Homeಮುಖಪುಟಆನ್‌ಲೈನ್ ಗೇಮಿಂಗ್‌ ವ್ಯಸನ; ಜೀವ ವಿಮೆ ಹಣಕ್ಕಾಗಿ ತಾಯಿಯನ್ನು ಕೊಂದ ಮಗ

ಆನ್‌ಲೈನ್ ಗೇಮಿಂಗ್‌ ವ್ಯಸನ; ಜೀವ ವಿಮೆ ಹಣಕ್ಕಾಗಿ ತಾಯಿಯನ್ನು ಕೊಂದ ಮಗ

- Advertisement -
- Advertisement -

ಆನ್‌ಲೈನ್ ಗೇಮಿಂಗ್‌ಗೆ ವ್ಯಸನಿಯಾಗಿದ್ದ ವ್ಯಕ್ತಿಯೊಬ್ಬ ತನ್ನ ಜೀವ ವಿಮೆ ಪಾವತಿಯನ್ನು ಪಡೆಯಲು ಮತ್ತು ತನ್ನ ಭಾರಿ ಸಾಲವನ್ನು ತೀರಿಸುವ ಪ್ರಯತ್ನದಲ್ಲಿ ತನ್ನ ತಾಯಿಯನ್ನು ಕೊಲೆ ಮಾಡಿದ್ದಾನೆ ಎಂದು ಉತ್ತರ ಪ್ರದೇಶದ ಫತೇಪುರ್ ಪೊಲೀಸರು ಹೇಳಿದ್ದಾರೆ. ಹಿಮಾಂಶು ಎಂದು ಗುರುತಿಸಲಾದ ಆರೋಪಿಯು ₹50 ಲಕ್ಷ ವಿಮೆ ಪ್ರಯೋಜನವನ್ನು ಪಡೆಯಲು ತನ್ನ ತಾಯಿಯನ್ನು ಕೊಂದು ನಂತರ ಆಕೆಯ ಶವವನ್ನು ಯಮುನಾ ನದಿ ದಡದ ಬಳಿ ವಿಲೇವಾರಿ ಮಾಡುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ, ಹಿಮಾಂಶು ಜನಪ್ರಿಯ ಪ್ಲಾಟ್‌ಫಾರ್ಮ್ ‘ಝುಪಿ’ ಗೇಮಿಂಗ್‌ನಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದ. ಆತನ ಚಟದಿಂದಾಗಿ ಆಟ ಮುಂದುವರಿಸಲು ಪದೇ ಪದೇ ಹಣ ಸಾಲ ಮಾಡುವಂತೆ ಮಾಡಿದ್ದು, ಸುಮಾರು ₹4 ಲಕ್ಷ ಸಾಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುತ್ತಿರುವ ಸಾಲಗಾರರನ್ನು ಎದುರಿಸಲಾಗದೆ, ಆತ ತನ್ನ ಸಾಲಗಳನ್ನು ಮರುಪಾವತಿಸಲು ಯೋಜನೆಯನ್ನು ರೂಪಿಸಿದ್ದಾನೆ.

ಫತೇಪುರ್‌ನ ಹೆಚ್ಚುವರಿ ಎಸ್‌ಪಿ, ಹಿಮಾಂಶು ತನ್ನ ತಂದೆಯ ಚಿಕ್ಕಮ್ಮನ ಆಭರಣಗಳನ್ನು ಕದ್ದಿದ್ದು, ಅದರಿಂದ ಬಂದ ಹಣದಲ್ಲಿ ತನ್ನ ಹೆತ್ತವರಿಗೆ ತಲಾ ₹50 ಲಕ್ಷ ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಖರೀದಿಸಲು ಬಳಸಿದ್ದಾನೆ ಎಂದು ಹೇಳಿದರು. ನಂತರ, ಅವನ ತಂದೆ ಇಲ್ಲದಿದ್ದಾಗ, ಅವನು ತನ್ನ ತಾಯಿ ಪ್ರಭಾಳನ್ನು ಉಸಿರುಗಟ್ಟಿಸಿ ಸಾಯಿಸಿದ್ದು, ಬಳಿಕ ಸೆಣಬಿನ ಚೀಲದಲ್ಲಿ ಶವವನ್ನು ಬಚ್ಚಿಟ್ಟು ಟ್ರ್ಯಾಕ್ಟರ್ ಮೂಲಕ ಯಮುನಾ ನದಿ ತೀರಕ್ಕೆ ಸಾಗಿಸಿ ವಿಲೇವಾರಿ ಮಾಡಿದ್ದಾನೆ.

ಹಿಮಾಂಶುವಿನ ತಂದೆ ರೋಷನ್ ಸಿಂಗ್ ಚಿತ್ರಕೂಟ ದೇವಸ್ಥಾನದಿಂದ ಹಿಂದಿರುಗಿದಾಗ, ಅವರ ಪತ್ನಿ ಮತ್ತು ಮಗ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ್ದಾರೆ. ನೆರೆಹೊರೆಯವರೊಂದಿಗೆ ವಿಚಾರಿಸಿದಾಗ ಮತ್ತು ಸುತ್ತಮುತ್ತಲಿನ ಸಹೋದರನ ನಿವಾಸಕ್ಕೆ ಭೇಟಿ ನೀಡಿದ ನಂತರ, ಪ್ರಭಾ ಇರುವ ಸ್ಥಳ ಯಾರಿಗೂ ತಿಳಿದಿಲ್ಲ ಎಂದು ತಿಳಿದುಬಂದಿದೆ. ನದಿಯ ಬಳಿ ಟ್ರ್ಯಾಕ್ಟರ್‌ನಲ್ಲಿ ಹಿಮಾಂಶುವನ್ನು ನೋಡಿದ ನೆರೆಹೊರೆಯವರು ರೋಷನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ, ಪ್ರಭಾ ಅವರ ದೇಹವನ್ನು ಯಮುನಾ ನದಿಯ ಸಮೀಪದಿಂದ ವಶಪಡಿಸಿಕೊಳ್ಳಲಾಯಿತು. ಕೂಡಲೇ ಕೊಲೆ ಮಾಡಿದ್ದ ಮಗನನ್ನು ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಹಿಮಾಂಶು ತನ್ನ ಸಾಲದ ಹೊರೆಯನ್ನು ನಿವಾರಿಸುವ ಉದ್ದೇಶದಿಂದ ತನ್ನ ತಾಯಿಯನ್ನು ಕೊಲ್ಲಲು ರೂಪಿಸಿದ ಆಘಾತಕಾರಿ ಯೋಜನೆಯನ್ನು ಬಹಿರಂಗಪಡಿಸಿದ್ದಾನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read