಿಂಕ್ ಇಲ್ಲಿದೆ 

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಫೋಟೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ, ನಾವು ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿಯಾಗಿದೆಯಾ? ಎಂದು ಗೂಗಲ್‌ನಲ್ಲಿ ಹುಡುಕಾಡಿದ್ದೇವೆ. ಈ ವೇಳೆ ಜುಲೈ 15, 2019ರಂದು ‘ದಿ ಹಿಂದೂ ವೆಬ್‌ಸೈಟ್‌ ‘Centuries-old Nandi statues unearthed near Mysuru’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ಸುದ್ದಿ ಲಭ್ಯವಾಗಿದೆ. ಈ ಸುದ್ದಿಯಲ್ಲಿ “ಮೈಸೂರಿನಿಂದ 20 ಕಿ.ಮೀ ದೂರದ ಅರಸಿನಕೆರೆ ಎಂಬಲ್ಲಿ ಕೆರೆಯ ತಳದಲ್ಲಿ ಮಣ್ಣಿನಲ್ಲಿ ಹೂತು ಹೋಗಿದ್ದ ನಂದಿಯ ವಿಗ್ರಹಗಳನ್ನು ಕೆರೆ ಬರಿದಾದಾಗ ಸ್ಥಳೀಯರು ಮೇಲೆತ್ತಿದ್ದಾರೆ” ಎಂದು ಹೇಳಲಾಗಿತ್ತು.

ವರದಿ ಲಿಂಕ್ ಇಲ್ಲಿದೆ 

ಜುಲೈ 14, 2019ರಂದು ಸುವರ್ಣನ್ಯೂಸ್ “ಮೈಸೂರು: 150 ವರ್ಷಗಳ ಹಿಂದಿನ ಬೃಹತ್ ನಂದಿ ವಿಗ್ರಹ ಪತ್ತೆ, ಗ್ರಾಮಸ್ಥರ ಮಾದರಿ ಕೆಲಸ” ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ಸುದ್ದಿಯಲ್ಲಿ “ಮೈಸೂರು ಜಿಲ್ಲೆಯ ಅರಸಿನಕೆರೆ ಗ್ರಾಮದಲ್ಲಿ ಬೃಹತ್ ನಂದಿ ವಿಗ್ರಹಗಳು ಸಿಕ್ಕಿವೆ. ಗ್ರಾಮದ ಜಮೀನಿನಲ್ಲಿ ಸುಮಾರು 12 ಅಡಿ ಮೀರಿದ ಎರಡು ನಂದಿ ವಿಗ್ರಹಗಳು ಪತ್ತೆಯಾಗಿವೆ. ಸುಮಾರು ನಲವತ್ತೈದು ವರ್ಷಗಳ ಹಿಂದಿಯೇ ಈ ವಿಗ್ರಹಗಳ ಕುರುಹು ಪತ್ತೆಯಾಗಿತ್ತು. ನಂದಿಯ ತಲೆ ಭಾಗ ಮಾತ್ರ ಪತ್ತೆಯಾಗಿತ್ತು. ಸದ್ಯ ಸಂಪೂರ್ಣ ವಿಗ್ರಹಗಳ ಉತ್ಖನನ ಕಾರ್ಯ ನಡೆದಿದೆ. ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಮಣ್ಣಿನಲ್ಲಿ ಹುದುಗಿದ್ದ ನಂದಿ ವಿಗ್ರಹಗಳನ್ನು ಮೇಲಕ್ಕೆ ತಂದಿದ್ದಾರೆ.” ಎಂದು ತಿಳಿಸಲಾಗಿದೆ.

ವರದಿ ಲಿಂಕ್ ಇಲ್ಲಿದೆ 

ನಾವು ನಡೆಸಿದ ಪರಿಶೀಲನೆಯಲ್ಲಿ, ಮೈಸೂರಿನಲ್ಲಿ ನಂದಿ ವಿಗ್ರಹಗಳು ಪತ್ತೆಯಾಗಿವೆ ಎಂಬುವುದು ನಿಜ ಎಂದು ಮಾಧ್ಯಮ ವರದಿಗಳಿಂದ ತಿಳಿದು ಬಂದಿದೆ. ಆದರೆ, ಇದು ಹಳೆಯ (2019) ಸುದ್ದಿಯಾಗಿದೆ.

ಇದನ್ನೂ ಓದಿ : FACT CHECK : ನೇಹಾ ಹಿರೇಮಠ್ ಮನೆಗೆ ಯಾವುದೇ ಕಾಂಗ್ರೆಸ್ ನಾಯಕರು ಭೇಟಿ ಕೊಟ್ಟಿಲ್ಲ ಎನ್ನುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಮಾಸ್ ನಾಯಕ ಸಿನ್ವಾರ್, ಇಸ್ರೇಲ್ ಪ್ರಧಾನಿ ನೆತನ್ಯಾಹು ವಿರುದ್ದ ಬಂಧನ ವಾರೆಂಟ್‌ಗೆ ಆಗ್ರಹ

0
ಗಾಝಾದ ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ (ಐಸಿಸಿ) ಕೋರ್ಟ್‌ನಿಂದ ಬಂಧನ ವಾರೆಂಟ್ ಕೋರುವುದಾಗಿ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಮ್ ಖಾನ್ ಸೋಮವಾರ ಸಿಎನ್‌ಎನ್‌ಗೆ...