Homeಮುಖಪುಟಮಹಾರಾಷ್ಟ್ರದಲ್ಲಿ ಮರಾಠರ ಪ್ರಭಾವ ಕೊನೆಗಾಣಿಸಲು ಬಯಸುತ್ತಿರುವ ಫಡ್ನವಿಸ್: ಮನೋಜ್ ಜಾರಂಗೆ ಪಾಟೀಲ್

ಮಹಾರಾಷ್ಟ್ರದಲ್ಲಿ ಮರಾಠರ ಪ್ರಭಾವ ಕೊನೆಗಾಣಿಸಲು ಬಯಸುತ್ತಿರುವ ಫಡ್ನವಿಸ್: ಮನೋಜ್ ಜಾರಂಗೆ ಪಾಟೀಲ್

- Advertisement -
- Advertisement -

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ರಾಜ್ಯದಲ್ಲಿ ಮರಾಠರ ಪ್ರಭಾವವನ್ನು ಕೊನೆಗಾಣಿಸಲು ಬಯಸುತ್ತಿದ್ದಾರೆ ಎಂದು ಮರಾಠ ಮೀಸಲಾತಿ ಹೋರಾಟದ ಮುಖಂಡ ಮನೋಜ್ ಜಾರಂಗೆ ಪಾಟೀಲ್ ಭಾನುವಾರ ಆರೋಪಿಸಿದ್ದಾರೆ.

ಫಡ್ನವೀಸ್ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜಾರಂಗೆ ಪಾಟೀಲ್, ಮುಂಬೈನಲ್ಲಿರುವ ಉಪಮುಖ್ಯಮಂತ್ರಿ ನಿವಾಸಕ್ಕೆ ಮೆರವಣಿಗೆ ನಡೆಸುವುದಾಗಿ ಬೆದರಿಕೆ ಎಚ್ಚರಿಕೆ ನೀಡಿದ್ದಾರೆ.

‘ಡಿಸಿಎಂ ಫಡ್ನವಿಸ್ ನನ್ನ ತ್ಯಾಗ ಬಯಸಿದ್ದಾರೆ. ನಾನು ಅವರ ಸಾಗರ್ ಬಂಗಲೆಗೆ ಹೋಗುತ್ತೇನೆ; ಫಡ್ನವೀಸ್ ಮರಾಠಾ ಸಮುದಾಯವನ್ನು ಮುಗಿಸಲು ಬಯಸಿದ್ದಾರೆ, ಫಡ್ನವಿಸ್ ತನ್ನ ಮತ್ತು ಮರಾಠರ ವಿರುದ್ಧ ಪಿತೂರಿ ನಡೆಸಿದ್ದಾರೆ’  ಎಂದು ಜಾರಂಗೆ ಪಾಟೀಲ್ ಹೇಳಿದರು.

‘ದೇವೇಂದ್ರ ಫಡ್ನವೀಸ್ ರಾಜ್ಯದಲ್ಲಿ ಮರಾಠ ಸಮುದಾಯದ ಪ್ರಭಾವವನ್ನು ಕೊನೆಗೊಳಿಸಲು ಬಯಸುತ್ತಾರೆ ಮತ್ತು ಸೇಜ್-ಸೋಯಾರೆ ಅಧಿಸೂಚನೆಯ ಅನುಷ್ಠಾನದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಫಡ್ನವಿಸ್ ಮುಂದೆ ಅಸಹಾಯಕರಾಗಿದ್ದಾರೆ. ಫಡ್ನವೀಸ್ ಅವರ ನೆರವಿಲ್ಲದೆ ರಾಜ್ಯದಲ್ಲಿ ಏನೂ ಆಗುವುದಿಲ್ಲ. ಫಡ್ನವಿಸ್ ಮರಾಠಾ ಸಮುದಾಯದಲ್ಲಿ ಒಡೆದು ಆಳುವ ರಾಜಕೀಯವನ್ನು ಬಳಸುತ್ತಿದ್ದಾರೆ; ಅಜಯ್ ಬರಸ್ಕರ್ ಅವರ ನಕಲಿ ಆರೋಪಗಳ ಹಿಂದೆ ಅವರು ಮಾಸ್ಟರ್ ಮೈಂಡ್ ಆಗಿದ್ದರು’ ಎಂದು ಪಾಟೀಲ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ; ಆನ್‌ಲೈನ್ ಗೇಮಿಂಗ್‌ ವ್ಯಸನ; ಜೀವ ವಿಮೆ ಹಣಕ್ಕಾಗಿ ತಾಯಿಯನ್ನು ಕೊಂದ ಮಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...